Cancer Vaccine ಅಭಿವೃದ್ಧಿಪಡಿಸಿದ Russia: 2025 ರಿಂದ ಲಭ್ಯ; ಎಲ್ಲಾ ರೋಗಿಗಳಿಗೂ ಉಚಿತ!

2025 ರಲ್ಲಿ ಈ ಲಸಿಕೆ ಮುಕ್ತವಾಗಲಿದ್ದು, ಎಲ್ಲಾ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಸಿಗಲಿದೆ ಎಂದು ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ TASS ವರದಿ ಪ್ರಕಟಿಸಿದೆ.
Cancer Vaccine (file pic)
ಕ್ಯಾನ್ಸರ್ ಲಸಿಕೆ (ಸಾಂಕೇತಿಕ ಚಿತ್ರ)online desk
Updated on

ನವದೆಹಲಿ: ಕ್ಯಾನ್ಸರ್ (cancer) ಚಿಕಿತ್ಸೆಗೆ ಎಂಆರ್ ಎನ್ಎ ಆಧರಿತ ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದಾಗಿ ರಷ್ಯಾ ಹೇಳಿದೆ.

2025 ರಲ್ಲಿ ಈ ಲಸಿಕೆ ಮುಕ್ತವಾಗಲಿದ್ದು, ಎಲ್ಲಾ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಸಿಗಲಿದೆ ಎಂದು ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ TASS ವರದಿ ಪ್ರಕಟಿಸಿದೆ.

mRNA ಲಸಿಕೆ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಉತ್ಪಾದಿಸಲು ಮೆಸೆಂಜರ್ RNA (mRNA) ಎಂಬ ಅಣುವಿನ ನಕಲನ್ನು ಬಳಸುತ್ತದೆ. ಈಗ, ರಷ್ಯಾದ ವಿಜ್ಞಾನಿಗಳು ಕ್ಯಾನ್ಸರ್ ವಿರುದ್ಧ mRNA ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ಎಲ್ಲಾ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ವಿತರಿಸಲಾಗುತ್ತದೆ.

ಈ ಮಾಹಿತಿಯನ್ನು ರಷ್ಯಾದ ಆರೋಗ್ಯ ಸಚಿವಾಲಯದ ರೇಡಿಯಾಲಜಿ ವೈದ್ಯಕೀಯ ಸಂಶೋಧನಾ ಕೇಂದ್ರದ ಜನರಲ್ ಡೈರೆಕ್ಟರ್ ಆಂಡ್ರೆ ಕಪ್ರಿನ್ ಡಿಸೆಂಬರ್ 15 ರಂದು ರೇಡಿಯೊ ರೊಸ್ಸಿಯಾಗೆ ನೀಡಿದ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ ಎಂದು TASS ಸಂಸ್ಥೆ ಹೇಳಿದೆ.

ಇದಕ್ಕೂ ಮೊದಲು, ಗಮಾಲೆಯ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಪಿಡೆಮಿಯಾಲಜಿ ಮತ್ತು ಮೈಕ್ರೋಬಯಾಲಜಿಯ ನಿರ್ದೇಶಕ ಅಲೆಕ್ಸಾಂಡರ್ ಗಿಂಟ್ಸ್‌ಬರ್ಗ್ TASS ಗೆ ಕ್ಯಾನ್ಸರ್ ಲಸಿಕೆಯ ಪೂರ್ವ ಕ್ಲಿನಿಕಲ್ ಪ್ರಯೋಗಗಳು ಗೆಡ್ಡೆಯ (ಟ್ಯೂಮರ್) ಬೆಳವಣಿಗೆ ಮತ್ತು ಸಂಭಾವ್ಯ ಮೆಟಾಸ್ಟೇಸ್‌ಗಳನ್ನು ನಿಗ್ರಹಿಸಿರುವುದನ್ನು ತೋರಿಸಿದೆ ಎಂದು ಹೇಳಿದ್ದರು.

