ಇನ್ಮುಂದೆ ಮಾಲ್ಡೀವ್ಸ್‌ನಲ್ಲಿ ಭಾರತೀಯ ಸೇನೆಯೇ ಇರಲ್ಲ: ಚೀನಾದೊಂದಿಗಿನ ಸೇನಾ ಒಪ್ಪಂದದ ಬಳಿಕ ಅಧ್ಯಕ್ಷ ಮುಯಿಝು ಘೋಷಣೆ

ಭಾರತ ವಿರೋಧಿ ಹೇಳಿಕೆಯನ್ನು ತೀವ್ರಗೊಳಿಸಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮೇ 10ರ ನಂತರ ತಮ್ಮ ದೇಶದಲ್ಲಿ ಒಬ್ಬ ಭಾರತೀಯ ಸೇನಾ ಸಿಬ್ಬಂದಿ ಆಗಲಿ ಅಥವಾ ಸಾಮಾನ್ಯ ಉಡುಪಿನಲ್ಲೂ ಇರುವುದಿಲ್ಲ ಎಂದು ಹೇಳಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು
ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು

ಮಾಲೆ: ಭಾರತ ವಿರೋಧಿ ಹೇಳಿಕೆಯನ್ನು ತೀವ್ರಗೊಳಿಸಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮೇ 10ರ ನಂತರ ತಮ್ಮ ದೇಶದಲ್ಲಿ ಒಬ್ಬ ಭಾರತೀಯ ಸೇನಾ ಸಿಬ್ಬಂದಿ ಆಗಲಿ ಅಥವಾ ಸಾಮಾನ್ಯ ಉಡುಪಿನಲ್ಲೂ ಇರುವುದಿಲ್ಲ ಎಂದು ಹೇಳಿದ್ದಾರೆ.

ಮಾರ್ಚ್ 10 ರೊಳಗೆ ಮಿಲಿಟರಿ ಸಿಬ್ಬಂದಿಯ ಮೊದಲ ಬ್ಯಾಚ್ ಮಾಲ್ಡೀವ್ಸ್‌ನಿಂದ ಹೊರಡುವ ಮೊದಲು ಭಾರತೀಯ ತಾಂತ್ರಿಕ ಸಿಬ್ಬಂದಿಯ ಮೊದಲ ತಂಡವು ದ್ವೀಪ ರಾಷ್ಟ್ರಕ್ಕೆ ಆಗಮಿಸಿದ ಸಮಯದಲ್ಲಿ ಮುಯಿಝು ಹೇಳಿಕೆ ನೀಡಿದ್ದಾರೆ. ವರದಿಯೊಂದರ ಪ್ರಕಾರ, ಮಾಲ್ಡೀವ್ಸ್ ಅಧ್ಯಕ್ಷರು ಘಟನೆಯೊಂದರಲ್ಲಿ, ಭಾರತೀಯ ಸೈನಿಕರನ್ನು ದೇಶದಿಂದ ಹೊರಹಾಕುವಲ್ಲಿ ತಮ್ಮ ಸರ್ಕಾರದ ಯಶಸ್ಸಿನ ಬಗ್ಗೆ ಅನೇಕ ವದಂತಿಗಳನ್ನು ಹರಡಲಾಗುತ್ತಿದೆ ಮತ್ತು ಪರಿಸ್ಥಿತಿಯನ್ನು ವಿರೂಪಗೊಳಿಸಲಾಗುತ್ತಿದೆ ಎಂದು ಹೇಳಿದರು.

'ಅನುಮಾನ ಹುಟ್ಟಿಸುವ ವಿಷಯಗಳಿಗೆ ಗಮನ ಕೊಡಬೇಡಿ'

ಈ ಬಗ್ಗೆ ಚೀನಾ ಪರ ನಾಯಕರೊಬ್ಬರು, 'ಭಾರತೀಯ ಸೈನಿಕರು ದೇಶ ಬಿಟ್ಟು ಹೊರಡುತ್ತಿಲ್ಲ, ಬದಲಿಗೆ ತಮ್ಮ ಸಮವಸ್ತ್ರವನ್ನು ನಾಗರಿಕ ಬಟ್ಟೆಗೆ ಬದಲಾಯಿಸಿಕೊಂಡು ಹಿಂತಿರುಗುತ್ತಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ಹೃದಯದಲ್ಲಿ ಅನುಮಾನವನ್ನು ಹೆಚ್ಚಿಸುವ ಇಂತಹ ವಿಷಯಗಳ ಬಗ್ಗೆ ನಾವು ಗಮನ ಹರಿಸಬಾರದು ಎಂದು ನಾನು ಈ ಬಗ್ಗೆ ಹೇಳಲು ಬಯಸುತ್ತೇನೆ.

ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು
ಮಾ.10 ರ ವೇಳೆಗೆ ಭಾರತೀಯ ಪಡೆಗಳ ಮೊದಲ ತಂಡ ವಾಪಸ್: ಮಾಲ್ಡೀವ್ಸ್ ಅಧ್ಯಕ್ಷ 

ಮಾಲ್ಡೀವ್ಸ್ ಚೀನಾದಿಂದ ಉಚಿತ ಮಿಲಿಟರಿ ಸಹಾಯಕ್ಕಾಗಿ ಸಹಿ

ಮೇ 10ರ ನಂತರ ಯಾವುದೇ ಭಾರತೀಯ ಸೈನಿಕರು ದೇಶದಲ್ಲಿ ಇರುವುದಿಲ್ಲ. ಸಮವಸ್ತ್ರದಲ್ಲಾಗಲಿ, ಸಾಮಾನ್ಯ ಉಡುಪಿನಲ್ಲಾಗಲಿ. ಭಾರತೀಯ ಸೇನೆ ಯಾವುದೇ ರೀತಿಯ ಬಟ್ಟೆ ಧರಿಸಿ ಈ ದೇಶದಲ್ಲಿ ಇರುವುದಿಲ್ಲ. ನಾನು ಇದನ್ನು ಆತ್ಮವಿಶ್ವಾಸದಿಂದ ಹೇಳುತ್ತೇನೆ. ಮಾಲ್ಡೀವ್ಸ್ ಚೀನಾದೊಂದಿಗೆ ಉಚಿತ ಮಿಲಿಟರಿ ನೆರವು ಪಡೆಯುವ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಅಧ್ಯಕ್ಷ ಈ ಹೇಳಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com