''ವಿಶ್ವಾಸವಿದೆ''; ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ Sunita Williams ಮೊದಲ ಮಾತು!

ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಬಾಹ್ಯಾಕಾಶ ನಿಲ್ದಾಣದಲ್ಲಿ ಅಕ್ಷರಶಃ ಬಂಧಿಯಾಗಿರುವ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
Sunita Williams
ಸುನೀತಾ ವಿಲಿಯಮ್ಸ್
Updated on

ವಾಷಿಂಗ್ಟನ್: ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಬಾಹ್ಯಾಕಾಶ ನಿಲ್ದಾಣದಲ್ಲಿ ಅಕ್ಷರಶಃ ಬಂಧಿಯಾಗಿರುವ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದ ನಾಸಾ ಗಗನಯಾತ್ರಿ ಸುನಿತಾ 'ಸುನಿ' ವಿಲಿಯಮ್ಸ್ ಮತ್ತು ಬ್ಯಾರಿ 'ಬುಚ್' ವಿಲ್ಮೋರ್ ಅವರು ಕಳೆದ ತಿಂಗಳೇ ಭೂಮಿಗೆ ಮರಳಲಿದ್ದಾರೆ ಎಂದು ಭಾವಿಸಲಾಗಿತ್ತು.

ಆದರೆ ತಾವು ತೆರಳಿದ್ದ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಈ ಜೋಡಿ ಈ ವರ್ಷದ ಆಗಸ್ಟ್‌ವರೆಗೆ ಕೆಲವು ವಾರಗಳ ಕಾಲ ಬಾಹ್ಯಾಕಾಶದಲ್ಲಿ ಉಳಿಯಬೇಕಾಗಬಹುದು ಎಂದು ಹೇಳಲಾಗುತ್ತಿದೆ.

Sunita Williams
ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿರುವ Sunita Williams ತಂಡಕ್ಕೆ ಹೊಸ ತಲೆನೋವು, ಆತಂಕಕಾರಿ 'Spacebug' ಪತ್ತೆ!

ಅತ್ತ ನೌಕೆಯಲ್ಲಿನ ತಾಂತ್ರಿಕ ದೋಷ ಸರಿಪಡಿಸಲು ಇಂಜಿನಿಯರ್‌ಗಳು ಸಮಯದೊಂದಿಗೆ ಸ್ಪರ್ಧೆ ನಡೆಸಿದ್ದರೆ ಇತ್ತ ಕೆಲ ಮಾಧ್ಯಮಗಳು ಬಾಹ್ಯಾಕಾಶಕ್ಕೆ ತೆರಳಿರುವ ನಾಸಾ ಗಗನಯಾತ್ರಿಗಳು ಭೂಮಿಗೆ ಮರಳುವುದೇ ಅನುಮಾನ ಎಂಬ ಶಂಕೆ ವ್ಯಕ್ತಪಡಿಸುತ್ತಿವೆ. ನೌಕೆಯಲ್ಲಿನ ತಾಂತ್ರಿಕ ದೋಷ ಸರಿಪಡಿಸಲು ಸಾಧ್ಯವಾಗದೇ ಇರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

Sunita Williams ಮೊದಲ ಮಾತು!

ಏತನ್ಮಧ್ಯೆ ಈ ಕುರಿತ ಊಹಾಪೋಹಗಳಿಗೆ ತೆರೆ ಎಳೆಯಲು ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳೇ ಇಂದು ರಾತ್ರಿ 11 ಗಂಟೆಗೆ ನೇರ ಪ್ರಸಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಅದಕ್ಕಿಂತ ಮೊದಲು ಬಾಹ್ಯಾಕಾಶದಲ್ಲಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್ ರನ್ನು ಖಾಸಗಿ ವಾಹಿನಿಯೊಂದು ಸಂಪರ್ಕಿಸಿದ್ದು ಈ ವೇಳೆ ಮಾತನಾಡಿರುವ ಸುನಿತಾ ವಿಲಿಯಮ್ಸ್, ''ಸ್ಟಾರ್‌ಲೈನರ್ ನೌಕೆಯಲ್ಲಿನ ತಾಂತ್ರಿಕ ಸಮಸ್ಯೆ ಶೀಘ್ರ ಬಗೆಹರಿಯುವ ವಿಶ್ವಾಸವಿದೆ. ನಾವು ಶೀಘ್ರದಲ್ಲೇ ಭೂಮಿಗೆ ಹಿಂತಿರುಗಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Sunita Williams
3ನೇ ಬಾರಿಗೆ Sunita Williams ಬಾಹ್ಯಾಕಾಶಯಾನ!

