Taiwan Earthquake: ತೈವಾನ್ ನಲ್ಲಿ ಒಂದೇ ದಿನ 80 ಭೂಕಂಪ, ರಿಕ್ಟರ್ ಮಾಪಕದಲ್ಲಿ ಗರಿಷ್ಠ 6.3 ತೀವ್ರತೆ ದಾಖಲು!

ತೈವಾನ್ ಒಂದೇ ದಿನ ಬರೊಬ್ಬರಿ 80 ಬಾರಿ ಭೂಮಿ ಕಂಪಿಸಿದ್ದು, ಗರಿಷ್ಟ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3 ದಾಖಲಾಗಿದೆ.
Taiwan Earthquake
ತೈವಾನ್ ನಲ್ಲಿ 180 ಬಾರಿ ಕಂಪಿಸಿದ ಭೂಮಿ
Updated on

ತೈಪೆ: ತೈವಾನ್ ಒಂದೇ ದಿನ ಬರೊಬ್ಬರಿ 80 ಬಾರಿ ಭೂಮಿ ಕಂಪಿಸಿದ್ದು, ಗರಿಷ್ಟ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3 ದಾಖಲಾಗಿದೆ.

ತೈವಾನ್‌(Taiwan)ನಲ್ಲಿ ಕಳೆದ 24 ಗಂಟೆಗಳಲ್ಲಿ ಭೂಮಿ ಪದೇ ಪದೇ ಕಂಪಿಸುತ್ತಿದ್ದು, 80 ಕ್ಕೂ ಹೆಚ್ಚು ಪ್ರಬಲ ಮತ್ತು ಮಧ್ಯಮ ಭೂಕಂಪ(Earthquake)ಗಳು ದಾಖಲಾಗಿವೆ ಎಂದು ತೈವಾನ್ ಭೂಕಂಪನ ಮಾಪನ ಕೇಂದ್ರ ಮಾಹಿತಿ ನೀಡಿದೆ.

Taiwan Earthquake
Earthquake: ಹಿಮಾಚಲ ಪ್ರದೇಶ ಸೇರಿ ಉತ್ತರ ಭಾರತದ ಹಲವೆಡೆ ಪ್ರಬಲ ಭೂಕಂಪನ; 5.3ರಷ್ಟು ತೀವ್ರತೆ ದಾಖಲು!

ತೈವಾನ್‌ನ ಪೂರ್ವ ಕರಾವಳಿಯಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರದ ಮಧ್ಯದಲ್ಲಿ 80 ಕ್ಕೂ ಹೆಚ್ಚು ಭೂಕಂಪಗಳು ಸಂಭವಿಸಿದ್ದು, ಪ್ರಬಲವಾದ ಭೂಕಂಪವು 6.3 ತೀವ್ರತೆಯನ್ನು ಹೊಂದಿದೆ.

ಪ್ರಭಲ ಕಂಪನದಿಂದಾಗಿ ರಾಜಧಾನಿ ತೈಪೆನಲ್ಲಿ ಬೃಹತ್ ಕಟ್ಟಡಗಳು ಜಖಂಗೊಂಡಿದ್ದು, ಹಲವು ಕಟ್ಟಡಗಳು ನೆಲಕ್ಕುರುಳಿವೆ. ರಾಜಧಾನಿ ತೈಪೆ ಸೇರಿದಂತೆ ಉತ್ತರ, ಪೂರ್ವ ಮತ್ತು ಪಶ್ಚಿಮ ತೈವಾನ್‌ನ ದೊಡ್ಡ ಭಾಗಗಳಲ್ಲಿ ಕಟ್ಟಡಗಳು ಕಳೆದ 24 ಗಂಟೆಗಳಲ್ಲಿ ಹತ್ತಾರು ಬಾರಿ ಅಲುಗಾಡಿದ್ದು, ಪ್ರಬಲವಾದ ಭೂಕಂಪವು 6.3 ರಷ್ಟಿದೆ.

ವಿಶ್ವದ ಅತಿದೊಡ್ಡ ಸಂಪರ್ಕ ಚಿಪ್‌ಮೇಕರ್, ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕೋ (TSMC), ಅವರ ಕಾರ್ಖಾನೆಗಳು ದ್ವೀಪದ ಪಶ್ಚಿಮ ಕರಾವಳಿಯಲ್ಲಿವೆ. ಇಲ್ಲೇ ಕಂಪನ ಸಂಭವಿಸಿದ್ದು ಪರಿಣಾಮ ಇಲ್ಲಿ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಏಪ್ರಿಲ್ 3 ರಂದು, ನಗರದಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿತ್ತು, ಇದರಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದರು ಮತ್ತು ಅಂದಿನಿಂದ 1,000 ಕ್ಕೂ ಹೆಚ್ಚು ಭೂಕಂಪಗಳು ತೈವಾನ್‌ನಲ್ಲಿ ಸಂಭವಿಸಿವೆ.

ತೈವಾನ್ ಕೇಂದ್ರೀಯ ಹವಾಮಾನ ಇಲಾಖೆ(Taiwan's Central Weather Administration) ಏಪ್ರಿಲ್ 3 ರ ದೊಡ್ಡ ಭೂಕಂಪದ ನಂತರ ಸೋಮವಾರ ಮಧ್ಯಾಹ್ನದಿಂದ ಭೂಕಂಪನಗಳು ಆರಂಭವಾಗಿದ್ದು, ಇಲ್ಲಿಯವರೆಗೂ 180 ಬಾರಿ ಭೂಮಿ ಕಂಪಿಸಿದೆ ಎಂದು ಹೇಳಿದೆ.

2016 ರಲ್ಲಿ ದಕ್ಷಿಣ ತೈವಾನ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, 1999 ರಲ್ಲಿ 7.3 ತೀವ್ರತೆಯ ಭೂಕಂಪದಲ್ಲಿ 2,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com