
ತೆಹ್ರಾನ್: ಇರಾನ್ ನಲ್ಲಿ ಅಧ್ಯಕ್ಷೀಯ ಚುನಾವಣೆಗೆ ಇರಾನ್ ನ ಕಟ್ಟರ್ ವಾದಿ ನಾಯಕ ಮಾಜಿ ಅಧ್ಯಕ್ಷ ಮಹ್ಮೂದ್ ಅಹ್ಮದಿನೆಜಾದ್ ಮತ್ತೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಇತ್ತಿಚೆಗೆ ಇರಾನ್ ನ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ 50 ದಿನಗಳಲ್ಲಿ ಚುನಾವಣೆ ನಡೆಸಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಬೇಕಿದೆ.
ಇರಾನ್ ನ ಮಾಜಿ ನಾಯಕ ಚುನಾವಣೆಗೆ ನೋಂದಣಿ ಮಾಡಿಕೊಂಡಿರುವುದು ಇರಾನ್ ನ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಮೇಲೆ ಒತ್ತಡ ಹೆಚ್ಚುವಂತೆ ಮಾಡಿದೆ. ಈ ಹಿಂದೆ ಅಹ್ಮದಿನೆಜಾದ್ ಇರಾನ್ ನ ಸರ್ವೋಚ್ಛ ನಾಯಕನಾಗಿರುವ 85 ವರ್ಷದ ಮೌಲ್ವಿಗೆ ಬಹಿರಂಗವಾಗಿ ಸವಾಲು ಹಾಕಿದ್ದರು ಹಾಗೂ 2021 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದರಿಂದ ಅವರನ್ನು ನಿರ್ಬಂಧಿಸಲಾಗಿತ್ತು.
ಫೈರ್‌ಬ್ರಾಂಡ್, ಹತ್ಯಾಕಾಂಡವನ್ನು ಪ್ರಶ್ನಿಸುವ ರಾಜಕಾರಣಿಯ ಈ ಸ್ಪರ್ಧೆ ಟೆಹ್ರಾನ್‌ನ ವೇಗವಾಗಿ ಮುನ್ನಡೆಯುತ್ತಿರುವ ಪರಮಾಣು ಕಾರ್ಯಕ್ರಮ, ಉಕ್ರೇನ್‌ನ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ಬೆಂಬಲ ನೀಡುವುದು ಮತ್ತು ಭಿನ್ನಾಭಿಪ್ರಾಯದ ಮೇಲೆ ಅದರ ವ್ಯಾಪಕವಾದ ದಬ್ಬಾಳಿಕೆಗಳ ಕುರಿತು ಇರಾನ್ ಮತ್ತು ಪಶ್ಚಿಮದ ನಡುವಿನ ಉದ್ವಿಗ್ನತೆಯ ಸಮಯದಲ್ಲಿ ಎದುರಾಗಿದೆ.
ಅಹ್ಮದಿನೆಜಾದ್ ಇಲ್ಲಿಯವರೆಗೆ ನೋಂದಾಯಿಸಿದ ಪ್ರಮುಖ ಅಭ್ಯರ್ಥಿಯಾಗಿದ್ದಾರೆ. ಅವರ ನೋಂದಣಿಯ ನಂತರ ಮಾತನಾಡುತ್ತಾ, ತಾವು ಜಾಗತಿಕವಾಗಿ "ರಚನಾತ್ಮಕ ತೊಡಗಿಸಿಕೊಳ್ಳುವುದಾಗಿ ಹೇಳಿದ್ದು, ಎಲ್ಲಾ ರಾಷ್ಟ್ರಗಳೊಂದಿಗೆ ಸುಧಾರಿತ ಆರ್ಥಿಕ ಸಂಬಂಧಗಳನ್ನು ಬಯಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ. ಜೂ.28 ರಂದು ಚುನಾವಣೆ ನಡೆಯಲಿದೆ
Advertisement