ಇಸ್ರೇಲ್ ಮೇಲೆ ದಾಳಿ ನಡೆಸುವ ಸೂಚನೆ ನೀಡಿದ ಇರಾನ್, ಅಮೇರಿಕಾಗೆ ಹಿಂದೆಸರಿಯಲು ಸಲಹೆ

ಸಿರಿಯಾದಲ್ಲಿ ತನ್ನ ದೂತಾವಾಸ ಕಚೇರಿ ಮೇಲೆ ಇಸ್ರೇಲ್ ನಿಂದ ಶಂಕಿತ ದಾಳಿ ನಡೆದಿದ್ದು ತಾನೂ ಇಸ್ರೇಲ್ ವಿರುದ್ಧ ದಾಳಿ ನಡೆಸುವುದಾಗಿ ಇರಾನ್ ಹೇಳಿದೆ.
ಇರಾನ್
ಇರಾನ್online desk

ಸಿರಿಯಾದಲ್ಲಿ ತನ್ನ ದೂತಾವಾಸ ಕಚೇರಿ ಮೇಲೆ ಇಸ್ರೇಲ್ ನಿಂದ ಶಂಕಿತ ದಾಳಿ ನಡೆದಿದ್ದು ತಾನೂ ಇಸ್ರೇಲ್ ವಿರುದ್ಧ ದಾಳಿ ನಡೆಸುವುದಾಗಿ ಇರಾನ್ ಹೇಳಿದೆ. ಈ ಹಿನ್ನೆಲೆಯಲ್ಲಿ ಅಮೇರಿಕಾಗೆ ಹಿಂದೆಸರಿಯುವಂತೆಯೂ ಸಿರಿಯಾ ಸಲಹೆ ನೀಡಿದೆ.

ಇರಾನ್
ಇಸ್ರೇಲ್ ಗೆ ಶಸ್ತ್ರಾಸ್ತ್ರ ನಿರ್ಬಂಧ ವಿಧಿಸುವ ಒತ್ತಾಯ ಪರಿಗಣಿಸಲಿರುವ ವಿಶ್ವಸಂಸ್ಥೆ!

ಇನ್ನು ಇದೇ ವೇಳೆ ಇರಾನ್ ನ ಹೆಜ್ಬುಲ್ಲಾ ಸಂಘಟನೆ ಇಸ್ರೇಲ್ ವಿರುದ್ಧ ಯುದ್ಧಕ್ಕೆ ಸನ್ನದ್ಧವಾಗುತ್ತಿರುವುದಾಗಿ ಹೇಳಿದೆ. ಈ ಬಗ್ಗೆ ವಾಷಿಂಗ್ ಟನ್ ಗೆ ಸಂದೇಶ ರವಾನಿಸಿರುವ ಇರಾನ್, ನೆತನ್ಯಾಹು ಅವರ ಬಲೆಗೆ ಬೀಳದಂತೆ ಅಮೇರಿಕಾಗೆ ಸಲಹೆ ನೀಡಿದೆ.

ಇರಾನ್ ಅಧ್ಯಕ್ಷರ ರಾಜಕೀಯ ವ್ಯವಹಾರಗಳ ಉಪ ಮುಖ್ಯಸ್ಥರು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಉಲ್ಲೇಖಿಸಿ ಎಕ್ಸ್ ನಲ್ಲಿ ಬರೆದಿದ್ದಾರೆ. ಯುಎಸ್ "ನಿಮಗೆ ಹೊಡೆತ ಬೀಳದಂತೆ ಪಕ್ಕಕ್ಕೆ ಸರಿಯಬೇಕು ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೇರಿಕಾ, ಯುಎಸ್ ನ್ನು ಗುರಿಯಾಗಿಸಿ ದಾಳಿ ಮಾಡದಂತೆ ಇರಾನ್‌ಗೆ ಎಚ್ಚರಿಸಿದೆ ಎಂದು ಹೇಳಿದ್ದಾರೆ. ಇರಾನ್ ಕಳುಹಿಸಿರುವ ಸಂದೇಶದ ಬಗ್ಗೆ ಅಮೆರಿಕ ಈ ವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com