ಇಸ್ರೇಲ್-ಹಮಾಸ್ ಯುದ್ಧ: ಇಸ್ರೇಲ್‌ನಲ್ಲಿ 600 ದಾಟಿದ ನಾಗರಿಕರ ಸಾವಿನ ಸಂಖ್ಯೆ, ಗಾಜಾದಲ್ಲಿ 300 ಕ್ಕೂ ಹೆಚ್ಚು ಸಾವು

ಇಸ್ರೇಲಿ ಸೈನಿಕರು ನಿನ್ನೆ ಭಾನುವಾರ ದಕ್ಷಿಣ ಇಸ್ರೇಲ್‌ನ ಬೀದಿಗಳಲ್ಲಿ ಹಮಾಸ್ ಉಗ್ರರ ವಿರುದ್ಧ ಅಕ್ಷಶಃ ಯುದ್ಧಕ್ಕಿಳಿದಿದ್ದರು. ಗಾಜಾದಲ್ಲಿ ಕಟ್ಟಡಗಳನ್ನು ನೆಲಸಮಗೊಳಿಸಿದ ಪ್ರತೀಕಾರದ ದಾಳಿಯನ್ನು ಪ್ರಾರಂಭಿಸಿದರು, ಆದರೆ ಉತ್ತರ ಇಸ್ರೇಲ್‌ನಲ್ಲಿ ಲೆಬನಾನ್‌ನ ಹಿಜ್ಬುಲ್ಲಾ ಉಗ್ರಗಾಮಿ ಗುಂಪಿನೊಂದಿಗೆ ನಡೆದ ದಾಳಿ ದೊಡ್ಡ ಯುದ್ಧಕ್ಕೆ ದಾರಿಮಾಡಿಕೊಟ್ಟಿತು. 
ಗಾಜಾ ನಗರದಲ್ಲಿ ಇಸ್ರೇಲಿ ವೈಮಾನಿಕ ದಾಳಿ ನಡೆಸಿದ ನಂತರ ಪ್ಯಾಲೇಸ್ಟಿನಿಯನ್ ಅಪಾರ್ಟ್‌ಮೆಂಟ್ ಟವರ್‌ನಲ್ಲಿ ಸ್ಫೋಟದಿಂದ ಹೊಗೆ ಬರುತ್ತಿರುವುದು
ಗಾಜಾ ನಗರದಲ್ಲಿ ಇಸ್ರೇಲಿ ವೈಮಾನಿಕ ದಾಳಿ ನಡೆಸಿದ ನಂತರ ಪ್ಯಾಲೇಸ್ಟಿನಿಯನ್ ಅಪಾರ್ಟ್‌ಮೆಂಟ್ ಟವರ್‌ನಲ್ಲಿ ಸ್ಫೋಟದಿಂದ ಹೊಗೆ ಬರುತ್ತಿರುವುದು
Updated on

ಟೆಲ್ ಅವಿವ್: ಇಸ್ರೇಲಿ ಸೈನಿಕರು ನಿನ್ನೆ ಭಾನುವಾರ ದಕ್ಷಿಣ ಇಸ್ರೇಲ್‌ನ ಬೀದಿಗಳಲ್ಲಿ ಹಮಾಸ್ ಉಗ್ರರ ವಿರುದ್ಧ ಅಕ್ಷಶಃ ಯುದ್ಧಕ್ಕಿಳಿದಿದ್ದರು. ಗಾಜಾದಲ್ಲಿ ಕಟ್ಟಡಗಳನ್ನು ನೆಲಸಮಗೊಳಿಸಿದ ಪ್ರತೀಕಾರದ ದಾಳಿಯನ್ನು ಪ್ರಾರಂಭಿಸಿದರು, ಆದರೆ ಉತ್ತರ ಇಸ್ರೇಲ್‌ನಲ್ಲಿ ಲೆಬನಾನ್‌ನ ಹಿಜ್ಬುಲ್ಲಾ ಉಗ್ರಗಾಮಿ ಗುಂಪಿನೊಂದಿಗೆ ನಡೆದ ದಾಳಿ ದೊಡ್ಡ ಯುದ್ಧಕ್ಕೆ ದಾರಿಮಾಡಿಕೊಟ್ಟಿತು. 

ಗಾಜಾದಿಂದ ಅನಿರೀಕ್ಷಿತ ದಾಳಿಯ 24 ಗಂಟೆಗಳ ನಂತರ ಇನ್ನೂ ದಾಳಿ ಮುಂದುವರಿದಿದೆ, ಇದರಲ್ಲಿ ಹಮಾಸ್ ಉಗ್ರಗಾಮಿಗಳು ಇಸ್ರೇಲ್‌ನ ಭದ್ರತಾ ತಡೆಗೋಡೆಯನ್ನು ಭೇದಿಸಿ ಮತ್ತು ಹತ್ತಿರದ ಸ್ಥಳಗಳ ಮೂಲಕ ಆಗಮಿಸಿದರು. 

ಇಸ್ರೇಲ್‌ನಲ್ಲಿ ಕನಿಷ್ಠ 600 ಜನರು ಮೃತಪಟ್ಟಿದ್ದಾರೆ. ಗಾಜಾದಲ್ಲಿ 300 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಹತ್ತಾರು ಸೈನಿಕರು ಮತ್ತು ಪೊಲೀಸರು ಸೇರಿದ್ದಾರೆ. ಉಗ್ರಗಾಮಿಗಳು ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಒಳಗೊಂಡಂತೆ ಕರಾವಳಿ ಗಾಜಾ ಎನ್‌ಕ್ಲೇವ್‌ಗೆ ಬಂಧಿತರನ್ನು ಮರಳಿ ಕರೆದೊಯ್ದರು.

