ಡೆಮಾಕ್ರೆಟಿಕ್ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಮಿನ್ನೇಸೋಟ ಗವರ್ನರ್ ಟಿಮ್ ವಾಲ್ಜ್ ಆಯ್ಕೆ

ಮಿನ್ನೇಸೋಟ ಗವರ್ನರ್ ಟಿಮ್ ವಾಲ್ಜ್ ಮಧ್ಯಪಶ್ಚಿಮ ಭಾಗದ ಗವರ್ನರ್ ಆಗಿದ್ದು. ಮಿಲಿಟರಿ ಅನುಭವಿಯೂ ಆಗಿದ್ದಾರೆ.
Tim Walz
ಮಿನ್ನೇಸೋಟ ಗವರ್ನರ್ ಟಿಮ್ ವಾಲ್ಜ್
Updated on

ವಾಷಿಂಗ್ ಟನ್: ಅಮೇರಿಕಾದ ಚುನಾವಣೆಗೆ, ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಮಿನ್ನೇಸೋಟ ಗವರ್ನರ್ ಟಿಮ್ ವಾಲ್ಜ್ ಅವರನ್ನು ತಮ್ಮ ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ.

ಮಿನ್ನೇಸೋಟ ಗವರ್ನರ್ ಟಿಮ್ ವಾಲ್ಜ್ ಮಧ್ಯಪಶ್ಚಿಮ ಭಾಗದ ಗವರ್ನರ್ ಆಗಿದ್ದು. ಮಿಲಿಟರಿ ಅನುಭವಿಯೂ ಆಗಿದ್ದಾರೆ. ಗರ್ಭಪಾತ ಹಕ್ಕುಗಳಿಗಾಗಿ ವ್ಯಾಪಕವಾದ ರಕ್ಷಣೆಗಳು ಮತ್ತು ಕುಟುಂಬಗಳಿಗೆ ಉದಾರವಾದ ನೆರವು ಸೇರಿದಂತೆ ದೇಶದ ಮಹತ್ವಾಕಾಂಕ್ಷೆಯ ಡೆಮಾಕ್ರಟಿಕ್ ಅಜೆಂಡಾವನ್ನು ಜಾರಿಗೆ ತರಲು ಸಹಾಯ ಮಾಡಿ ಪ್ರಶಂಸೆಗೂ ಭಾಜನರಾಗಿದ್ದಾರೆ.

ತಮ್ಮ ಈ ನಿರ್ಣಯದ ಮೂಲಕ ಶ್ವೇತಭವನಕ್ಕೆ ಪ್ರವೇಶ ಪಡೆಯುವ ಡೆಮೋಕ್ರಾಟ್‌ಗಳಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ನಿರ್ಣಾಯಕ ಪ್ರದೇಶವಾದ ನ ಮಿಡ್‌ವೆಸ್ಟ್‌ನಾದ್ಯಂತ ಪ್ರಭಾವವನ್ನು ಹೆಚ್ಚಿಸುವುದು ಹ್ಯಾರಿಸ್ ಉದ್ದೇಶವಾಗಿದೆ.

2016 ರಲ್ಲಿ ಮಿಚಿಗನ್ ಮತ್ತು ವಿಸ್ಕಾನ್ಸಿನ್‌ನಲ್ಲಿ ರಿಪಬ್ಲಿಕನ್ ಡೊನಾಲ್ಡ್ ಟ್ರಂಪ್ ಅವರ ಗೆಲುವು ಡೆಮಾಕ್ರಾಟ್ ಪಕ್ಷವನ್ನು ಕಾಡುತ್ತಿದೆ. ಟ್ರಂಪ್ 2020ರಲ್ಲಿ ಆ ರಾಜ್ಯಗಳನ್ನು ಕಳೆದುಕೊಂಡಿದ್ದರು ಆದರೆ ಅವರು ಈ ವರ್ಷ ಅಧ್ಯಕ್ಷ ಸ್ಥಾನಕ್ಕೆ ಮರಳುವ ಗುರಿಯನ್ನು ಹೊಂದಿರುವುದರಿಂದ ಮತ್ತು ಮಿನ್ನೇಸೋಟದತ್ತ ತಮ್ಮ ಗಮನವನ್ನು ಹೆಚ್ಚಿಸಿದ್ದಾರೆ.

Tim Walz
US Presidential Elections 2024: ಕಮಲಾ ಹ್ಯಾರಿಸ್ ಜೊತೆ ಚರ್ಚೆಗೆ ಡೊನಾಲ್ಡ್ ಟ್ರಂಪ್ ನಿರಾಕರಣೆ

ವಾಲ್ಜ್, 60, ಆಧುನಿಕ ಅಮೇರಿಕನ್ ರಾಜಕೀಯದಲ್ಲಿ ಅತ್ಯಂತ ಪ್ರಕ್ಷುಬ್ಧ ಅವಧಿಯಲ್ಲಿ ಹ್ಯಾರಿಸ್‌ ಗೆ ಉಪಾಧ್ಯಕ್ಷರಾಗಿ ಸ್ಪರ್ಧೆ ಎದುರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com