

ಟೋಕಿಯೋ: ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ ತಮ್ಮ ಸ್ಥಾನಕ್ಕೆ ಸೆಪ್ಟೆಂಬರ್ ನಲ್ಲಿ ರಾಜೀನಾಮೆ ನೀಡಲಿದ್ದಾರೆ. ಹಗರಣಗಳು ಹಾಗೂ ಬೆಲೆ ಏರಿಕೆಯ ನಡುವೆ ಪ್ರಧಾನಿ ಹುದ್ದೆಯಲ್ಲಿ ಕಿಶಿದಾ 3 ವರ್ಷಗಳ ಕಾಲ ಪ್ರಧಾನಿಯಾಗಿದ್ದಾರೆ.
ಕಿಶಿದಾಗೆ ಸಾರ್ವಜನಿಕ ಬೆಂಬಲ ಕ್ಷೀಣಿಸುತ್ತಿದ್ದು, ಮರು ಚುನಾವಣೆ ಬಯಸದಿರಲು ಲಿಬರಲ್ ಡೆಮಾಕ್ರೆಟಿಕ್ ಪಕ್ಷದ ನಾಯಕ ನಿರ್ಧರಿಸಿದ್ದಾರೆ ಎಂದು ಸಾರ್ವಜನಿಕ ಪ್ರಸಾರಕ NHK ಸೇರಿದಂತೆ ಜಪಾನಿನ ಮಾಧ್ಯಮವು ಹಿರಿಯ ಆಡಳಿತ ಸಿಬ್ಬಂದಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.
LDP ವಕ್ತಾರರು ಈ ವರದಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಕಿಶಿದಾ ಅವರು ಪದವಿ ತ್ಯಜಿಸುವ ನಿರ್ಧಾರ, ಪಕ್ಷದ ಮುಖ್ಯಸ್ಥರ ಸ್ಥಾನಕ್ಕೆ ಮತ್ತು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಗೆ ಹೊಸ ನಾಯಕನ ಆಯ್ಕೆ ಮಾಡಲು ಸ್ಪರ್ಧೆಯನ್ನು ಉಂಟುಮಾಡಲಿದೆ.
LDP ಆಯ್ಕೆ ಮಾಡುವ ಕಿಶಿದಾ ಉತ್ತರಾಧಿಕಾರಿಗೆ ಜೀವನ ವೆಚ್ಚದಲ್ಲಿ ಹೆಚ್ಚಳ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಸವಾಲಿನ ಸಂಗತಿಯಾಗಿರಲಿದೆ.
Advertisement