Mozambique ferry disaster: ಆಫ್ರಿಕಾದ ಮೊಜಾಂಬಿಕ್ ನಲ್ಲಿ ಭೀಕರ ಧೋಣಿ ಅಪಘಾತ: ಕನಿಷ್ಠ 94 ಮಂದಿ ಸಾವು, ಹಲವರು ನಾಪತ್ತೆ

ಆಫ್ರಿಕಾದ ಮೊಜಾಂಬಿಕ್ ನಲ್ಲಿ ಭೀಕರ ಧೋಣಿ ಅಪಘಾತ ಸಂಭವಿಸಿದ್ದು, ಕಾಲರಾ ಭೀತಿಯಿಂದ ತವರಿಗೆ ತಳುತ್ತಿದ್ದ ಕನಿಷ್ಠ 94 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
Mozambique ferry disaster
ಮೊಜಾಂಬಿಕ್ ನಲ್ಲಿ ಭೀಕರ ಧೋಣಿ ಅಪಘಾತ
Updated on

ನವದೆಹಲಿ: ಆಫ್ರಿಕಾದ ಮೊಜಾಂಬಿಕ್ ನಲ್ಲಿ ಭೀಕರ ಧೋಣಿ ಅಪಘಾತ ಸಂಭವಿಸಿದ್ದು, ಕಾಲರಾ ಭೀತಿಯಿಂದ ತವರಿಗೆ ತಳುತ್ತಿದ್ದ ಕನಿಷ್ಠ 94 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ದಕ್ಷಿಣ ಆಫ್ರಿಕಾದ ದ್ವೀಪ ರಾಷ್ಟ್ರ ಮೊಜಾಂಬಿಕ್ ಕರಾವಳಿ ತೀರದ ಬಳಿ ದುರಂತ ಸಂಭವಿಸಿದ್ದು, 130 ಮಂದಿ ಪ್ರಯಾಣಿಸುತ್ತಿದ್ದ ಮೀನುಗಾರಿಕಾ ದೋಣಿ ಮುಳುಗಿ 94 ಮಂದಿ ಜಲ ಸಮಾಧಿಯಾಗಿದ್ದಾರೆ. ಮೊಜಾಂಬಿಕ್ ದ್ವೀಪದಿಂದ ನಂಪುಲಾ ದ್ವೀಪಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದ್ದು, ದೋಣಿಯಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ತುಂಬಿದ್ದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

Mozambique ferry disaster
ಇಟಲಿಯಲ್ಲಿ ದೊಡ್ಡ ದೋಣಿ ದುರಂತ: 28 ಪಾಕಿಗರು ಸೇರಿದಂತೆ 60 ಮಂದಿ ವಲಸಿಗರ ಸಾವು!

ಮೂಲಗಳ ಪ್ರಕಾರ ಮೀನುಗಾರಿಕಾ ದೋಣಿಯನ್ನು ಪ್ರಯಾಣಿಕಾ ದೋಣಿಯಾಗಿ ಮಾರ್ಪಡಿಸಲಾಗಿತ್ತು. ಆದರೆ ಈ ದೋಣಿ ಪ್ರಯಾಣಿಕರ ಸಾಗಣೆಗೆ ಯೋಗ್ಯವಾಗಿರಲಿಲ್ಲ ಎಂದು ಹೇಳಲಾಗಿದೆ. ಸತ್ತವರಲ್ಲಿ ಅನೇಕ ಮಕ್ಕಳೂ ಸೇರಿದ್ದಾರೆ. ನಾಪತ್ತೆಯಾದವರಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಮುದ್ರದ ಪರಿಸ್ಥಿತಿಯು ಈ ಕಾರ್ಯಕ್ಕೆ ತೊಂದರೆಯನ್ನುಂಟು ಮಾಡುತ್ತಿದೆ.

ಕಾಲರಾ ಭೀತಿ ಹಿನ್ನಲೆ: ತವರಿಗೆ ತೆರಳುತ್ತಿದ್ದ ಪ್ರಯಾಣಿಕರು

ಇನ್ನು ಮೊಜಾಂಬಿಕ್​ನಲ್ಲಿ ಕಾಲರಾ ಪ್ರಕರಣಗಳು ಕೂಡ ಹೆಚ್ಚಿದ್ದು, ಅಕ್ಟೋಬರ್ 2023 ರಿಂದ ಸುಮಾರು 15,000 ಪ್ರಕರಣಗಳನ್ನು ವರದಿ ಮಾಡಿದೆ, 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಾಲರಾ ಪ್ರಸರಣ ಹಿನ್ನಲೆಯಲ್ಲಿ ಪ್ರಯಾಣಿಕರು ಏಕಕಾಲದಲ್ಲಿ ತಮ್ಮ ತವರಿಗೆ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.

ಈ ದೋಣಿ ಪ್ರಯಾಣಿಕರ ಸಾಗಣೆಗೆ ಯೋಗ್ಯವಾಗಿರಲಿಲ್ಲ, ಸತ್ತವರಲ್ಲಿ ಅನೇಕ ಮಕ್ಕಳೂ ಸೇರಿದ್ದಾರೆ. ಬದುಕುಳಿದ 5 ಜನರಲ್ಲಿ 2 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ದೋಣಿ ಮೊಜಾಂಬಿಕ್ ದ್ವೀಪದ ಕಡೆಗೆ ಹೋಗುತ್ತಿತ್ತು. ಈ ದ್ವೀಪವನ್ನು ವಾಸ್ಕೋ ಡ ಗಾಮಾ ಕಂಡುಹಿಡಿದಿದ್ದ ಎಂದು ಹೇಳಲಾಗಿದೆ.

ಮೊಜಾಂಬಿಕ್​ನಲ್ಲಿ ಹಲವು ಬಾರಿ ವಿನಾಶಕಾರಿ ಚಂಡಮಾರುತಗಳು ಎದುರಾಗುತ್ತವೆ. ನಾಪತ್ತೆಯಾದವರಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಮುದ್ರದ ಪರಿಸ್ಥಿತಿಯು ಈ ಕಾರ್ಯಕ್ಕೆ ತೊಂದರೆಯನ್ನುಂಟುಮಾಡುತ್ತಿದೆ.

Mozambique ferry disaster
ಮಹಾರಾಷ್ಟ್ರ ದೋಣಿ ದುರಂತ: 7 ಮಂದಿ ಮೃತದೇಹ ಪತ್ತೆ, ಸಾವಿನ ಸಂಖ್ಯೆ 10ಕ್ಕೆ ಏರಿಕೆ

ಬದುಕುಳಿದ 5 ಜನರಲ್ಲಿ 2 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ದೋಣಿ ಮೊಜಾಂಬಿಕ್ ದ್ವೀಪದ ಕಡೆಗೆ ಹೋಗುತ್ತಿತ್ತು. ಈ ದ್ವೀಪವನ್ನು ವಾಸ್ಕೋ ಡ ಗಾಮಾ ಕಂಡುಹಿಡಿದಿದ್ದ ಎಂದು ಹೇಳಲಾಗಿದೆ. ಮೊಜಾಂಬಿಕ್​ನಲ್ಲಿ ಹಲವು ಬಾರಿ ವಿನಾಶಕಾರಿ ಚಂಡಮಾರುತಗಳು ಎದುರಾಗುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com