ಇರಾನ್ ವಶಪಡಿಸಿಕೊಂಡಿದ್ದ ಹಡಗು
ಇರಾನ್ ವಶಪಡಿಸಿಕೊಂಡಿದ್ದ ಹಡಗು

16 ಭಾರತೀಯರು ಸೇರಿದಂತೆ ಇಸ್ರೇಲ್ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಬಿಡುಗಡೆ ಮಾಡಿದ ಇರಾನ್!

ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮಿರ್‌- ಬ್ಡೊಲ್ಲಾಹಿಯಾನ್ ಮತ್ತು ಎಸ್ಟೋನಿಯನ್‌ನ ಸಚಿವ ಮಾರ್ಗಸ್ ತ್ಸಾಹ್ಕ್ನಾ ನಡುವೆ ಶುಕ್ರವಾರ ನಡೆದ ದೂರವಾಣಿ ಸಂಭಾಷಣೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: 17 ಭಾರತೀಯರು ಸೇರಿದಂತೆ ಒಟ್ಟು 25 ಸಿಬ್ಬಂದಿಯಿದ್ದ ಇಸ್ರೇಲ್ ಗೆ ಸೇರಿದ್ದ ಪೋರ್ಚುಗೀಸ್ ಧ್ವಜವುಳ್ಳ ಕಾರ್ಗೋ ನೌಕೆ MSC ಏರೀಸ್‌ನ ಎಲ್ಲಾ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಇರಾನ್ ತಿಳಿಸಿದೆ.

ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮಿರ್‌- ಬ್ಡೊಲ್ಲಾಹಿಯಾನ್ ಮತ್ತು ಎಸ್ಟೋನಿಯನ್‌ನ ಸಚಿವ ಮಾರ್ಗಸ್ ತ್ಸಾಹ್ಕ್ನಾ ನಡುವೆ ಶುಕ್ರವಾರ ನಡೆದ ದೂರವಾಣಿ ಸಂಭಾಷಣೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ದೂರವಾಣಿ ಸಂಭಾಷಣೆಯ ಸಮಯದಲ್ಲಿ, ಉಭಯ ಕಡೆಯವರು ದ್ವಿಪಕ್ಷೀಯ ಸಂಬಂಧಗಳು ಮತ್ತು ಇತ್ತೀಚಿನ ಸ್ಥಿತಿ, ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು ಎಂದು ಇರಾನ್ ವಿದೇಶಾಂಗ ಸಚಿವಾಲಯ ಹೇಳಿದೆ.

ಇದಕ್ಕೂ ಮೊದಲು ಇಸ್ರೇಲ್‌ನ ಸರಕು ಹಡಗಿನಲ್ಲಿದ್ದ 17 ಭಾರತೀಯ ಸಿಬ್ಬಂದಿ ಪೈಕಿ ಒಬ್ಬರಾದ ಕೇರಳದ ತ್ರಿಶೂರ್‌ನ ಆನ್ ಟೆಸ್ಸಾ ಜೋಸೆಫ್ ಅವರನ್ನು ಬಿಡುಗಡೆ ಮಾಡಲಾಗಿತ್ತು. ಅವರು ಏಪ್ರಿಲ್ 18ರಂದು ಸುರಕ್ಷಿತವಾಗಿ ಮನೆಗೆ ಮರಳಿದ್ದರು. 17 ಭಾರತೀಯ ಸಿಬ್ಬಂದಿ ಪೈಕಿ ಒಬ್ಬರು ಭಾರತಕ್ಕೆ ಮರಳಿದ್ದಾರೆ ಮತ್ತು ಇತರರು ಸುರಕ್ಷಿತರಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಏಪ್ರಿಲ್ 25ರಂದು ಹೇಳಿತ್ತು. ಕೆಲವು ಒಪ್ಪಂದಗಳನ್ನು ಪೂರೈಸಿದ ನಂತರ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿತ್ತು. ಅದರಂತೆ ಇದೀಗ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ.

