Walmart: ಹಿಂದೂ ದೇವತೆಗಳ ವಿರುದ್ಧದ ವಿಕೃತಿ; 74 ರೀತಿಯ ಗಣೇಶ ಭಾವಚಿತ್ರವಿರುವ ಒಳಉಡುಪುಗಳು ಪತ್ತೆ!

ವಾಲ್‌ಮಾರ್ಟ್‌ನಂತಹ ಕಂಪನಿಗಳು ತಮ್ಮ ಹಿರಿಯ ಕಾರ್ಯನಿರ್ವಾಹಕರನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಯ ತರಬೇತಿಗಾಗಿ ಕಳುಹಿಸಬೇಕು ಎಂದು ಸಲಹೆ ನೀಡಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಟೊನ್ವಿಲ್ಲೆ(ಅಮೆರಿಕ): ಬಹುರಾಷ್ಟ್ರೀಯ ಚಿಲ್ಲರೆ ಕಾರ್ಪೊರೇಶನ್ ವಾಲ್‌ಮಾರ್ಟ್‌ ಹಿಂದೂ ದೇವತೆ ಗಣೇಶನ ಚಿತ್ರವನ್ನು ಹೊಂದಿರುವ 74 ರೀತಿಯ ಒಳ ಉಡುಪುಗಳನ್ನು ಮಾರಾಟ ಮಾಡುತ್ತಿದ್ದು ಇದರ ವಿರುದ್ಧ ಹಿಂದೂಗಳು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದರು. ಇವುಗಳನ್ನು 'ಅತ್ಯಂತ ಅನುಚಿತ' ಎಂದು ಕರೆದಿದ್ದ ಹಿಂದೂಗಳು ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ವಾಲ್‌ಮಾರ್ಟ್‌ ಆ ಎಲ್ಲಾ ಉಡುಪುಗಳ ಮಾರಾಟವನ್ನು ತೆಗೆದುಹಾಕಿದ್ದು ಕ್ಷಮಾಪಣೆಯನ್ನು ಕೇಳಿದೆ.

ಪ್ರಭಟನೆಯ ನೇತೃತ್ವ ವಹಿಸಿದ್ದ ಹಿಂದೂ ರಾಜಕಾರಣಿ ರಾಜನ್ ಜೆಡ್ ಅವರು ನೆವಾಡಾದಲ್ಲಿ ಮಾತನಾಡಿದ್ದು, ಅಂತಹ ಉತ್ಪನ್ನವು ಸಂವೇದನಾಶೀಲವಲ್ಲ ಎಂದು ಭಾವಿಸಿದ ಹಿಂದೂ ಸಮುದಾಯದ ಕಾಳಜಿಯನ್ನು ಅರ್ಥಮಾಡಿಕೊಂಡು ಅವುಗಳನ್ನು ತೆಗೆದು ಹಾಕಿದ್ದಕ್ಕೆ ವಾಲ್‌ಮಾರ್ಟ್‌ಗೆ ಧನ್ಯವಾದ ತಿಳಿಸಿದರು.

ಪ್ರತಿಭಟನೆ ವೇಳೆ ಹಿಂದೂ ಧರ್ಮದ ಯುನಿವರ್ಸಲ್ ಸೊಸೈಟಿಯ ಅಧ್ಯಕ್ಷರಾದ ರಾಜನ್ ಜೆಡ್, ವಾಲ್‌ಮಾರ್ಟ್‌ನಂತಹ ಕಂಪನಿಗಳು ತಮ್ಮ ಹಿರಿಯ ಕಾರ್ಯನಿರ್ವಾಹಕರನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಯ ತರಬೇತಿಗಾಗಿ ಕಳುಹಿಸಬೇಕು ಎಂದು ಸಲಹೆ ನೀಡಿದರು. ಇದರಿಂದಾಗಿ ಅವರು ಹೊಸ ಉತ್ಪನ್ನಗಳನ್ನು ಪರಿಚಯಿಸುವಾಗ ಅಥವಾ ಜಾಹೀರಾತು ಪ್ರಚಾರಗಳನ್ನು ಪ್ರಾರಂಭಿಸುವಾಗ ಗ್ರಾಹಕರು ಮತ್ತು ಸಮುದಾಯಗಳ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

ಸಂಗ್ರಹ ಚಿತ್ರ
ಬಾಂಗ್ಲಾದೇಶ: ಟಕಾ ನೋಟುಗಳಲ್ಲಿ ಮುಜೀಬುರ್ ರೆಹಮಾನ್ ಭಾವಚಿತ್ರಕ್ಕೆ ಕತ್ತರಿ!

ರಾಜನ್ ಝೆಡ್ ಅವರು ಹಿಂದೂ ಧರ್ಮದಲ್ಲಿ ಗಣೇಶನನ್ನು ಹೆಚ್ಚು ಪೂಜಿಸುತ್ತಾರೆ. ದೇವಾಲಯಗಳು ಅಥವಾ ಮನೆಗಳಲ್ಲಿನ ಪೂಜಾ ಸ್ಥಳಗಳಲ್ಲಿ ಗಣೇಶನಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅಂತಹ ಗಣೇಶನ ಭಾವಚಿತ್ರವನ್ನು ಮುದ್ರಿಸಿರುವ ಒಳ ಉಡುಪುಗಳನ್ನು ಮಾರಾಟ ಮಾಡುವುದು ಸಮಂಜಸವಲ್ಲ. ಹಿಂದೂ ದೇವತೆಗಳು ಅಥವಾ ಪರಿಕಲ್ಪನೆಗಳು ಅಥವಾ ಚಿಹ್ನೆಗಳು ಅಥವಾ ಐಕಾನ್‌ಗಳನ್ನು ವಾಣಿಜ್ಯ ಅಥವಾ ಇತರ ಅಜೆಂಡಾಗಳಿಗಾಗಿ ಅನುಚಿತವಾಗಿ ಬಳಸುವುದು ಭಕ್ತರಿಗೆ ನೋವುಂಟು ಮಾಡುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com