ಭಾರತದಲ್ಲಿ ಯಾವುದಕ್ಕೂ ಕೊರತೆಯಿಲ್ಲ, ಆಟೋಮೊಬೈಲ್ ಕ್ಷೇತ್ರದಲ್ಲಿ 3ನೇ ಸ್ಥಾನ: ಸಿಡ್ನಿಯಲ್ಲಿ ಪ್ರಧಾನಿ ಮೋದಿ
ಆರ್ಥಿಕತೆಯಲ್ಲಿ ಭಾರತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರತ ಇಡೀ ಜಗತ್ತಿನಲ್ಲಿಯೇ ಮೂರನೇ ಸ್ಥಾನದಲ್ಲಿದ್ದು, ಇಡೀ ಜಗತ್ತು ಈಗ ಭಾರತದತ್ತ ತಿರುಗಿ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Published: 23rd May 2023 03:32 PM | Last Updated: 23rd May 2023 04:09 PM | A+A A-

ಪ್ರಧಾನಿ ನರೇಂದ್ರ ಮೋದಿ
ಸಿಡ್ನಿ: ಆರ್ಥಿಕತೆಯಲ್ಲಿ ಭಾರತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರತ ಇಡೀ ಜಗತ್ತಿನಲ್ಲಿಯೇ ಮೂರನೇ ಸ್ಥಾನದಲ್ಲಿದ್ದು, ಇಡೀ ಜಗತ್ತು ಈಗ ಭಾರತದತ್ತ ತಿರುಗಿ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಿಡ್ನಿಯ ಖುಡೋಸ್ ಬ್ಯಾಂಕ್ ಅರೆನಾ ಸ್ಟೇಡಿಯಂ ತುಂಬಾ ಕಿಕ್ಕಿರಿದು ತುಂಬಿದ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರದಾನಿ ಮೋದಿ, ಭಾರತದಲ್ಲಿ ಸಾಮರ್ಥ್ಯ, ಸಂಪನ್ಮೂಲಕ್ಕೆ ಕೊರತೆ ಇಲ್ಲ, ಭಾರತ ಟ್ಯಾಲೆಂಟ್ ಪ್ಯಾಕ್ಟರಿ ಆಗಿದೆ ಎಂದರು.
ಜಾಗತಿಕ ಆರ್ಥಿಕತೆಯಲ್ಲಿ ಮುಂಚೂಣಿ ರಾಷ್ಟ್ರವೆಂದು ಐಎಂಎಫ್ ಪರಿಗಣಿಸಿದೆ. ಇಂದು ಹಲವಾರು ದೇಶಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ತೊಂದರೆಯಲ್ಲಿದೆ ಆದರೆ ಭಾರತದ ಬ್ಯಾಂಕ್‌ಗಳ ಬಲವನ್ನು ಎಲ್ಲೆಡೆ ಪ್ರಶಂಸಿಸಲಾಗುತ್ತಿದೆ: 100 ವರ್ಷಗಳಿಗೊಮ್ಮೆ ಎದುರಾಗುವ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಭಾರತ ಕಳೆದ ವರ್ಷ ದಾಖಲೆಯ ರಫ್ತು ಮಾಡಿದೆ. ನಮ್ಮ ವಿದೇಶೀ ವಿನಿಮಯ ಹೊಸ ಎತ್ತರಕ್ಕೆ ಏರುತ್ತಿದೆ. ಜಾಗತಿಕ ಒಳಿತಿಗಾಗಿ ಭಾರತ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ನಮ್ಮ ಡಿಜಿಟಲ್ ತಂತ್ರಜ್ಞಾನದ ಪಾಲಿದೆ. ಭಾರತದ ಫಿನ್‌ಟೆಕ್ ಕ್ರಾಂತಿಯ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ ಎಂದರು.
