Helicopter collision: ಮಲೇಷ್ಯಾದಲ್ಲಿ ಎರಡು ಸೇನಾ ಹೆಲಿಕಾಪ್ಟರ್ ಢಿಕ್ಕಿ, 10 ಮಂದಿ ಸಾವು

ಅಭ್ಯಾಸದ ವೇಳೆ 2 ಹೆಲಿಕಾಪ್ಟರ್ ಗಳು ಢಿಕಿಯಾದ ಪರಿಣಾಮ ಅದರೊಳಗಿದ್ದ 10 ಮಂದಿ ಸಾವಿಗೀಡಾಗಿರುವ ಘಟನೆ ಮಲೇಷ್ಯಾದಲ್ಲಿ ನಡೆದಿದೆ.
Helicopter collision In Malaysia
ಮಲೇಷ್ಯಾದಲ್ಲಿ ಸೇನಾ ಹೆಲಿಕಾಪ್ಟರ್ ಢಿಕ್ಕಿ
Updated on

ಕೌಲಾಲಂಪುರ: ಅಭ್ಯಾಸದ ವೇಳೆ 2 ಹೆಲಿಕಾಪ್ಟರ್ ಗಳು ಢಿಕಿಯಾದ ಪರಿಣಾಮ ಅದರೊಳಗಿದ್ದ 10 ಮಂದಿ ಸಾವಿಗೀಡಾಗಿರುವ ಘಟನೆ ಮಲೇಷ್ಯಾದಲ್ಲಿ ನಡೆದಿದೆ.

ಮುಂದಿನ ತಿಂಗಳು ನಡೆಯಲಿರುವ ಮಲೇಷ್ಯಾ ನೌಕಾಪಡೆಯ 90ನೇ ವಾರ್ಷಿಕೋತ್ಸವದ ಅಂಗವಾಗಿ ಹೆಲಿಕಾಪ್ಟರ್‌ಗಳು ನಾರ್ತ್ ಪೆರಾಕ್ ಸ್ಟೇಟ್‌ನ ನೌಕಾ ನೆಲೆಯಲ್ಲಿ ಕಸರತ್ತು ನಡೆಸುತ್ತಿದ್ದ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ರಾಯಲ್ ಮಲೇಷ್ಯಾ ನೇವಿ ಹೆಲಿಕಾಪ್ಟರ್ ಗಳು ಪರಸ್ಪರ ಢಿಕ್ಕಿಯಾಗಿದ್ದು, ವೈಮಾನಿಕ ಕಸರತ್ತು ನಡೆಸುತ್ತಿದ್ದ ಎಲ್ಲ 10 ಸಿಬ್ಬಂದಿ ಮೃತಪಟ್ಟಿದ್ದಾರೆ.

Helicopter collision In Malaysia
Japan military chopper crash: ಪೆಸಿಫಿಕ್ ಸಾಗರದಲ್ಲಿ ಜಪಾನ್ ಸೇನಾ ಕಾಪ್ಟರ್ ಗಳ ಅಪಘಾತ; ಓರ್ವ ಸಾವು, 7 ಮಂದಿ ನಾಪತ್ತೆ!

ಅಂತೆಯೇ ಘಟನೆಗೆ ಸಂಬಂಧಿಸಿದಂತೆ ಮಲೇಷ್ಯಾ ತನಿಖೆಗೆ ಆದೇಶಿಸಿದ್ದು, ಮೃತರ ದೇಹಗಳನ್ನು ಮಲೇಷ್ಯಾ ನೌಕಾಪಡೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಲೇಷ್ಯಾದ ವಸತಿ ಮತ್ತು ಸ್ಥಳೀಯ ಸರ್ಕಾರದ ಸಚಿವಾಲಯದ ಪ್ರಕಾರ, ಎರಡು ಹೆಲಿಕಾಪ್ಟರ್‌ಗಳು ಯುರೋಕಾಪ್ಟರ್ AS555SN ಫೆನೆಕ್ ಮತ್ತು ಅಗಸ್ಟಾ-ವೆಸ್ಟ್‌ಲ್ಯಾಂಡ್ ಸಂಸ್ಥೆ ನಿರ್ಮಿಸಿದ AW-1 ಚಾಪರ್ ಮೇ ತಿಂಗಳಲ್ಲಿ ಬೇಸ್‌ನಲ್ಲಿ ನಿಗದಿಪಡಿಸಲಾದ TLDM ಫ್ಲೀಟ್ ಓಪನ್ ಡೇಗಾಗಿ ಫ್ಲೈಪಾಸ್ಟ್ ರಿಹರ್ಸಲ್‌ ಮಾಡುತ್ತಿದ್ದವು.

ಈ ವೇಳೆ ಹೆಲಿಕಾಪ್ಟರ್ ಗಳ ರೆಕ್ಕೆಗಳು ಪರಸ್ಪರ ಬಡಿದಿದ್ದು, ಈ ವೇಳೆ ಕಾಪ್ಟರ್ ಗಳನು ಪತನವಾಗಿದೆ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com