ಮೆಕ್ಕಾದಲ್ಲಿ ತಾಪಮಾನ 50C ಗೆ ಏರಿಕೆ: 550ಕ್ಕೂ ಹೆಚ್ಚು ಹಜ್ ಯಾತ್ರಿಕರು ಸಾವು

ಹಜ್ ಯಾತ್ರೆಗೆ ತೆರಳಿದವರಲ್ಲಿ 550ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅವರಲ್ಲಿ ಕನಿಷ್ಠ 323 ಮಂದಿ ಈಜಿಪ್ಟಿನವರಾಗಿದ್ದು, ಶಾಖ-ಸಂಬಂಧಿತ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಇಬ್ಬರು ಅರಬ್ ರಾಜತಾಂತ್ರಿಕರು ಎಎಫ್ ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮುಸ್ಲಿಂ ಯಾತ್ರಾರ್ಥಿಗಳು ಸೌದಿ ಅರೇಬಿಯಾದ ಮುಸ್ಲಿಂ ಪವಿತ್ರ ನಗರವಾದ ಮೆಕ್ಕಾದಲ್ಲಿ ವಾರ್ಷಿಕ ಹಜ್ ಯಾತ್ರೆಗೆ ಮುಂಚಿತವಾಗಿ ಗ್ರ್ಯಾಂಡ್ ಮಸೀದಿಯಲ್ಲಿ ಪ್ರಾರ್ಥಿಸುತ್ತಾರೆ
ಮುಸ್ಲಿಂ ಯಾತ್ರಾರ್ಥಿಗಳು ಸೌದಿ ಅರೇಬಿಯಾದ ಮುಸ್ಲಿಂ ಪವಿತ್ರ ನಗರವಾದ ಮೆಕ್ಕಾದಲ್ಲಿ ವಾರ್ಷಿಕ ಹಜ್ ಯಾತ್ರೆಗೆ ಮುಂಚಿತವಾಗಿ ಗ್ರ್ಯಾಂಡ್ ಮಸೀದಿಯಲ್ಲಿ ಪ್ರಾರ್ಥಿಸುತ್ತಾರೆ
Updated on

ಹಜ್: ಹಜ್ ಯಾತ್ರೆಗೆ ತೆರಳಿದವರಲ್ಲಿ 550ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅವರಲ್ಲಿ ಕನಿಷ್ಠ 323 ಮಂದಿ ಈಜಿಪ್ಟಿನವರಾಗಿದ್ದು, ಶಾಖ-ಸಂಬಂಧಿತ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಇಬ್ಬರು ಅರಬ್ ರಾಜತಾಂತ್ರಿಕರು ಎಎಫ್ ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಒಬ್ಬರು ಯಾತ್ರೆ ವೇಳೆ ಬಿದ್ದು ಗಾಯಗೊಂಡು ಪ್ರಾಣಕಳೆದುಕೊಂಡಿದ್ದು ಹೊರತುಪಡಿಸಿ ಮೃತಪಟ್ಟ ಈಜಿಪ್ಟ್ ಯಾತ್ರಿಕರೆಲ್ಲರೂ ಶಾಖ ಸಂಬಂಧಿತ ಸಮಸ್ಯೆಯಿಂದ ಅಸುನೀಗಿದ್ದಾರೆ ಎಂದು ರಾಜತಾಂತ್ರಿಕರೊಬ್ಬರು ತಿಳಿಸಿದ್ದಾರೆ. ಮೆಕ್ಕಾದ ಅಲ್-ಮುಯಿಸೆಮ್ ನೆರೆಹೊರೆಯಲ್ಲಿರುವ ಆಸ್ಪತ್ರೆಯ ಶವಾಗಾರದಿಂದ ಈ ಮಾಹಿತಿ ಸಿಕ್ಕಿದೆ ಎಂದರು.

ಕನಿಷ್ಠ 60 ಜೋರ್ಡಾನಿಯನ್ ಪ್ರಜೆಗಳು ಮೃತಪಟ್ಟಿದ್ದಾರೆ. ಈ ಹಿಂದೆ 41 ಮಂದಿ ಜೋರ್ಡಾನ್ ಪ್ರಜೆಗಳು ಮೃತರಾಗಿದ್ದರು ಎಂದು ಹೇಳಲಾಗುತ್ತಿತ್ತು. ಎಎಫ್‌ಪಿ ಲೆಕ್ಕಾಚಾರದ ಪ್ರಕಾರ, ಮೃತಪಟ್ಟವರ ಸಂಖ್ಯೆ 577ಕ್ಕೇರಿದೆ.

