ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಕಾರ್ಯಾಚರಣೆ: ಭಾರೀ ಸಂಘರ್ಷ, ಶಸ್ತ್ರಸಜ್ಜಿತ ಹಮಾಸ್ ಉಗ್ರರಿಂದ ಗುಂಡಿನ ಚಕಮಕಿ

ಗಾಜಾಪಟ್ಟಿ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಸೇನೆ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರೀ ಸಂಘರ್ಷ ಸಂಭವಿಸಿದ್ದು, ಶಸ್ತ್ರಸಜ್ಜಿತ ಹಮಾಸ್ ಉಗ್ರರು ಇಸ್ರೇಲ್ ಸೇನೆಯ ವಿರುದ್ಧ ಗುಂಡಿನ ಸಂಘರ್ಷ ನಡೆಸಿದ್ದಾರೆ.
ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಕಾರ್ಯಾಚರಣೆ
ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಕಾರ್ಯಾಚರಣೆ
Updated on

ಟೆಲ್ ಅವೀವ್: ಗಾಜಾಪಟ್ಟಿ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಸೇನೆ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರೀ ಸಂಘರ್ಷ ಸಂಭವಿಸಿದ್ದು, ಶಸ್ತ್ರಸಜ್ಜಿತ ಹಮಾಸ್ ಉಗ್ರರು ಇಸ್ರೇಲ್ ಸೇನೆಯ ವಿರುದ್ಧ ಗುಂಡಿನ ಸಂಘರ್ಷ ನಡೆಸಿದ್ದಾರೆ.

ವಾಯುವ್ಯ ಸಮಾರಿಯಾದಲ್ಲಿರುವ ನೂರ್ ಶಮ್ಸ್ ನಿರಾಶ್ರಿತರ ಶಿಬಿರದಲ್ಲಿ ಗುರುವಾರ ಮಧ್ಯಾಹ್ನ ಇಸ್ರೇಲಿ ಪಡೆಗಳು ಸಶಸ್ತ್ರ ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ಆರಂಭಿಸಿವೆ. ಈ ಪ್ರದೇಶದಲ್ಲಿ ಹೆಲಿಕಾಪ್ಟರ್ ಗನ್‌ಶಿಪ್ ಕೂಡ ಕಾರ್ಯನಿರ್ವಹಿಸುತ್ತಿದ್ದು, ಇಸ್ರೇಲಿ ಕಾರ್ಯಾಚರಣೆಯ ಚಟುವಟಿಕೆಗಳ ಸಮಯದಲ್ಲಿ ಭಾರೀ ಘರ್ಷಣೆಗಳು ನಡೆಯುತ್ತಿದ್ದು, ಇದೇ ಪ್ರದೇಶದಲ್ಲಿ ಹಮಾಸ್ ನ ಮೋಸ್ಟ್ ವಾಂಟೆಂಡ್ ಉಗ್ರರು ಅವಿತು ಕಾರ್ಯಾಚರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ಇಸ್ರೇಲಿ ಪಡೆಗಳು ತುಲ್ಕರ್ಮ್ ಬಳಿಯ ನಿರಾಶ್ರಿತರ ಶಿಬಿರದಲ್ಲಿ ಹಮಾಸ್ ಉಗ್ರ ಸಂಘಟನೆಯ ಐವರು ವಾಂಟೆಡ್ ಶಂಕಿತ ಉಗ್ರರನ್ನು ಬಂಧಿಸಿದ್ದು, ಒಟ್ಟಾರೆ 63 ಹಮಾಸ್ ಭಯೋತ್ಪಾದಕರು ಸೇರಿದಂತೆ 80 ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಲಾಗಿದೆ. ಇಸ್ರೇಲ್ ಭದ್ರತಾ ಸಂಸ್ಥೆ (ಶಿನ್ ಬೆಟ್) ಮತ್ತು ಇಸ್ರೇಲ್ ಬಾರ್ಡರ್ ಪೋಲಿಸ್‌ನ ಸಮನ್ವಯದಲ್ಲಿ ಗುರುವಾರ ರಾತ್ರಿ ಜುಡಿಯಾ ಮತ್ತು ಸಮಾರಿಯಾದಾದ್ಯಂತ 'ವ್ಯಾಪಕ-ಪ್ರಮಾಣದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ' ನಡೆದಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ತಿಳಿಸಿವೆ. 

