ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಆಸಿಫ್‌ ಅಲಿ ಜರ್ದಾರಿ ಆಯ್ಕೆ, 2ನೇ ಬಾರಿಗೆ ಆರಿಸಿ ಬಂದ PPPಯ ಹಿರಿಯ ನಾಯಕ

ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (PPP) ಹಿರಿಯ ನಾಯಕ ಆಸಿಫ್‌ ಅಲಿ ಜರ್ದಾರಿ ಆಯ್ಕೆಯಾಗಿದ್ದಾರೆ.
ಆಸಿಫ್‌ ಅಲಿ ಜರ್ದಾರಿ
ಆಸಿಫ್‌ ಅಲಿ ಜರ್ದಾರಿ

ಲಾಹೋರ್: ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (PPP) ಹಿರಿಯ ನಾಯಕ ಆಸಿಫ್‌ ಅಲಿ ಜರ್ದಾರಿ ಆಯ್ಕೆಯಾಗಿದ್ದಾರೆ.

2ನೇ ಬಾರಿಗೆ ಪಾಕಿಸ್ತಾನದ ಅಧ್ಯಕ್ಷ ಚುಕ್ಕಾಣಿ ಜರ್ದಾರಿ ಪಾಲಾಗಿದ್ದು, ಶನಿವಾರ ನಡೆದ ಅಧ್ಯಕ್ಷರ ಚುನಾವಣೆಯ ವೇಳೆ ಆಸಿಫ್‌ ಅಲಿ ಜರ್ದಾರಿ ಗೆಲುವು ಕಾಣುವ ಮೂಲಕ ಪಾಕಿಸ್ತಾನದ ಅಧ್ಯಕ್ಷರೆನಿಸಿಕೊಂಡಿದ್ದಾರೆ. ಇದರೊಂದಿಗೆ ಪಾಕಿಸ್ತಾನದ 14ನೇ ಅಧ್ಯಕ್ಷ ಎನ್ನುವ ಕೀರ್ತಿ ಅವರದಾಗಿದೆ.

ಆಸಿಫ್‌ ಅಲಿ ಜರ್ದಾರಿ
ಇಮ್ರಾನ್ ಖಾನ್ ಪರ ಅಭ್ಯರ್ಥಿಗೆ ಹಿನ್ನಡೆ: 2ನೇ ಬಾರಿಗೆ ಪಾಕಿಸ್ತಾನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಆಯ್ಕೆ

ಪಿಪಿಪಿಯ ಹಿರಿಯ ನಾಯಕರಾಗಿರುವ ಆಸಿಫ್‌ ಅಲಿ ಜರ್ದಾರಿ, 2ನೇ ಬಾರಿಗೆ ಅಧ್ಯಕ್ಷ ಹುದ್ದೆ ವಹಿಸಿಕೊಂಡ ಹಿರಿಯ ನಾಗರೀಕ ಎನಿಸಿಕೊಂಡಿದ್ದಾರೆ. ಪಿಪಿಪಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನೇತೃತ್ವದ ಸಮ್ಮಿಶ್ರ ಸರ್ಕಾರದ ಜಂಟಿ ಅಭ್ಯರ್ಥಿ ಜರ್ದಾರಿ ಅವರು 255 ಮತಗಳನ್ನು ಪಡೆದುಕೊಂಡರೆ, ಇಮ್ರಾನ್ ಖಾನ್ ಬೆಂಬಲಿತ ಸುನ್ನಿ ಇತ್ತೆಹಾದ್ ಕೌನ್ಸಿಲ್ (ಎಸ್‌ಐಸಿ) ಅಭ್ಯರ್ಥಿ ಮಹಮೂದ್ ಖಾನ್ ಅಚಕ್ಜಾಯ್ 119 ಮತಗಳನ್ನು ಪಡೆದುಕೊಂಡರು.

ಪಿಪಿಪಿ ಮತ್ತು ಪಿಎಂಎಲ್‌-ಎನ್‌ ನಡುವೆ ಹೊಸದಾಗಿ ರೂಪುಗೊಂಡ ಒಕ್ಕೂಟದಲ್ಲಿ 68 ವರ್ಷ ವಯಸ್ಸಿನ ಜರ್ದಾರಿ, ರಾಷ್ಟ್ರದ ಅಧ್ಯಕ್ಷರಾಗಿ ಮರು ಆಯ್ಕೆ ಆಗುತ್ತಾರೆ ಎನ್ನುವ ಸುಳಿವು ಅದಾಗಲೇ ಸಿಕ್ಕಿತ್ತು. ಉದ್ಯಮಿ ಹಾಗೂ ರಾಜಕಾರಣಿಯೂ ಆಗಿರುವ ಜರ್ದಾರಿ, ಪಾಕಿಸ್ತಾನದ ಮಾಜಿ ಪ್ರಧಾನಿ ಬೆನ್‌ಜೀರ್‌ ಭುಟ್ಟೋ ಅವರ ಪತಿ. 2008 ರಿಂದ 2013ರವರೆಗೆ ಇವರು ಪಾಕಿಸ್ತಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಆಸಿಫ್‌ ಅಲಿ ಜರ್ದಾರಿ
ಪಾಕಿಸ್ತಾನ ಚುನಾವಣೆ: 100 ಸ್ಥಾನಗಳಲ್ಲಿ ಇಮ್ರಾನ್ ಖಾನ್ ಬೆಂಬಲಿತ ಪಪಕ್ಷೇತರರಿಗೆ ಗೆಲುವು, 'ಏಕೀಕೃತ ಸರ್ಕಾರ'ಕ್ಕೆ ಸೇನೆ ಕರೆ

2ನೇ ಬಾರಿಗೆ ಆಯ್ಕೆ; ಮೊದಲ ಪಾಕಿಸ್ತಾನಿ ನಾಯಕ

ಜರ್ದಾರಿ ಅವರು ಪಾಕಿಸ್ತಾನದ ಇತಿಹಾಸದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ನಾಗರಿಕರಾಗಿದ್ದಾರೆ. ಕಳೆದ ವರ್ಷ ಐದು ವರ್ಷಗಳ ಅವಧಿ ಮುಗಿಸಿರುವ ಡಾ.ಆರಿಫ್ ಅಲ್ವಿ ಅವರ ಸ್ಥಾನವನ್ನು ಅವರು ವಹಿಸಿಕೊಳ್ಳಲಿದ್ದಾರೆ. ಆದರೆ, ಹೊಸ ಸರ್ಕಾರ ಸಂಪೂರ್ಣವಾಗಿ ರಚನೆಯಾಗದ ಕಾರಣ ಅವರು ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com