ಮೆಕ್ಕಾದಲ್ಲಿನ ದೊಡ್ಡದಾದ ಅಲ್-ಮುಯಿಸೆಮ್‌ನಲ್ಲಿರುವ ಶವಾಗಾರದಲ್ಲಿ ಒಟ್ಟು 550 ಮೃತಶರೀರಗಳು ಸಿಕ್ಕಿವೆ ಎಂದು ರಾಜತಾಂತ್ರಿಕರು ಹೇಳಿದ್ದಾರೆ. ಹಜ್ ಸಮಯದಲ್ಲಿ ನಾಪತ್ತೆಯಾದ ಈಜಿಪ್ಟಿನವರ ಶೋಧ ಕಾರ್ಯಾಚರಣೆಯಲ್ಲಿ ಸೌದಿ ಅಧಿಕಾರಿಗಳೊಂದಿಗೆ ಕೈರೋ ಸಹಕರಿಸುತ್ತಿದೆ ಎಂದು ಈಜಿಪ್ಟ್ ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ.

ಶಾಖದ ಒತ್ತಡದಿಂದ ಬಳಲುತ್ತಿರುವ 2,000 ಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ವರ್ಷ ಹಜ್ ಯಾತ್ರೆ ವೇಳೆ ವಿವಿಧ ದೇಶಗಳ ಕನಿಷ್ಠ 240 ಯಾತ್ರಿಕರು ಮೃತಪಟ್ಟಿದ್ದರು. ಅವರಲ್ಲಿ ಹೆಚ್ಚಿನವರು ಇಂಡೋನೇಷಿಯನ್ನರು.

ಹಜ್ ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾಗಿದೆ. ಮುಸಲ್ಮಾನರು ತಮ್ಮ ಜೀವಿತಾವಧಿಯಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆಗೆ ಹೋಗಬೇಕು ಎಂಬ ನಂಬಿಕೆಯಿರುತ್ತದೆ.

ಮುಸ್ಲಿಂ ಯಾತ್ರಾರ್ಥಿಗಳು ಸೌದಿ ಅರೇಬಿಯಾದ ಮುಸ್ಲಿಂ ಪವಿತ್ರ ನಗರವಾದ ಮೆಕ್ಕಾದಲ್ಲಿ ವಾರ್ಷಿಕ ಹಜ್ ಯಾತ್ರೆಗೆ ಮುಂಚಿತವಾಗಿ ಗ್ರ್ಯಾಂಡ್ ಮಸೀದಿಯಲ್ಲಿ ಪ್ರಾರ್ಥಿಸುತ್ತಾರೆ
ವಿಪರೀತ ಬಿಸಿಗಾಳಿ: ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ವೇವ್ ಘಟಕ ಸ್ಥಾಪಿಸುವಂತೆ ಜೆಪಿ ನಡ್ಡಾ ಸೂಚನೆ

ತೀರ್ಥಯಾತ್ರೆಯು ಹವಾಮಾನದ ಕುಸಿತದಿಂದ ಹೆಚ್ಚು ಪರಿಣಾಮ ಬೀರುತ್ತದೆ, ಕಳೆದ ತಿಂಗಳು ಪ್ರಕಟವಾದ ಸೌದಿ ಅಧ್ಯಯನದ ಪ್ರಕಾರ, ಮೆಕ್ಕಾ ಪ್ರದೇಶದಲ್ಲಿ ತಾಪಮಾನವು ಪ್ರತಿ ದಶಕದಲ್ಲಿ 0.4C (0.72F) ಏರುತ್ತಿದೆ.

ಮೊನ್ನೆ ಸೋಮವಾರ ಮೆಕ್ಕಾದ ಅತಿದೊಡ್ಡ ಮಸೀದಿಯಲ್ಲಿ ತಾಪಮಾನವು 51.8 ಕ್ಯಾಟ್‌ಗೆ ತಲುಪಿದೆ ಎಂದು ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ.

ಸೋಮವಾರ ಮೆಕ್ಕಾದ ಹೊರಗಿನ ಮಿನಾದಲ್ಲಿ ಎಎಫ್‌ಪಿ ಪತ್ರಕರ್ತರು ಯಾತ್ರಿಕರು ತಮ್ಮ ತಲೆಯ ಮೇಲೆ ನೀರಿನ ಬಾಟಲಿಗಳನ್ನು ಸುರಿಯುವುದನ್ನು ಕಂಡುಬಂತು. ಸೌದಿ ಅಧಿಕಾರಿಗಳು ಯಾತ್ರಿಕರಿಗೆ ಛತ್ರಿಗಳನ್ನು ಬಳಸಲು ಸಲಹೆ ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com