ಗಾಯಾಳುಗಳನ್ನು ರಕ್ಷಿಸುತ್ತಿರುವ ರಕ್ಷಣಾ ಪಡೆಗಳ ಚಿತ್ರ
ವಿದೇಶ
ಇರಾನ್: ಖಾಸಿಂ ಸುಲೇಮಾನಿ ಪುಣ್ಯಸ್ಮರಣೆ ವೇಳೆ ಅವಳಿ ಸ್ಫೋಟ, 103 ಸಾವು, 141 ಮಂದಿಗೆ ಗಾಯ
ಇರಾನ್ ಸೇನಾಧಿಕಾರಿಯಾಗಿದ್ದ ಖಾಸಿಂ ಸುಲೇಮಾನಿ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆ ವೇಳೆ ನಡೆದ ಅವಳಿ ಬಾಂಬ್ ಸ್ಫೋಟದಲ್ಲಿ 103 ಜನರು ಸಾವನ್ನಪ್ಪಿದ್ದು, 141 ಮಂದಿ ಗಾಯಗೊಂಡಿದ್ದಾರೆ.
ತೆಹರಾನ್ : ಇರಾನ್ ಸೇನಾಧಿಕಾರಿಯಾಗಿದ್ದ ಖಾಸಿಂ ಸುಲೇಮಾನಿ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆ ವೇಳೆ ನಡೆದ ಅವಳಿ ಬಾಂಬ್ ಸ್ಫೋಟದಲ್ಲಿ 103 ಜನರು ಸಾವನ್ನಪ್ಪಿದ್ದು, 141 ಮಂದಿ ಗಾಯಗೊಂಡಿದ್ದಾರೆ.
ಕರ್ಮಾನ್ ನಗರದಲ್ಲಿರುವ ಖಾಸಿಂ ಅವರ ಸಮಾಧಿ ಸ್ಥಳದಲ್ಲಿ ಈ ಸ್ಫೋಟ ನಡೆದಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಮೊದಲ ಸ್ಫೋಟವು ಸೊಲೈಮಾನಿ ಸಮಾಧಿಯಿಂದ 700 ಮೀಟರ್ ದೂರದಲ್ಲಿ ಮೊದಲ ಸ್ಫೋಟ ಸಂಭವಿಸಿದೆ. ಎರಡನೆಯದು ಸಮಾಧಿಯಿಂದ ಒಂದು ಕಿಲೋಮೀಟರ್ (0.6 ಮೈಲುಗಳು) ದೂರದಲ್ಲಿ ಸಂಭವಿಸಿದೆ ಎಂದು ಇಸ್ಲಾಮಿಕ್ ರಿಪಬ್ಲಿಕ್ ನ್ಯೂಸ್ ಏಜೆನ್ಸಿ ತಿಳಿಸಿದೆ.
ಇರಾನ್ ನ ರೆವಲ್ಯೂಷನರಿ ಗಾರ್ಡ್ಸ್ ಕೋರ್ ನ ಕಮಾಂಡರ್ ಮೇಜರ್ ಜನರಲ್ ಆಗಿದ್ದ ಖಾಸಿಂ ಸುಲೇಮಾನಿ ಅವರು 2020ರಲ್ಲಿ ಅಮೆರಿಕ ನಡೆಸಿದ್ದ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