"ನಮಗೆ ಅಗತ್ಯವಿದ್ದರೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಮಸ್ಯೆಯಿದ್ದರೆ, ನಾವು ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆ ಪ್ರವೇಶಿ ಅನ್‌ಡಾಕ್ ಮಾಡಬಹುದು, ನಮ್ಮ ತಂಡದೊಂದಿಗೆ ಮಾತನಾಡಬಹುದು ಮತ್ತು ಮನೆಗೆ ಬರಲು ಉತ್ತಮ ಮಾರ್ಗವನ್ನು ಕಂಡುಹಿಡಿಯಬಹುದು ಎಂದು ನನಗೆ ವಿಶ್ವಾಸವಿದೆ. ನೌಕೆಯಲ್ಲಿನ ತಾಂತ್ರಿಕದೋಷ ಶೀಘ್ರ ಬಗೆಹರಿಯುವ ಸಂಪೂರ್ಣ ವಿಶ್ವಾಸವನ್ನು ನಾವು ಹೊಂದಿದ್ದೇವೆ. ಬಾಹ್ಯಾಕಾಶ ನೌಕೆಯು ನಮ್ಮನ್ನು ಮನೆಗೆ ಕರೆತರುತ್ತದೆ, ತೊಂದರೆಯಿಲ್ಲ ಎಂದು ಸುನಿತಾ ವಿಲಿಯಮ್ಸ್ ISS ನಿಂದ CNN ವರದಿಗಾರರಿಗೆ ತಿಳಿಸಿದ್ದಾರೆ.

ನೌಕೆಗೆ ಏನಾಗಿದೆ?

ಬಾಹ್ಯಾಕಾಶದಲ್ಲಿ 10 ದಿನಗಳನ್ನು ಕಳೆಯಲು ಹೋಗಿದ್ದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್‌‍ ಹಾಗೂ ಆಕೆಯ ಸಹೋದ್ಯೋಗಿ ಅಂತರಾಷ್ಟ್ರೀಯ ಬಾಹ್ಯಾಕಾಶದಲ್ಲೇ ತಾಂತ್ರಿಕ ದೋಷದಿಂದ ಬಂಧಿಯಾಗಿದ್ದಾರೆ. ಜೂನ್‌ 5 ರಂದು ಬೋಯಿಂಗ್‌ ಸ್ಟಾರ್ಲೈನರ್‌ ನಲ್ಲಿ ಸುನಿತಾ ಮತ್ತು ಬ್ಯಾರಿ 'ಬುಚ್' ವಿಲ್ಮೋರ್ ಬಾಹ್ಯಾಕಾಶಕ್ಕೆ ಹಾರಿದ್ದರು. ಆದರೆ ಸ್ವಾರ್ಲೈನರ್‌ 28 ಟ್ರಸ್ಟರ್‌ ಗಳಲ್ಲಿ ಐದು ಹೀಲಿಯಂ ಸೋರಿಕೆಗಳು ಸೇರಿ ಕೆಲ ತಾಂತ್ರಿಕ ಸಮಸ್ಯೆ ಕಂಡುಬಂದಿತ್ತು. ಹೀಗಾಗಿ ಅಂದಿನಿಂದ ಅವರಿಬ್ಬರು ಬಾಹ್ಯಾಕಾಶದಲ್ಲಿ ಬಂಧಿಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com