ಚೀನಾ ಪಾಲಾಗಿದ್ದ ಟೆಂಡರ್ ರದ್ದು ಮಾಡಿ ಭಾರತಕ್ಕೆ ಕೊಟ್ಟ ಶ್ರೀಲಂಕಾ!

ಚೀನಾದತ್ತ ವಾಲುತ್ತಿದ್ದ ಶ್ರೀಲಂಕಾವನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಭಾರತ ನಡೆಸುತ್ತಿರುವ ಪ್ರಯತ್ನದಲ್ಲಿ ಮೊದಲ ಯಶಸ್ಸು ಲಭಿಸಿದ್ದು, ಚೀನಾ ಪಾಲಾಗಿದ್ದ ಟೆಂಡರ್ ಅನ್ನು ರದ್ದು ಮಾಡಿ ಅದನ್ನು ಶ್ರೀಲಂಕಾ ಇದೀಗ ಭಾರತಕ್ಕೆ ನೀಡಿದೆ.
ಭಾರತಕ್ಕೆ ಇಂಧನ ಯೋಜನೆ ಟೆಂಡರ್ ಕೊಟ್ಟ ಶ್ರೀಲಂಕಾ
ಭಾರತಕ್ಕೆ ಇಂಧನ ಯೋಜನೆ ಟೆಂಡರ್ ಕೊಟ್ಟ ಶ್ರೀಲಂಕಾAFP

ಕೊಲಂಬೋ: ಚೀನಾದತ್ತ ವಾಲುತ್ತಿದ್ದ ಶ್ರೀಲಂಕಾವನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಭಾರತ ನಡೆಸುತ್ತಿರುವ ಪ್ರಯತ್ನದಲ್ಲಿ ಮೊದಲ ಯಶಸ್ಸು ಲಭಿಸಿದ್ದು, ಚೀನಾ ಪಾಲಾಗಿದ್ದ ಟೆಂಡರ್ ಅನ್ನು ರದ್ದು ಮಾಡಿ ಅದನ್ನು ಶ್ರೀಲಂಕಾ ಇದೀಗ ಭಾರತಕ್ಕೆ ನೀಡಿದೆ.

ಹೌದು.. ಚೀನಾಗೆ ನೀಡಿದ್ದ ನಾಲ್ಕು ಇಂಧನ ಯೋಜನೆಗಳನ್ನು (Energy Deal) ಶ್ರೀಲಂಕಾ ದೇಶವು ಭಾರತಕ್ಕೆ ನೀಡಿದೆ. ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಮೂರು ಸೌರ ವಿದ್ಯುತ್‌ ಉತ್ಪಾದನೆ ಘಟಕ ಹಾಗೂ ಒಂದು ಹೈಬ್ರಿಡ್‌ ವಿದ್ಯುತ್‌ ಉತ್ಪಾದನೆ ಘಟಕಗಳ ನಿರ್ಮಾಣದ ಗುತ್ತಿಗೆಯನ್ನು ಭಾರತದ ಕಂಪನಿಗಳಿಗೆ ಶ್ರೀಲಂಕಾ ನೀಡಿದೆ. ಇದು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಮುನ್ನಡೆ ಎಂದೇ ಹೇಳಲಾಗುತ್ತಿದೆ.

ಭಾರತಕ್ಕೆ ಇಂಧನ ಯೋಜನೆ ಟೆಂಡರ್ ಕೊಟ್ಟ ಶ್ರೀಲಂಕಾ
ಹೂಡಿಕೆ, ಕಾರ್ಯತಂತ್ರ ದೃಷ್ಟಿಯಿಂದ ಶ್ರೀಲಂಕಾ ಭಾರತಕ್ಕೆ ಮುಖ್ಯ ಏಕೆ ಗೊತ್ತೇ? (ಹಣಕ್ಲಾಸು)