ಇರಾನ್ ವಶಪಡಿಸಿಕೊಂಡಿದ್ದ ಹಡಗು
ಇರಾನ್ ಸೀಜ್ ಮಾಡಿದ ಹಡಗಿನಲ್ಲಿದ್ದ 17 ಭಾರತೀಯರ ಪೈಕಿ ಕೇರಳದ ಏಕೈಕ ಮಹಿಳಾ ಸಿಬ್ಬಂದಿ ತಾಯ್ನಾಡಿಗೆ ವಾಪಸ್

ನಮ್ಮ ಪ್ರಾದೇಶಿಕ ಜಲಪ್ರದೇಶದಲ್ಲಿ ತನ್ನ ರಾಡಾರ್ ಅನ್ನು ಆಫ್ ಮಾಡಿದ ಮತ್ತು ನೌಕಾಯಾನದ ಭದ್ರತೆಗೆ ಅಪಾಯವನ್ನುಂಟು ಮಾಡಿದ ಕಾರಣಕ್ಕೆ ಹಡಗನ್ನು ನ್ಯಾಯಾಂಗ ನಿಯಮಗಳ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಇರಾನ್‌ ಹೇಳಿತ್ತು.

ಎಸ್ಟೋನಿಯನ್ ಅಧಿಕಾರಿಗಳ ನಡುವಿನ ದೂರವಾಣಿ ಚರ್ಚೆಯ ಸಮಯದಲ್ಲಿ ಇರಾನ್, ಮಾನವೀಯ ಆಧಾರದ ಮೇಲೆ ಈಗಾಗಲೇ ಹಡಗಿನ ಎಲ್ಲ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ. ಎಲ್ಲ ದೇಶಗಳ ಸಿಬ್ಬಂದಿ ತಮ್ಮ ತಾಯ್ನಾಡಿಗೆ ತೆರಳಬಹುದ ಎಂದು ಹೇಳಿತ್ತು. ದಿನಗಳ ಹಿಂದೆ ಸಿರಿಯಾದಲ್ಲಿರುವ ಇರಾನ್‌ನ ದೂತಾವಾಸ ಕಚೇರಿ ಮೇಲೆ ದಾಳಿ ನಡೆಸಿದ ಇಸ್ರೇಲ್ ಕ್ರಮವನ್ನು ಖಂಡಿಸಿ ಇರಾನ್ ಯುದ್ಧ ಪ್ರಾರಂಭಿಸಲು ಮುಂದಾಗಿತ್ತು. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆಯೇ ಹಡಗನ್ನು ವಶಪಡಿಸಿಕೊಂಡಿದ್ದು ಆತಂಕ ಸೃಷ್ಟಿಸಿತ್ತು. ಇದೀಗ ಆತಂಕ ನಿವಾರಣೆಯಾಗಿದೆ.

ನಾವು ಈ ಎಲ್ಲಾ 16 ನಾವಿಕರ ಸಂಪರ್ಕವನ್ನು ಸ್ಥಾಪಿಸಲು ಸಾಧ್ಯವಾಗಿದೆ. ಅವರು ಆರೋಗ್ಯವಾಗಿದ್ದಾರೆ, ನಾವು ಕಾನ್ಸುಲರ್ ಪ್ರವೇಶವನ್ನು ಹೊಂದಿದ್ದೇವೆ. ಅವರು ಭಾರತಕ್ಕೆ ಹಿಂದಿರುಗುವ ಬಗ್ಗೆ, ಇದು ಅವರ ಒಪ್ಪಂದದ ಬಾಧ್ಯತೆಗಳನ್ನು ಒಳಗೊಂಡಂತೆ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದೆ. ಅವರ ಬಿಡುಗಡೆಗಾಗಿ ನಾವು ಅವರೊಂದಿಗೆ ಮತ್ತು ಇರಾನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ,'' ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com