ಹೆಚ್ಚಿನ ಸಾವಿನ ಸಂಖ್ಯೆ, ಬಂಧಿತರ ಸಂಖ್ಯೆಯಲ್ಲಿ ಹೆಚ್ಚಳ ದಾಳಿಗೆ ನಿಧಾನವಾದ ಪ್ರತಿಕ್ರಿಯೆಯು ಪ್ರಮುಖ ಗುಪ್ತಚರ ವೈಫಲ್ಯವನ್ನು ತೋರಿಸುತ್ತದೆ. ಇಸ್ರೇಲ್ ದಶಕಗಳಿಂದ ನಿಯಂತ್ರಿಸಲ್ಪಟ್ಟಿರುವ ಸಣ್ಣ, ಜನನಿಬಿಡ ಪ್ರದೇಶದಲ್ಲಿ ದಾಳಿ ಸಾವು ನೋವಿನ ಸಂಖ್ಯೆಯನ್ನು ಹೆಚ್ಚಿಸಿದೆ. ಮಾರಣಾಂತಿಕ ದಾಳಿಯಲ್ಲಿ 2,048 ಕ್ಕೂ ಹೆಚ್ಚು ಗಾಯಾಳುಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಇಸ್ರೇಲ್ ಮೂಲದ ಮಾಧ್ಯಮವು ಹೇಳಿಕೊಂಡಿದೆ, ಇದರಲ್ಲಿ 20 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು 330 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ತಿಳಿಸಿದೆ. 

ನಿನ್ನೆ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಐಡಿಎಫ್ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ, ಇಸ್ರೇಲಿ ಸಮುದಾಯಗಳಲ್ಲಿನ ಹೋರಾಟವನ್ನು ಕೊನೆಗೊಳಿಸುವುದು ಮತ್ತು ಗಾಜಾ ಮತ್ತು ಇಸ್ರೇಲ್ ನ್ನು ವಿಭಜಿಸುವ ಬೇಲಿಯಲ್ಲಿನ ಉಲ್ಲಂಘನೆಗಳನ್ನು ನಿಯಂತ್ರಿಸುವುದು ನಮ್ಮ ಆದ್ಯತೆಗಳಾಗಿವೆ ಎಂದರು. 

ಇಸ್ರೇಲಿ ತುರ್ತು ಸೇವೆಗಳ ಪ್ರಕಾರ, ಸ್ಡೆರೋಟ್ ನಗರದಲ್ಲಿ ಮತ್ತು ಸುತ್ತಮುತ್ತಲಿನ ರಾಕೆಟ್ ದಾಳಿಗಳಲ್ಲಿ ಹಲವರು ಗಾಯಗೊಂಡಿದ್ದಾರೆ. ವಿವಿಧ ನಾಗರಿಕರು ಹಾಗೂ (ಇಸ್ರೇಲ್ ರಕ್ಷಣಾ ಪಡೆಗಳು) ಐಡಿಎಫ್ ಸೈನಿಕರನ್ನು ಅಪಹರಿಸಿ ಗಾಜಾಕ್ಕೆ ಕರೆತರಲಾಗಿದೆ.

ಪ್ರತೀಕಾರದ ದಾಳಿಯಲ್ಲಿ, ಇಸ್ರೇಲ್ ರಕ್ಷಣಾ ಪಡೆಗಳು ಮತ್ತು ಹಮಾಸ್ ನಡುವಿನ ಗುಂಡಿನ ಕಾಳಗ ತೀವ್ರಗೊಂಡಿದ್ದು, ಇದುವರೆಗೆ ಕನಿಷ್ಠ 313 ಪ್ಯಾಲೆಸ್ಟೀನಿಯಾದವರು ಮೃತಪಟ್ಟಿದ್ದಾರೆ. ಗಾಜಾ ಪಟ್ಟಿಯಲ್ಲಿ ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯವು ಸಾವಿನ ಸಂಖ್ಯೆಯನ್ನು ದೃಢಪಡಿಸಿದೆ ಎಂದು ಗಾಜಾ ಪಟ್ಟಿಯಲ್ಲಿ 313 ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟರು ಮತ್ತು 1,990 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದರು.

ಇಸ್ರೇಲ್‌ನ ಪ್ರತೀಕಾರದ ದಾಳಿಯ ಪರಿಣಾಮವಾಗಿ ಅವರಲ್ಲಿ ಹೆಚ್ಚಿನವರು ಗಾಜಾ ಪಟ್ಟಿಯಲ್ಲಿ ಕೊಲ್ಲಲ್ಪಟ್ಟರು. ಇಸ್ರೇಲ್ ಪ್ರದೇಶದ ಹಲವಾರು ಸ್ಥಳಗಳಲ್ಲಿ ಗುಂಡಿನ ಚಕಮಕಿಗಳು ನಡೆಯುತ್ತಿವೆ ಎಂದು ಇಸ್ರೇಲ್ ಮತ್ತು ಹಮಾಸ್ ಎರಡೂ ಹೇಳಿಕೊಂಡಿವೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಟೆಲ್ ಅವಿವ್‌ನಲ್ಲಿರುವ ಐಡಿಎಫ್ ಪ್ರಧಾನ ಕಚೇರಿಯಲ್ಲಿ ಭದ್ರತಾ ಮೌಲ್ಯಮಾಪನವನ್ನು ನಡೆಸುತ್ತಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ತಿಳಿಸಿದೆ. ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಐಡಿಎಫ್ ಮುಖ್ಯಸ್ಥ ಹೆರ್ಜಿ ಹಲೇವಿ ಮತ್ತು ಇತರ ಹಿರಿಯ ಭದ್ರತಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com