ಇದಕ್ಕೂ ಮೊದಲು ಯೋಜನೆಗಳಿಗೆ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಅನುದಾನ ನೀಡಲಾಗಿತ್ತು. ಅಷ್ಟೇ ಅಲ್ಲ, ನಾಲ್ಕೂ ಘಟಕಗಳ ನಿರ್ಮಾಣದ ಗುತ್ತಿಗೆಯನ್ನು ಚೀನಾದ ಕಂಪನಿಗೆ ನೀಡಲಾಗಿತ್ತು. ಈಗ ಚೀನಾ ಕಂಪನಿಯನ್ನು ಬಿಟ್ಟು, ಭಾರತದ ಕಂಪನಿಗೆ ದ್ವೀಪರಾಷ್ಟ್ರವು ಗುತ್ತಿಗೆ ನೀಡಿದೆ. ಒಪ್ಪಂದ ಮಾಡಿಕೊಂಡಿರುವ ಕುರಿತು ಶ್ರೀಲಂಕಾದಲ್ಲಿರುವ ಭಾರತದ ರಾಯಭಾರ ಕಚೇರಿಯು ಫೋಟೊಗಳ ಸಮೇತ ಪೋಸ್ಟ್‌ ಮಾಡಿದ್ದು, ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನರ್‌ ಸಂತೋಷ್ ಝಾ ಹಾಗೂ ಶ್ರೀಲಂಕಾ ಸಚಿವ ಇಂಡಿಕಾ ಅನುರಾಧಾ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಶ್ರೀಲಂಕಾದ ನೈನಿತಿವು, ಅನಾಲತಿವು ಹಾಗೂ ಡೆಲ್ಫ್ಟ್‌ ದ್ವೀಪಗಳಲ್ಲಿ ಮೂರು ಸೌರ ವಿದ್ಯುತ್‌ ಘಟಕ ಹಾಗೂ ಜಾಫ್ನಾದಲ್ಲಿ ಹೈಬ್ರಿಡ್‌ ವಿದ್ಯುತ್‌ ಉತ್ಪಾದನೆ ಘಟಕ ನಿರ್ಮಿಸಲಾಗುತ್ತದೆ” ಎಂದು ಟ್ವಿಟರ್ ನಲ್ಲಿ ಮಾಹಿತಿ ನೀಡಿದೆ.

ಅಂದಹಾಗೆ ಆರಂಭದಲ್ಲಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಸಾಲದಿಂದ ಹಣಕಾಸು ಒದಗಿಸಲಾಗಿದ್ದು, ಚೀನಾದ ಭಾಗವಹಿಸುವಿಕೆಯ ಬಗ್ಗೆ ಭಾರತದ ಆತಂಕದಿಂದಾಗಿ ಈ ಯೋಜನೆಯನ್ನು ಎರಡು ವರ್ಷಗಳ ಹಿಂದೆ ತಡೆಹಿಡಿಯಲಾಗಿತ್ತು. ಆದರೆ ಇದೀಗ ಈ ಯೋಜನೆಗೆ ಮರು ಚಾಲನೆ ದೊರೆತಿದೆ.

ಯೋಜನೆಯನ್ನು ಪುನರುಜ್ಜೀವನಗೊಳಿಸಲಾಗಿದೆ ಮತ್ತು ಈಗ ಭಾರತ ಸರ್ಕಾರದಿಂದ 11 ಮಿಲಿಯನ್ ಡಾಲರ್ ಅನುದಾನದಿಂದ ಸಂಪೂರ್ಣವಾಗಿ ಹಣವನ್ನು ನೀಡಲಾಗಿದೆ ಎಂದು ಶ್ರೀಲಂಕಾದ ಇಂಧನ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ. ಸೌಲಭ್ಯಗಳನ್ನು ನಿರ್ಮಿಸುವ ಗುತ್ತಿಗೆಯನ್ನು ಭಾರತದ ಬೆಂಗಳೂರಿನಲ್ಲಿರುವ ನವೀಕರಿಸಬಹುದಾದ ಸಂಸ್ಥೆಯಾದ ಯು-ಸೋಲಾರ್‌ಗೆ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com