ಅಹ್ಮದ್ ಯಾಸಿನ್ ಜಿಡಾನ್ ಕಳೆದ ಜುಲೈನಲ್ಲಿ ಕೆಡುಮಿಮ್‌ನಲ್ಲಿ ಗುಂಡಿನ ದಾಳಿ ನಡೆಸಿ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ 22 ವರ್ಷದ ಶಿಲೋ ಯೋಸೆಫ್ ಅಮೀರ್ ನನ್ನು ಕೊಂದು ಹಾಕಿದ್ದರು. ಇಸ್ರೇಲಿ ಪಡೆಗಳು ಮೋಡೀನ್‌ನ ಉತ್ತರದಲ್ಲಿರುವ ಕಿಬ್ಯಾ ಗ್ರಾಮದಲ್ಲಿ ಹಮಾಸ್ ಭಯೋತ್ಪಾದಕರ ಮನೆಯನ್ನು ಕೆಡವಿ ಹಾಕಿವೆ. ಈ ವೇಳೆ ಮನೆಯನ್ನು ಕೆಡವುವ ಕಾರ್ಯಾಚರಣೆಗೆ ಸ್ಥಳೀಯರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು, ಇಸ್ರೇಲ್ ಸೇನಾಪಡೆಗಳೊಂದಿಗೆ ಸಂಘರ್ಷಕ್ಕೆ ಇಳಿದಿದ್ದಾರೆ. ಈ ವೇಳೆ ಹಿಂಸಾಚಾರ ಭುಗಿಲೆದ್ದಿದೆ. 

ಅಕ್ಟೋಬರ್ 7 ರಂದು ಪ್ರಾರಂಭವಾದ ಗಾಜಾ ಸಂಘರ್ಷದಲ್ಲಿ 1,400 ಕ್ಕೂ ಹೆಚ್ಚು ಜನರು  ಬಲಿಯಾಗಿದ್ದಾರೆ. ಹಮಾಸ್ ದಾಳಿಯ ನಂತರ ಇಸ್ರೇಲಿ ಪಡೆಗಳು ಜುಡಿಯಾ ಮತ್ತು ಸಮರಿಯಾದಾದ್ಯಂತ 524 ಶಂಕಿತರನ್ನು ಬಂಧಿಸಿವೆ. 'ಆಪರೇಷನ್ ಸ್ವೋರ್ಡ್ಸ್ ಆಫ್ ಐರನ್' ಪ್ರಾರಂಭವಾದಾಗಿನಿಂದ ಜುಡಿಯಾ ಮತ್ತು ಸಮಾರಿಯಾದಲ್ಲಿ ಬಂಧಿತರಾದವರಲ್ಲಿ 330 ಕ್ಕೂ ಹೆಚ್ಚು ಜನರು ಹಮಾಸ್ ಕಾರ್ಯಕರ್ತರಾಗಿದ್ದು, 50 ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಡಿಎಫ್ ಮಾಹಿತಿ ನೀಡಿದೆ.

ಪ್ಯಾಲೇಸ್ಟಿನಿಯನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರು ಗಾಜಾ ಯುದ್ಧದ ಪ್ರಾರಂಭದಿಂದಲೂ ಜುಡಿಯಾ ಮತ್ತು ಸಮಾರಿಯಾದ ಅರಬ್ ನಗರಗಳು ಮತ್ತು ಪಟ್ಟಣಗಳ ಬೀದಿಗಳಲ್ಲಿ ಹಮಾಸ್‌ಗೆ ಬೆಂಬಲವಾಗಿ ಹೆಚ್ಚುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ.

ರಸ್ತೆಗಳಿದು ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸ್ಥಳೀಯ ಆಡಳಿತ ಸೇನೆಯನ್ನು ಬಳಸುತ್ತಿದೆ. ಪ್ರಮುಖವಾಗಿ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಗಾಜಾ ಆಸ್ಪತ್ರೆಯನ್ನು ನಾಶಪಡಿಸಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಪ್ರತಿಭಟನೆಗಳು ವ್ಯಾಪಕವಾಗಿವೆ. ಇದೂ ಕೂಡ ಪ್ಯಾಲೆಸ್ತೀನ್ ಸೇನೆಯೊಂದಿಗಿನ ಸ್ಥಳೀಯರ ಸಂಘರ್ಷಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com