ಭಾರತ-ಆಸ್ಟ್ರಿಯಾ ಸಂಬಂಧ ಇನ್ನಷ್ಟು ಬಲವಾಗಲಿದೆ: ವಿಯೆನ್ನಾ ಭೇಟಿಗೆ ಪ್ರಧಾನಿ ಮೋದಿ ಹರ್ಷ

ಎರಡು ದಿನಗಳ ಭೇಟಿಗಾಗಿ ನಿನ್ನೆ ಸಂಜೆ ಮಾಸ್ಕೋದಿಂದ ವಿಯೆನ್ನಾಕ್ಕೆ ಮೋದಿ ಆಗಮಿಸಿದ್ದು, 40 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಆಸ್ಟ್ರಿಯಾ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ.
ಆಸ್ಟ್ರಿಯಾ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಜೊತೆ ಪ್ರಧಾನಿ ಮೋದಿ
ಆಸ್ಟ್ರಿಯಾ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಜೊತೆ ಪ್ರಧಾನಿ ಮೋದಿ

ವಿಯೆನ್ನಾ: ಭಾರತ-ಆಸ್ಟ್ರಿಯಾ ಸ್ನೇಹವು ಬಲವಾಗಿದೆ. ಮುಂಬರುವ ದಿನಗಳಲ್ಲಿ ಅದು ಇನ್ನಷ್ಟು ಗಟ್ಟಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರನ್ನು ಇಂದು ಬುಧವಾರ ದ್ವಿಪಕ್ಷೀಯ ಮಾತುಕತೆಗೆ ಮುನ್ನ ಖಾಸಗಿಯಾಗಿ ಭೇಟಿಯಾದಾಗ ಹೇಳಿದ್ದಾರೆ.

ಎರಡು ದಿನಗಳ ಭೇಟಿಗಾಗಿ ನಿನ್ನೆ ಸಂಜೆ ಮಾಸ್ಕೋದಿಂದ ವಿಯೆನ್ನಾಕ್ಕೆ ಮೋದಿ ಆಗಮಿಸಿದ್ದು, 40 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಆಸ್ಟ್ರಿಯಾ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಮೋದಿ ಅವರನ್ನು ಆಸ್ಟ್ರಿಯಾದ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಶಾಲೆನ್‌ಬರ್ಗ್ ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಒಂದು ಫೋಟೋದಲ್ಲಿ ಪ್ರಧಾನಿ ಮೋದಿಯವರು ಆಸ್ಟ್ರಿಯಾ ಚಾನ್ಸೆಲರ್ ನೆಹಮ್ಮರ್ ಅವರನ್ನು ತಬ್ಬಿಕೊಳ್ಳುತ್ತಿರುವುದು ಕಂಡುಬಂದರೆ, ಇನ್ನೊಂದರಲ್ಲಿ ಆಸ್ಟ್ರಿಯಾದ ಚಾನ್ಸೆಲರ್ ಅವರು ಪ್ರಧಾನಿಯವರೊಂದಿಗೆ ಸೆಲ್ಫಿ ಕ್ಲಿಕ್ಕಿಸುತ್ತಿರುವುದು ಕಂಡುಬಂದಿದೆ. ಮೈಕ್ರೋಬ್ಲಾಗಿಂಗ್ ವೇದಿಕೆಗಳಲ್ಲಿ ನೆಹಮ್ಮರ್ ತಮ್ಮ ಮತ್ತು ಮೋದಿಯವರ ಫೋಟೋವನ್ನು ಪೋಸ್ಟ್ ಮಾಡಿ, ವಿಯೆನ್ನಾಕ್ಕೆ ಸುಸ್ವಾಗತ, ಪ್ರಧಾನಿ ಮೋದಿಯವರೇ, ನಿಮ್ಮನ್ನು ಆಸ್ಟ್ರಿಯಾಕ್ಕೆ ಸ್ವಾಗತಿಸಲು ಸಂತೋಷ ಮತ್ತು ಗೌರವವಾಗಿದೆ. ಆಸ್ಟ್ರಿಯಾ ಮತ್ತು ಭಾರತವು ಸ್ನೇಹಿತರು ಮತ್ತು ಪಾಲುದಾರರು. ನಿಮ್ಮ ಭೇಟಿ ಸಂದರ್ಭದಲ್ಲಿ ಹಲವು ವಿಷಯಗಳ ಕುರಿತು ಚರ್ಚೆಗೆ ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಆಸ್ಟ್ರಿಯಾ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಜೊತೆ ಪ್ರಧಾನಿ ಮೋದಿ
ರಷ್ಯಾ ಪ್ರವಾಸ ಮುಗಿಸಿ ಆಸ್ಟ್ರಿಯಾಕ್ಕೆ ಬಂದಿಳಿದ ಮೋದಿ: 40 ವರ್ಷಗಳ ನಂತರ ಭಾರತದ ಪ್ರಧಾನಿ ಭೇಟಿ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com