ಬ್ರಿಟನ್ ಪ್ರಧಾನಿ ರಿಷಿ ಸುನಕ್ ನಿವಾಸದ ಗೇಟ್‌ಗೆ ಕಾರು ಡಿಕ್ಕಿ, ಓರ್ವನ ಬಂಧನ
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಅಧಿಕೃತ ನಿವಾಸ ಹಾಗೂ ಕಚೇರಿ, ಲಂಡನ್‌ನ 10 ಡೌನಿಂಗ್ ಸ್ಟ್ರೀಟ್ ಕಟ್ಟಡದ ಗೇಟ್‌ಗೆ ಕಾರು ಡಿಕ್ಕಿ ಹೊಡೆದಿದ್ದು, ಕಾರಿನ ಚಾಲಕನನ್ನು ಬಂಧಿಸಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸರು ಗುರುವಾರ...
Published: 25th May 2023 11:23 PM | Last Updated: 27th May 2023 02:38 PM | A+A A-

ರಿಷಿ ಸುನಕ್ ನಿವಾಸದ ಗೇಟ್‌ಗೆ ಕಾರು ಡಿಕ್ಕಿ
ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಅಧಿಕೃತ ನಿವಾಸ ಹಾಗೂ ಕಚೇರಿ, ಲಂಡನ್‌ನ 10 ಡೌನಿಂಗ್ ಸ್ಟ್ರೀಟ್ ಕಟ್ಟಡದ ಗೇಟ್‌ಗೆ ಕಾರು ಡಿಕ್ಕಿ ಹೊಡೆದಿದ್ದು, ಕಾರಿನ ಚಾಲಕನನ್ನು ಬಂಧಿಸಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸರು ಗುರುವಾರ ತಿಳಿಸಿದ್ದಾರೆ.
'ಸ್ಥಳೀಯ ಕಾಲಮಾನ ಸುಮಾರು 16:20 ಗಂಟೆಗೆ ವೈಟ್‌ಹಾಲ್‌ನ ಡೌನಿಂಗ್ ಸ್ಟ್ರೀಟ್‌ನ ಗೇಟ್‌ಗೆ ಕಾರೊಂದು ಡಿಕ್ಕಿ ಹೊಡೆದಿದೆ' ಎಂದು ಮೆಟ್ರೋಪಾಲಿಟನ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪರಾಧ ಕೃತ್ಯ ಎಸಗುವ ಉದ್ದೇಶ ಮತ್ತು ಅಪಾಯಕಾರಿ ಚಾಲನೆಯ ಅನುಮಾನದ ಮೇಲೆ ಶಸ್ತ್ರಸಜ್ಜಿತ ಪೊಲೀಸ್ ಅಧಿಕಾರಿಗಳು ಚಾಲಕನನ್ನು ಬಂಧಿಸಿದ್ದಾರೆ. ಆತನಿಗೆ ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ವಿಚಾರಣೆ ಮುಂದುವರಿದಿದೆ' ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಓದಿ: ನನ್ನ ಮಗಳು ಅಕ್ಷತಾ ಮೂರ್ತಿ ತನ್ನ ಗಂಡನನ್ನು ಪ್ರಧಾನಿಯನ್ನಾಗಿ ಮಾಡಿದ್ದಾಳೆ: ಸುಧಾ ಮೂರ್ತಿ
ಡೌನಿಂಗ್ ಸ್ಟ್ರೀಟ್‌ನ ಅಧಿಕಾರಿಗಳಿಗೆ ಮನೆಯೊಳಗೆ ಇರುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ ಮತ್ತು ಘಟನೆಯ ಸಮಯದಲ್ಲಿ ರಿಷಿ ಸುನಕ್ ಅವರು ಕಚೇರಿಯಲ್ಲಿದ್ದರೇ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ ಪ್ರಧಾನಿ ನಿವಾಸದ ಗೇಟ್ ಗೆ ಕಾರು ನುಗ್ಗಿಸಿದ ಕಾರಣ ಭದ್ರತೆ ಹೆಚ್ಚಿಸಲಾಗಿದೆ.