ಇಸ್ರೇಲ್ ನಲ್ಲಿ ಹಮಾಸ್ ಉಗ್ರರಿಂದ 40 ಶಿಶುಗಳ ಹತ್ಯೆ!

ಇಸ್ರೇಲ್- ಹಮಾಸ್ ಉಗ್ರರ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದು, ಹಮಾಸ್ ಉಗ್ರ ಸಂಘಟನೆ ಇಸ್ರೇಲ್ ನಲ್ಲಿ ಕನಿಷ್ಠ 40 ಶಿಶುಗಳ ಹತ್ಯೆ ಮಾಡಿದೆ. 
ಇಸ್ರೇಲ್-ಹಮಾಸ್ ಬಂಡುಕೋರರ ಯುದ್ಧ
ಇಸ್ರೇಲ್-ಹಮಾಸ್ ಬಂಡುಕೋರರ ಯುದ್ಧ

ಟೆಲ್ ಅವೀವ್: ಇಸ್ರೇಲ್- ಹಮಾಸ್ ಉಗ್ರರ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದು, ಹಮಾಸ್ ಉಗ್ರ ಸಂಘಟನೆ ಇಸ್ರೇಲ್ ನಲ್ಲಿ ಕನಿಷ್ಠ 40 ಶಿಶುಗಳ ಹತ್ಯೆ ಮಾಡಿದೆ. 

ಇಸ್ರೇಲ್ ನ ಐ24 ನ್ಯೂಸ್ ವರದಿಯ ಪ್ರಕಾರ ಇಸ್ರೇಲ್ ನಲ್ಲಿ ಹಮಾಸ್ ನಡೆಸಿರುವ ನರಮೇಧ ಊಹೆಗೂ ನಿಲುಕದ್ದಾಗಿದೆ. 

ಸಂಘರ್ಷ ಸ್ಥಿತಿ ಹಿನ್ನೆಲೆಯಲ್ಲಿ ಇಸ್ರೇಲ್ ನ ಯೋಧರನ್ನು ಪೂರ್ಣಪ್ರಮಾಣದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದ್ದು, ದೇಶದ ಎಲ್ಲಾ ಯೋಧರೂ ಶಸ್ತ್ರಸಜ್ಜಿತರಾಗಿ ಪ್ರತಿದಾಳಿಗೆ ಮುಂದಾಗಿದ್ದಾರೆ. ಈ ವೇಳೆ ಯೋಧರಿಗೆ ಹಮಾಸ್ ಉಗ್ರರು ಶಿಶುಗಳ ಶಿರಚ್ಛೇದ ಮಾಡಿರುವ ದೃಶ್ಯಗಳು ಕಂಡುಬಂದಿವೆ, ಇನ್ನೂ ಕೆಲವೆಡೆ ಇಡೀ ಕುಟುಂಬಗಳನ್ನೇ ಹತ್ಯೆ ಮಾಡಲಾಗಿದೆ. 

ಕನಿಷ್ಟ 900 ಇಸ್ರೇಲಿಗಳು ಈ ಸಂಘರ್ಷದಲ್ಲಿ ಮೃತಪಟ್ಟಿದ್ದು, 2,616 ಮಂದಿ ಗಾಯಗೊಂಡಿದ್ದಾರೆ. ಅ.07 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com