ಅಧಿಕೃತ: ಜಗತ್ತಿನ 4 ನೇ ದೊಡ್ಡ ಆರ್ಥಿಕತೆ ಜರ್ಮನಿಯಲ್ಲಿ ಆರ್ಥಿಕ ಹಿಂಜರಿತ!

ಗುರುವಾರದಂದು ಯುರೋಪ್ ನ ಅತಿ ದೊಡ್ಡ ಆರ್ಥಿಕತೆ ಹಾಗೂ ಜಗತ್ತಿನ 4 ನೇ ಅತಿ ದೊಡ್ಡ ಆರ್ಥಿಕತೆಯಾಗಿರುವ ಜರ್ಮನಿ ಆರ್ಥಿಕ ಹಿಂಜರಿತ ಅಥವಾ ರಿಸೆಷನ್ ಎದುರಿಸುತ್ತಿರುವುದನ್ನು ಖಚಿತಪಡಿಸಿದೆ. 
ಜರ್ಮನಿ (ಸಂಗ್ರಹ ಚಿತ್ರ)
ಜರ್ಮನಿ (ಸಂಗ್ರಹ ಚಿತ್ರ)

ಬರ್ಲಿನ್: ಗುರುವಾರದಂದು ಯುರೋಪ್ ನ ಅತಿ ದೊಡ್ಡ ಆರ್ಥಿಕತೆ ಹಾಗೂ ಜಗತ್ತಿನ 4 ನೇ ಅತಿ ದೊಡ್ಡ ಆರ್ಥಿಕತೆಯಾಗಿರುವ ಜರ್ಮನಿ ಆರ್ಥಿಕ ಹಿಂಜರಿತ ಅಥವಾ ರಿಸೆಷನ್ ಎದುರಿಸುತ್ತಿರುವುದನ್ನು ಖಚಿತಪಡಿಸಿದೆ. 

ಇತ್ತ ಡೀಫಾಲ್ಟ್ ಆಗುವ ಭೀತಿ ಎದುರಿಸುತ್ತಿದ್ದ ಅಮೇರಿಕಾ, ಡಾಲರ್ ಮೌಲ್ಯದಲ್ಲಿ ಚೇತರಿಸಿಕೊಂಡಿದ್ದು ಸೇಫ್ ಹೆವನ್ ಡಿಮಾಂಡ್ ಯಿಂದಾಗಿ 2 ತಿಂಗಳಲ್ಲೇ ಗರಿಷ್ಠ ಏರಿಕೆ ಕಂಡಿದೆ. ಯುರೋಪ್ ನಲ್ಲಿ ಆರ್ಥಿಕ ದುರ್ಬಲತೆಯ ಸೂಚನೆಗಳು ಲಭಿಸುತ್ತಿದ್ದು, ಡಾಲರ್ ವಿರುದ್ಧ ಬಹು-ತಿಂಗಳ ಕನಿಷ್ಠ ಮಟ್ಟಕ್ಕೆ ಯುರೋ ಕುಸಿದಿದೆ.

ಜರ್ಮನಿಯಲ್ಲಿ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕತೆ ಸ್ವಲ್ಪಮಟ್ಟಿಗೆ ಕುಸಿದಿದ್ದು, ಮತ್ತು ಆ ಮೂಲಕ 2022 ರ ನಾಲ್ಕನೇ ತ್ರೈಮಾಸಿಕದಲ್ಲಿ ಋಣಾತ್ಮಕ ಬೆಳವಣಿಗೆಯ ನಂತರ ಹಿಂಜರಿತದಲ್ಲಿತ್ತು. "ನಾವು ಈ ವಾರ ಕೆಲವು ವಿಭಿನ್ನ ಕ್ರಾಸ್-ಅಟ್ಲಾಂಟಿಕ್ ಮ್ಯಾಕ್ರೋ ಡೇಟಾವನ್ನು ನೋಡಿದ್ದೇವೆ ಮತ್ತು ಜರ್ಮನಿಯ ಆರ್ಥಿಕತೆಯ ಆವೇಗ ಅಚ್ಚರಿಯ ರೀತಿಯಲ್ಲಿ ದುರ್ಬಲವಾಗಿದೆ" ಎಂದು ಡಾನ್ಸ್ಕೆ ಬ್ಯಾಂಕ್‌ನ ಮೆಲಿನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com