ಮನೆಯೊಳಗೆ ನುಗ್ಗಿ ಹೊಡೆಯುತ್ತೇವೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಅಮೇರಿಕಾ ಪ್ರತಿಕ್ರಿಯೆ ಹೀಗಿದೆ....

ಭಯೋತ್ಪಾದನೆಯನ್ನು ನಿಗ್ರಹಿಸುವುದಕ್ಕಾಗಿ ಮನೆಯೊಳಗೆ ನುಗ್ಗಿ ಹೊಡೆಯುತ್ತೇವೆ ಎಂದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಅಮೇರಿಕಾ ಪ್ರತಿಕ್ರಿಯೆ ನೀಡಿದೆ.
ಮೋದಿ- ಮ್ಯಾಥ್ಯೂ ಮಿಲ್ಲರ್
ಮೋದಿ- ಮ್ಯಾಥ್ಯೂ ಮಿಲ್ಲರ್

ವಾಷಿಂಗ್ ಟನ್: ಭಯೋತ್ಪಾದನೆಯನ್ನು ನಿಗ್ರಹಿಸುವುದಕ್ಕಾಗಿ ಮನೆಯೊಳಗೆ ನುಗ್ಗಿ ಹೊಡೆಯುತ್ತೇವೆ ಎಂದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಅಮೇರಿಕಾ ಪ್ರತಿಕ್ರಿಯೆ ನೀಡಿದೆ.

ಪರಿಸ್ಥಿತಿ ಉಲ್ಬಣಗೊಳ್ಳುವುದನ್ನು ತಪ್ಪಿಸಲು ಅಮೇರಿಕಾ ಪಾಕ್ ಹಾಗೂ ಭಾರತಕ್ಕೆ ಸಲಹೆ ನೀಡಿದೆ.

ಮಾತುಕತೆ ಮೂಲಕ ಭಾರತ-ಪಾಕ್ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಅಮೇರಿಕಾದ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ. ಭಯೋತ್ಪಾದಕರನ್ನು ಅವರ ಮನೆಗಳಲ್ಲಿ ಕೊಲ್ಲಲು ಭಾರತ ಹಿಂಜರಿಯುವುದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗಳ ಬಗ್ಗೆ ಬಿಡೆನ್ ಆಡಳಿತಕ್ಕೆ ಆತಂಕ ಇದೆಯೇ ಎಂಬ ಪ್ರಶ್ನೆಗೆ ಮಿಲ್ಲರ್, "ನಾನು ಮೊದಲೇ ಹೇಳಿದಂತೆ, ಯುನೈಟೆಡ್ ಸ್ಟೇಟ್ಸ್ ಮಧ್ಯಪ್ರವೇಶಿಸಲು ಹೋಗುವುದಿಲ್ಲ ಎಂದು ಮ್ಯಾಥ್ಯೂ ಮಿಲ್ಲರ್ ತಿಳಿಸಿದ್ದಾರೆ.

ಮೋದಿ- ಮ್ಯಾಥ್ಯೂ ಮಿಲ್ಲರ್
'ಪ್ರತಿಯೊಬ್ಬರೂ ವಿಷಾದಿಸುತ್ತಾರೆ': ಚುನಾವಣಾ ಬಾಂಡ್ ಯೋಜನೆ ರದ್ದತಿ ಬಗ್ಗೆ ಪ್ರಧಾನಿ ಮೋದಿ ಟೀಕೆ

ಆದರೆ ಭಾರತ-ಪಾಕ್ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದನ್ನು ಉತ್ತೇಜಿಸುತ್ತೇವೆ ಎಂದು ಮಿಲ್ಲರ್ ಹೇಳಿದ್ದಾರೆ. ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚಿನ ಕುರಿತು ಅಮೆರಿಕವು ಭಾರತದ ಮೇಲೆ ಏಕೆ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ ಎಂದು ಕೇಳಿದಾಗ, ಮಿಲ್ಲರ್, "ನಾನು ಯಾವುದೇ ನಿರ್ಬಂಧದ ಕ್ರಮಗಳನ್ನು ಪೂರ್ವವೀಕ್ಷಣೆ ಮಾಡಲು ಹೋಗುವುದಿಲ್ಲ, ಆದರೆ ನಿರ್ಬಂಧಗಳ ಬಗ್ಗೆ ಮಾತನಾಡಲು ನೀವು ನನ್ನನ್ನು ಕೇಳಿದರೆ ಅದು ನಾವು ಬಹಿರಂಗವಾಗಿ ಚರ್ಚಿಸದ ವಿಷಯವಾಗಿರುತ್ತದೆ ಎಂದಷ್ಟೇ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com