ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿಗೆ ಅವಹೇಳನಕಾರಿ ಹೇಳಿಕೆ: ಮಾಲ್ಡೀವ್ಸ್ ಸಚಿವರ ಹೇಳಿಕೆಗೆ ಮಾಜಿ ಅಧ್ಯಕ್ಷರ ತೀವ್ರ ಆಕ್ಷೇಪ!

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪದ ಸಮುದ್ರ ತೀರಕ್ಕೆ ನೀಡಿದ ಭೇಟಿ ಮಾಲ್ಡೀವ್ಸ್‌ನಲ್ಲಿ ಕಿಚ್ಚು ಹೊತ್ತಿಸಿದೆ. ಮೋದಿ ಅವರ ಲಕ್ಷದ್ವೀಪ ಭೇಟಿಯನ್ನು ಮಾಲ್ಡೀವ್ಸ್ ಸಚಿವ ಟೀಕಿಸಿರುವುದು ಈಗ ತೀವ್ರ ವಿವಾದ ಎಬ್ಬಿಸಿದೆ. 
ಪ್ರಧಾನಿ ಮೋದಿ, ಮಾಲ್ಡೀವ್ಸ್ ಮಾಜಿ ಅಧ್ಯಕ್ಷ  ಮೊಹಮ್ಮದ್ ನಶೀದ್
ಪ್ರಧಾನಿ ಮೋದಿ, ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್

ಮಾಲ್ಡೀವ್ಸ್: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪದ ಸಮುದ್ರ ತೀರಕ್ಕೆ ನೀಡಿದ ಭೇಟಿ ಮಾಲ್ಡೀವ್ಸ್‌ನಲ್ಲಿ ಕಿಚ್ಚು ಹೊತ್ತಿಸಿದೆ. ಮೋದಿ ಅವರ ಲಕ್ಷದ್ವೀಪ ಭೇಟಿಯನ್ನು ಮಾಲ್ಡೀವ್ಸ್ ಸಚಿವ ಟೀಕಿಸಿರುವುದು ಈಗ ತೀವ್ರ ವಿವಾದ ಎಬ್ಬಿಸಿದೆ. 

ಭಾರತವು ಮಾಲ್ಡೀವ್ಸ್ ನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿರುವ ಅಲ್ಲಿನ ಸಚಿವ ಅಬ್ದುಲ್ಲಾ ಮಹಜೂಮ್ ಮಜೀದ್, ಮಾಲ್ಡೀವ್ಸ್‌ನ ಬೀಚ್ ಪ್ರವಾಸೋದ್ಯಮದ ಜತೆ ಸ್ಪರ್ಧಿಸಲು ಭಾರತಕ್ಕೆ ಸಾಕಷ್ಟು ಸವಾಲುಗಳಿವೆ. ಭಾರತದ ಬೀಚ್‌ಗಳು ಕೊಳಕಾಗಿವೆ ಎಂಬುದಾಗಿ ವ್ಯಂಗ್ಯವಾಡಿದ್ದಾರೆ. 

ಆದರೆ ಸಚಿವರ ಈ ಹೇಳಿಕೆಯನ್ನು ಅಲ್ಲಿನ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರೇ ಟೀಕಿಸಿದ್ದಾರೆ. ಮಾಲ್ಡೀವ್ಸ್ ಸಚಿವರ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿ ಇಂತಹ ಹೇಳಿಕೆಗಲಿಂದ ಸರ್ಕಾರವನ್ನು ದೂರವಿಡುವಂತೆ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರನ್ನು ಒತ್ತಾಯಿಸಿದರು.

ಮಾಲ್ಡೀವ್ಸ್‌ನ ಭದ್ರತೆ ಮತ್ತು ಸಮೃದ್ಧಿಯಲ್ಲಿ ಭಾರತವು ನಿಮಿತ್ತವಾಗಿದೆ. ಇಂತಹ ಹೇಳಿಕೆಗಳು ಸರ್ಕಾರದ ನೀತಿಯನ್ನು ಪ್ರತಿಬಿಂಬಿಸುವುದಿಲ್ಲ ಎಂಬ ಭರವಸೆಯನ್ನು ಭಾರತಕ್ಕೆ ನೀಡುವಂತೆ ಮುಯಿಜ್ಜು ಅವರನ್ನು ಕೇಳಿಕೊಂಡಿದ್ದಾರೆ. 

ಮಾಲ್ಡೀವ್ಸ್‌ನ ಯುವ ಸಬಲೀಕರಣ ಉಪ ಸಚಿವೆ ಮರಿಯಮ್ ಶಿಯುನಾ ಅವರು ಟ್ವಿಟ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಬರೆದಿದ್ದರು. ತೀವ್ರ ಟೀಕೆ ಬಂದು ವಿವಾದ ಉಂಟಾದ ನಂತರ ಶಿಯುನಾ ಅವರು ಪೋಸ್ಟ್ ಅಳಿಸಿದ್ದಾರೆ. 
ಪ್ರಧಾನಿ ಮೋದಿ ಅವರು ಜನವರಿ 2 ರಂದು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿ ಸಮುದ್ರದಲ್ಲಿ ಸ್ನಾರ್ಕ್ಲಿಂಗ್‌ ಮಾಡಿದ್ದ ಬೀಚ್ ಬದಿ ಓಡಾಡಿದ ಚಿತ್ರಗಳನ್ನು ಹಂಚಿಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com