ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಮಾಲ್ಡೀವ್ಸ್ ನ ಮೂವರು ಸಚಿವರ ಅಮಾನತು

ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯನ್ನು ಲೇವಡಿ ಮಾಡಿದ ವಿವಾದಕ್ಕೆ ಸಂಬಂಧಿಸಿದಂತೆ ಮಾಲ್ಡೀವ್ಸ್ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಪ್ರಧಾನಿ ಮೋದಿ ಮತ್ತು ಭಾರತದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಸಚಿವರಾದ...
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on

ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯನ್ನು ಲೇವಡಿ ಮಾಡಿದ ವಿವಾದಕ್ಕೆ ಸಂಬಂಧಿಸಿದಂತೆ ಮಾಲ್ಡೀವ್ಸ್ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಪ್ರಧಾನಿ ಮೋದಿ ಮತ್ತು ಭಾರತದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಸಚಿವರಾದ ಮರಿಯಮ್ ಶಿಯುನಾ, ಮಲ್ಶಾ ಮತ್ತು ಹಸನ್ ಜಿಹಾನ್ ಅವರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತುಗೊಳಿಸಿದೆ. ಅಲ್ಲದೆ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಹೇಳಿಕೆಗಳನ್ನು ಅವರ ವೈಯಕ್ತಿಕ ಎಂದು ಹೇಳಿದ್ದಾರೆ.

ಈ ವಿಷಯವನ್ನು ಭಾರತ ಅಧಿಕೃತವಾಗಿ ಮಾಲ್ಡೀವ್ಸ್ ಸರ್ಕಾರಕ್ಕೆ ತಿಳಿಸಿತ್ತು. ಈ ಕುರಿತು ಮಾಲ್ಡೀವ್ಸ್ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಉಪ ಸಚಿವೆ (ಯುವ ಸಬಲೀಕರಣ, ಮಾಹಿತಿ ಮತ್ತು ಕಲಾ ಸಚಿವಾಲಯ) ಮರಿಯಮ್ ಶಿಯುನಾ, ಉಪ ಸಚಿವ (ಸಾರಿಗೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ) ಹಸನ್ ಜಿಹಾನ್ ಮತ್ತು ಉಪ ಸಚಿವ (ಯುವ ಸಬಲೀಕರಣ, ಮಾಹಿತಿ ಮತ್ತು ಕಲಾ ಸಚಿವಾಲಯ) ಮಲ್ಶಾ ಅವರನ್ನು ಅಮಾನತುಗೊಳಿಸಿದೆ.

ಹೊಸ ಸರ್ಕಾರ ಬಂದ ನಂತರ ಹದಗೆಟ್ಟ ಸಂಬಂಧ
ಮೊಹಮ್ಮದ್ ಮುಯಿಝು ಅವರ ಹೊಸ ಸರ್ಕಾರದ ನಂತರ ಮಾಲ್ಡೀವ್ಸ್‌ನೊಂದಿಗಿನ ಭಾರತದ ಸಂಬಂಧವು ಹದಗೆಟ್ಟಿತು. ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯ ವೇಳೆ ಹಂಚಿಕೊಂಡ ಕೆಲವು ಚಿತ್ರಗಳ ಮೇಲೆ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದಕ್ಕೆ ಪುಷ್ಟಿ ನೀಡಿದೆ.

ಜಾಹಿದ್ ರಮೀಜ್ ವಿವಾದಾತ್ಮಕ ಹೇಳಿಕೆ
ಏತನ್ಮಧ್ಯೆ, ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿ ಇಂಟರ್ನೆಟ್‌ನಲ್ಲಿ ಸಾಕಷ್ಟು ಸುದ್ದಿ ಮಾಡಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಲಕ್ಷದ್ವೀಪವನ್ನು ಮಾಲ್ಡೀವ್ಸ್‌ನೊಂದಿಗೆ ಹೋಲಿಸುತ್ತಿದ್ದಾರೆ. ಇದು ಸುಂದರವಾದ ಕಡಲತೀರಗಳಿಗೆ ಹೆಸರುವಾಸಿಯಾದ ಪ್ರವಾಸಿ ತಾಣವಾಗಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಪಕ್ಷದ ಸದಸ್ಯ ಜಾಹಿದ್ ರಮೀಜ್ ಅವರು ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯನ್ನು ಲೇವಡಿ ಮಾಡಿದರು. ಅವರ ಚಿತ್ರಗಳ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

ಜನವರಿ 5 ರಂದು ರಮೀಜ್ ಮತ್ತೊಂದು ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ನಿಸ್ಸಂದೇಹವಾಗಿ ಇದು ಉತ್ತಮ ಹೆಜ್ಜೆಯಾಗಿದೆ ಎಂದು ಹೇಳಿದರು. ಆದರೆ ಭಾರತ ಎಂದಿಗೂ ನಮಗೆ ಸಮಾನವಾಗಲು ಸಾಧ್ಯವಿಲ್ಲ. ಮಾಲ್ಡೀವ್ಸ್ ಪ್ರವಾಸಿಗರಿಗೆ ಒದಗಿಸುವ ಸೇವೆಯನ್ನು ಭಾರತ ಹೇಗೆ ಒದಗಿಸುತ್ತದೆ? ನಮ್ಮಂತೆ ಸ್ವಚ್ಛತೆ ಕಾಪಾಡಲು ಅವರು ಹೇಗೆ ಸಾಧ್ಯವಾಗುತ್ತದೆ? ಅವರ ಕೊಠಡಿಗಳಲ್ಲಿನ ವಾಸನೆಯೇ ಅವರಿಗೆ ಮತ್ತು ಪ್ರವಾಸಿಗರಿಗೆ ದೊಡ್ಡ ಸಮಸ್ಯೆಯಾಗಲಿದೆ ಎಂದು ಬರೆದುಕೊಂಡಿದ್ದರು.

ಮೇರಿಯಮ್ ಶಿಯುನಾ ಕೂಡ ಪ್ರಧಾನಿ ಮೋದಿಯವರ ಬಗ್ಗೆ ವಿವಾದಾತ್ಮಕ ಪೋಸ್ಟ್
ಜಾಹಿದ್ ರಮೀಜ್ ಅವರ ವಿವಾದಾತ್ಮಕ ಹೇಳಿಕೆಗಳ ಮೇಲೆ ಬಳಕೆದಾರರು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ. ಮಾಲ್ಡೀವ್ಸ್ ಮೇಲೆ ಜನರು ನಿರಂತರವಾಗಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಭಾರತೀಯ ಬಳಕೆದಾರರು #BoycottMaldives ಅಭಿಯಾನವನ್ನು ನಡೆಸುತ್ತಿದ್ದಾರೆ. ಜಾಹಿದ್ ರಮೀಜ್ ಅಲ್ಲದೆ ಸಚಿವೆ ಮರ್ಯಾಮ್ ಶಿಯುನಾ ಕೂಡ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು. ವಿರೋಧ ವ್ಯಕ್ತವಾಗುತ್ತಿದ್ದಂತೆ ಶಿಯುನಾ ತನ್ನ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com