#WATCH | At the community event in Sydney, Australia, Prime Minister Narendra Modi says, "A new Indian Consulate will be opened soon in Brisbane," pic.twitter.com/uGejFH5uRp
— ANI (@ANI) May 23, 2023
2014 ರಲ್ಲಿ ಇಲ್ಲಿಗೆ ಬಂದಾಗ ಮತ್ತೆ ಬರುವುದಾಗಿ ಭರವಸೆ ನೀಡಿದ್ದೆ. ಅದರಂತೆ ಈಗ ಮತ್ತೊಮ್ಮೆ ಸಿಡ್ನಿಯಲ್ಲಿದ್ದೇನೆ. ಈ ಹಿಂದೆ, ಭಾರತ ಮತ್ತು ಆಸ್ಟ್ರೇಲಿಯಾ ಸಂಬಂಧವನ್ನು ಕಾಮನ್‌ವೆಲ್ತ್, ಕ್ರಿಕೆಟ್ ಮತ್ತು ಕರಿಗಳಿಂದ ವ್ಯಾಖ್ಯಾನಿಸಲಾಗುತಿತ್ತು. ನಂತರ 'ಪ್ರಜಾಪ್ರಭುತ್ವ, ಅನಿವಾಸಿ ಭಾರತೀಯರು ಮತ್ತು ದೋಸ್ತಿಯಿಂದ ವ್ಯಾಖ್ಯಾನಿಸಲಾಗಿದೆ ಎಂದರು. ಸಂಬಂಧವು ಇಂಧನ, ಆರ್ಥಿಕತೆ ಮತ್ತು ಶಿಕ್ಷಣದ ಮೇಲೆ ಅವಲಂಬಿತವಾಗಿದ್ದರೂ ಉಭಯ ದೇಶಗಳ ಸಂಬಂಧವು ಇದನ್ನು ಮೀರಿದೆ ಅದು ಪರಸ್ಪರ ನಂಬಿಕೆ ಮತ್ತು ಪರಸ್ಪರ ಗೌರವವಾಗಿದೆ ಎಂದು ತಿಳಿಸಿದರು.
#WATCH | Prime Minister Narendra Modi and Australian Prime Minister Anthony Albanese arrive at the Qudos Bank Arena in Sydney amid a rousing welcome.
— ANI (@ANI) May 23, 2023
PM Modi will address the Indian diaspora here. pic.twitter.com/OnyrLbTs7K
ಮಾರ್ಚ್‌ನಲ್ಲಿ ಕೈಗೊಂಡಿದ್ದ ಭಾರತ ಪ್ರವಾಸ ಮರೆಯಲಾಗದ ಕ್ಷಣವಾಗಿತ್ತು. ಹೋದಲ್ಲೆಲ್ಲಾ, ನಾನು ಆಸ್ಟ್ರೇಲಿಯಾ ಮತ್ತು ಭಾರತದ ಜನರ ನಡುವಿನ ಆಳವಾದ ಸಂಬಂಧವನ್ನು ಅನುಭವಿಸಿದೆ. ನೀವು ಭಾರತವನ್ನು ಅರ್ಥಮಾಡಿಕೊಳ್ಳಲು ಬಯಸಿದರೆ, ರೈಲು ಮತ್ತು ಬಸ್‌ನಲ್ಲಿ ಪ್ರಯಾಣಿಸಿ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದರು.
ಇದನ್ನೂ ಓದಿ: ಪಾಕಿಸ್ತಾನ ಕೂಡಾ ಮೋದಿಯನ್ನು ಪ್ರೀತಿಸುತ್ತದೆ, ಅವರಂತಹ ನಾಯಕನನ್ನು ಬಯಸುತ್ತದೆ- ಅನುಪ್ ಜಲೋಟಾ
ಇದಕ್ಕೂ ಮುನ್ನಾ ವೇದ ಮಂತ್ರಗಳ ಜಯಘೋಷದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು
#WATCH | Prime Minister Narendra Modi welcomed at Qudos Bank Arena in Sydney amid Vedic chanting and other traditional ways at Qudos Bank Arena in Sydney.
— ANI (@ANI) May 23, 2023
Australian Prime Minister Anthony Albanese is also with PM Modi. pic.twitter.com/onjx7Yq2f1