Moscow Concert Attack: ದಾಳಿ ನಡೆಸಿದ ಬಂದೂಕುಧಾರಿಗಳ ವಿಡಿಯೊ ಶೇರ್ ಮಾಡಿದ ISIS

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಸಂಘಟನೆ ಉಗ್ರರ ದಾಳಿ ವಿಡಿಯೋ ಬಿಡುಗಡೆ ಮಾಡಿದೆ.
ಮಾಸ್ಕೋದಲ್ಲಿ ಉಗ್ರರ ದಾಳಿ
ಮಾಸ್ಕೋದಲ್ಲಿ ಉಗ್ರರ ದಾಳಿ

ಮಾಸ್ಕೋ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಸಂಘಟನೆ ಉಗ್ರರ ದಾಳಿ ವಿಡಿಯೋ ಬಿಡುಗಡೆ ಮಾಡಿದೆ.

ಮಾಸ್ಕೋದ ಕ್ರೋಕಸ್ ಸಿಟಿ ಹಾಲ್ ನಲ್ಲಿ ಸಂಗೀತ ಕಾರ್ಯಕ್ರಮದ ಮೇಲೆ ದಾಳಿ ಮಾಡಿ ಮಾರಣ ಹೋಮ ಬಂದೂಕುಧಾರಿಗಳು ಚಿತ್ರೀಕರಿಸಿದ ವೀಡಿಯೊವನ್ನು ಜಿಹಾದಿ ಗುಂಪು ಇಸ್ಲಾಮಿಕ್ ಸ್ಟೇಟ್ (ISIS) ಸಾಮಾನ್ಯವಾಗಿ ಬಳಸುವ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಲಾಗಿದೆ.

ಮಾಸ್ಕೋದಲ್ಲಿ ಉಗ್ರರ ದಾಳಿ
EXPLAINER: 130 ಮಂದಿ ಸಾವಿಗೆ ಕಾರಣವಾದ ಮಾಸ್ಕೋ ಕನ್ಸರ್ಟ್ ಹಾಲ್ ದಾಳಿ ಬಗ್ಗೆ ಎಷ್ಟು ಗೊತ್ತು?

ಈ ಬಗ್ಗೆ ಗುಪ್ತಚರ ಸಂಸ್ಥೆ ಮಾಹಿತಿ ನೀಡಿದ್ದು, ಒಂದೂವರೆ ನಿಮಿಷದ ಈ ವಿಡಿಯೋದಲ್ಲಿ ಮಸುಕುಧಾರಿಗಳು ಘೋಷಣೆ ಕೂಗುತ್ತಾ ಅಸಾಲ್ಟ್ ರೈಫಲ್​ಗಳನ್ನು ಮತ್ತು ಚಾಕುಗಳನ್ನು ಹಿಡಿದು ಅಲ್ಲಿ ನೆರೆದಿದ್ದವರ ಮೇಲೆ ದಾಳಿ ನಡೆಸಿದ್ದಾರೆ. ವಿಡಿಯೋದಲ್ಲಿ ದಾಳಿಕೋರರು ಹಲವಾರು ಸುತ್ತು ಗುಂಡುಗಳನ್ನು ಹಾರಿಸುತ್ತಿದ್ದು, ಈ ವೇಳೆ ಸುತ್ತಲಿನ ಪ್ರದೇಶಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ.

ರಷ್ಯಾದ ಸೈಟ್ ಮಾನಿಟರಿಂಗ್ ಗ್ರೂಪ್ ವರದಿ ಪ್ರಕಾರ ಈ ವೀಡಿಯೊ ಐಎಸ್​ನ ಸುದ್ದಿ ವಿಭಾಗವಾದ ಅಮಾಕ್​ ನ ಟೆಲಿಗ್ರಾಮ್ ಖಾತೆಯಲ್ಲಿ ಈ ವಿಡಿಯೋಗಳು ಬಿಡುಗಡೆಯಾಗಿದೆ ಎಂದು ಹೇಳಲಾಗಿದೆ.

ಶುಕ್ರವಾರ ಸಂಜೆ ನಡೆದ ಈ ದಾಳಿಯಲ್ಲಿ ಕನಿಷ್ಠ 133 ಜನರು ಮೃತಪಟ್ಟಿದ್ದು, ಇದು ಯುರೋಪಿಯನ್ ನೆಲದಲ್ಲಿ ಜಿಹಾದಿ ಗುಂಪು ನಡೆಸಿದ ಅತ್ಯಂತ ಭೀಕರ ದಾಳಿಯಾಗಿದೆ. ರಷ್ಯಾದ ಭದ್ರತಾ ಪಡೆ ಪ್ರಕಾರ, 11 ಜನರನ್ನು ಬಂಧಿಸಿದೆ. ಅವರಲ್ಲಿ ದಾಳಿಯ ನಾಲ್ವರು ಶಂಕಿತ ಉಗ್ರರೂ ಸೇರಿಕೊಂಡಿದ್ದಾರೆ. ಅವರು ಮಾಸ್ಕೋ ಪೊಲೀಸರ ಪ್ರಕಾರ ಅವರೆಲ್ಲರೂ ಅಲ್ಲಿಂದ ಉಕ್ರೇನ್ ಗೆ ತೆರಳುತ್ತಿದ್ದರು ಎಂದು ಆರೋಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com