Cancer Vaccine (file pic)
ಕ್ಯಾನ್ಸರ್, ಕ್ವಾಂಟಂ ವಿಜ್ಞಾನ, ಮತ್ತು ಮುದ್ದುನಾಯಿ! (ತೆರೆದ ಕಿಟಕಿ)

ವ್ಯಕ್ತಿ ಕೇಂದ್ರಿತ ಕ್ಯಾನ್ಸರ್ ಲಸಿಕೆಗಳು ಸಾಧ್ಯವೇ?

ಗಿಂಟ್ಸ್‌ಬರ್ಗ್ ಪ್ರಕಾರ, ಕೃತಕ ನರ ಜಾಲಗಳ ಬಳಕೆಯು ವ್ಯಕ್ತಿ ಕೇಂದ್ರಿತ (ಅಂದರೆ ಪ್ರತಿ ವ್ಯಕ್ತಿಗೆ ಆತನಿಗೆ ಅಗತ್ಯವಿರುವ ರೀತಿಯಲ್ಲಿ) ಕ್ಯಾನ್ಸರ್ ಲಸಿಕೆಯನ್ನು ರಚಿಸಲು ಅಗತ್ಯವಿರುವ ಕಂಪ್ಯೂಟಿಂಗ್ ಅವಧಿಯನ್ನು ಕಡಿಮೆ ಮಾಡಬಹುದು. ಪ್ರಸ್ತುತ ಪ್ರಕ್ರಿಯೆಯು ದೀರ್ಘವಾಗಿದೆ ಮತ್ತು AI ಅನ್ನು ಬಳಸುವುದರಿಂದ ಈ ಸಮಯವನ್ನು "ಒಂದು ಗಂಟೆಗಿಂತ ಕಡಿಮೆ" ಗೆ ಕಡಿತಗೊಳಿಸಬಹುದು ಎಂದು ಅವರು ಡಿಸೆಂಬರ್ 9 ರಂದು TASS ಗೆ ತಿಳಿಸಿದ್ದಾರೆ.

“ಈಗ [ ವ್ಯಕ್ತಿಗೆ ಅಗತ್ಯವಿರುವ ರೀತಿಯಲ್ಲಿ ಲಸಿಕೆಗಳನ್ನು] ನಿರ್ಮಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಏಕೆಂದರೆ ಲಸಿಕೆ ಅಥವಾ ಕಸ್ಟಮೈಸ್ ಮಾಡಿದ mRNA ಹೇಗೆ ಮ್ಯಾಟ್ರಿಕ್ಸ್ ವಿಧಾನಗಳನ್ನು ಬಳಸುತ್ತದೆ ಎಂಬುದರ ಲೆಕ್ಕಾಚಾರವು ಗಣಿತದ ಪರಿಭಾಷೆಯಲ್ಲಿರಲಿದೆ. ನಾವು ಇವಾನಿಕೋವ್ ಇನ್‌ಸ್ಟಿಟ್ಯೂಟ್ ನ್ನು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಇದು ಈ ಗಣಿತವನ್ನು ಮಾಡಲು AI ಅನ್ನು ಅವಲಂಬಿಸಿದೆ, ಅಂದರೆ ನ್ಯೂರಲ್ ನೆಟ್‌ವರ್ಕ್ ಕಂಪ್ಯೂಟಿಂಗ್ ಈ ಕಾರ್ಯವಿಧಾನಗಳು ಸುಮಾರು ಅರ್ಧ ಗಂಟೆಯಿಂದ ಒಂದು ಗಂಟೆಯವರೆಗೆ ತೆಗೆದುಕೊಳ್ಳುತ್ತದೆ”mಎಂದು ರಷ್ಯಾದ ಲಸಿಕೆ ಮುಖ್ಯಸ್ಥ ಗಿಂಟ್ಸ್‌ಬರ್ಗ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com