ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆ ನಂತರ ಕ್ರೋಧಗೊಂಡಿರುವ ಇರಾನ್ ಇದೀಗ ಇಸ್ರೇಲ್ ಮೇಲೆ ದಾಳಿ ಮಾಡುವುದಾಗಿ ಬಹಿರಂಗವಾಗಿ ಘೋಷಿಸಿದೆ.
ಇಸ್ರೇಲ್ ಮೇಲೆ ಯಾವುದೇ ಕ್ಷಣದಲ್ಲಾದರೂ ದಾಳಿ ಮಾಡುವ ನಿರ್ಧಾರಗೊಂಡಿರುವ ಇರಾನ್ ಇದೀಗ ತನ್ನ ನೂತನ ಸಚಿವ ಸಂಪುಟಕ್ಕೆ ಹಲವರ ನಾಮನಿರ್ದೇಶನ ಮಾಡಿದೆ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು F-14 ಟಾಮ್‌ಕ್ಯಾಟ್ ಪೈಲಟ್ ಜನರಲ್ ಅಜೀಜ್ ನಾಸಿರ್ಜಾಡೆ ಅವರನ್ನು ರಕ್ಷಣಾ ಸಚಿವರಾಗಿ ಹೆಸರಿಸಿದ್ದಾರೆ. ಅಜೀಜ್ 2018-2021ರವರೆಗೆ ಇರಾನ್ ವಾಯುಪಡೆಯ ಮುಖ್ಯಸ್ಥರಾಗಿದ್ದರು. ಇರಾನ್‌ನ ವಾಯುಪಡೆಯ ಸದಸ್ಯರೊಬ್ಬರು ರಕ್ಷಣಾ ಸಚಿವಾಲಯದ ಮುಖ್ಯಸ್ಥರಾಗಿರುವುದು ಇದೇ ಮೊದಲು.
ಅದಾಗಲೇ ಪ್ರಾಕ್ಸಿ ಯುದ್ಧ ಶುರು ಮಾಡಿರುವ ಇರಾನ್ ಹೆಜ್ಬುಲ್ಲಾ ಉಗ್ರರ ಮೂಲಕ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿದೆ. ಆ ಮೂಲಕ ಇಸ್ರೇಲ್ ಗೆ ಪೆಟ್ಟು ಕೊಟ್ಟು ನಂತರ ನೇರವಾಗಿ ದಾಳಿ ಮಾಡುವ ಯೋಜನೆಯಲ್ಲಿ ಇರಾನ್ ಇದೆ.
ತನ್ನ ನೌಕಾಪಡೆಯು ಸ್ಫೋಟಕ ಸಿಡಿತಲೆಗಳೊಂದಿಗೆ ಸುಸಜ್ಜಿತವಾದ ನೂತನ ಕ್ರೂಸ್ ಕ್ಷಿಪಣಿಗಳನ್ನು ಹೊಂದಿರುವುದಾಗಿ ಇರಾನಿಯನ್ ರೆವೆಲ್ಯೂಶನರಿ ಗಾರ್ಡ್ಸ್ (ಐಆರ್ಜಿಸಿ) ತಿಳಿಸಿದೆ.
Advertisement