ಲಾಹೋರ್‌ನಲ್ಲಿ ಮಾಲಿನ್ಯ ಎಲ್ಲಾ ದಾಖಲೆಗಳನ್ನು ಮುರಿದಿದೆ; ಭಾರತದಿಂದ ವಿಷಪೂರಿತ ಗಾಳಿ ಕಾರಣ: ಪಾಕ್ ಆರೋಪ

ಭಾರತದಿಂದ ಬರುವ ಗಾಳಿಯಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ. ಭಾರತದ ನಗರಗಳಾದ ಅಮೃತಸರ ಮತ್ತು ಚಂಡೀಗಢದಿಂದ ಬರುವ ಪೂರ್ವ ದಿಕ್ಕಿನ ಮಾರುತಗಳ ಮೇಲೆ ಲಾಹೋರ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 1,000 ಕ್ಕಿಂತ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಮಾಲಿನ್ಯ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಅದರಲ್ಲೂ ಭಾರತದ ಪಕ್ಕದ ನಗರವಾದ ಲಾಹೋರ್‌ನಲ್ಲಿ ಹೊಗೆ ಮಂಜು ಜನಜೀವನವನ್ನು ಕಷ್ಟಕರವಾಗಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪಂಜಾಬ್‌ನ ಮರ್ಯಮ್ ನವಾಜ್ ಸರ್ಕಾರವು ಪಾಕ್ ಸರ್ಕಾರವನ್ನು ಭಾರತದೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸುವಂತೆ ಕೇಳಿಕೊಂಡಿದೆ. ಭಾರತದಿಂದ ಬರುವ ಗಾಳಿಯಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ. ಲಾಹೋರ್ ಗಾಳಿಯು ವಿಷಪೂರಿತವಾದ ನಂತರ ಶಾಲೆಗಳನ್ನು ಮುಚ್ಚಬೇಕಾಗಿ ಬಂದಿದ್ದು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪಂಜಾಬ್ ಸರ್ಕಾರವು ಹೇಳಿದೆ.

ಡಾನ್ ವರದಿಯ ಪ್ರಕಾರ, ಪಂಜಾಬ್ ಸರ್ಕಾರದ ಪರಿಸರ ಖಾತೆ ಸಚಿವ ಮರ್ಯಮ್ ಔರಂಗಜೇಬ್ ಅವರು ಭಾರತದಿಂದ ಬರುವ ಗಾಳಿಯಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ. ಭಾರತದ ನಗರಗಳಾದ ಅಮೃತಸರ ಮತ್ತು ಚಂಡೀಗಢದಿಂದ ಬರುವ ಪೂರ್ವ ದಿಕ್ಕಿನ ಮಾರುತಗಳ ಮೇಲೆ ಲಾಹೋರ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 1,000 ಕ್ಕಿಂತ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ. ಪಂಜಾಬ್ ಮಾಲಿನ್ಯದ ವಿಷಯವನ್ನು ಭಾರತದೊಂದಿಗೆ ಪ್ರಸ್ತಾಪಿಸಲು ತನ್ನ ಸರ್ಕಾರವು ತನ್ನ ವಿದೇಶಾಂಗ ಕಚೇರಿಗೆ ಸೋಮವಾರ ಪತ್ರ ಬರೆಯಲಿದೆ ಎಂದು ಮರ್ಯಮ್ ಔರಂಗಜೇಬ್ ಹೇಳಿದ್ದಾರೆ.

'ಭಾರತದಿಂದ ಲಾಹೋರ್ ಕಡೆಗೆ ಬರುತ್ತಿರುವ ಗಾಳಿಯು ಮಾಲಿನ್ಯದ ಮಟ್ಟವನ್ನು ಅಪಾಯಕಾರಿ ಮಟ್ಟಕ್ಕೆ ಕೊಂಡೊಯ್ಯುತ್ತಿದೆ. ಒಂದು ವಾರದವರೆಗೆ ಸುಧಾರಣೆಯ ಭರವಸೆ ಇಲ್ಲ, ಆದ್ದರಿಂದ ಹಿರಿಯರು ಮತ್ತು ಮಕ್ಕಳು ವಿಶೇಷವಾಗಿ ಜಾಗರೂಕರಾಗಿರಬೇಕು. ಹೊಗೆಯನ್ನು ನಿಗ್ರಹಿಸಲು ಜಂಟಿ ಪ್ರಯತ್ನಗಳ ಕುರಿತು ಮಾತುಕತೆಗಾಗಿ ಭಾರತೀಯ ಅಧಿಕಾರಿಗಳನ್ನು ಸಂಪರ್ಕಿಸಲು ನಮ್ಮ ಸರ್ಕಾರ ವಿದೇಶಾಂಗ ಕಚೇರಿಗೆ ಪತ್ರ ಬರೆಯಲಿದೆ ಎಂದರು.

14 ಮಿಲಿಯನ್ ಜನಸಂಖ್ಯೆ ಹೊಂದಿರುವ ಲಾಹೋರ್ ಕಳೆದ ಹಲವು ದಿನಗಳಿಂದ ಹೊಗೆಯಿಂದ ಆವೃತವಾಗಿದೆ. ಇವು ಡೀಸೆಲ್ ಹೊಗೆ, ಕಾಲೋಚಿತ ಹೊಗೆ ಮತ್ತು ಮಂಜು ಮತ್ತು ಚಳಿಗಾಲದ ಶೀತದಿಂದ ಉಂಟಾಗುವ ಮಾಲಿನ್ಯಕಾರಕಗಳ ಮಿಶ್ರಣವಾಗಿದೆ. ಶನಿವಾರದಂದು, ನಗರದ AQI 1,000 ದಾಟಿದೆ. ಇದು 300 ಮಟ್ಟಕ್ಕಿಂತ ಹೆಚ್ಚು ಅಪಾಯಕಾರಿ ಮತ್ತು ಆರೋಗ್ಯಕ್ಕೆ ತುಂಬಾ ಕೆಟ್ಟದು ಎಂದು ಪರಿಗಣಿಸಲಾಗಿದೆ.

ಸಂಗ್ರಹ ಚಿತ್ರ
ಪುಣೆ: ಪಟಾಕಿ ಸಿಡಿಸುವಾಗ ವೇಗವಾಗಿ ಬಂದ ಕಾರು ಡಿಕ್ಕಿ, ಯುವಕ ದುರ್ಮರಣ!

ಭಗವಂತ್ ಮಾನ್ ಅವರಿಗೆ ಪತ್ರ ಬರೆಯುತ್ತೇನೆ: ಮರ್ಯಮ್ ನವಾಜ್

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್, ಹೊಗೆ ಮತ್ತು ಮಾಲಿನ್ಯದ ಸಮಸ್ಯೆ ಪಂಜಾಬ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ಎರಡೂ ಕಡೆ ಇದೆ ಎಂದು ಹೇಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಾವು ರಾಜಕೀಯವನ್ನು ಬಿಟ್ಟು ಈ ವಿಷಯದಲ್ಲಿ ಒಗ್ಗಟ್ಟಿನಿಂದ ಹೋರಾಡಬೇಕು. ಇದರಿಂದ ಎರಡೂ ಕಡೆಯ ಜನರು ಉತ್ತಮ ಆರೋಗ್ಯವನ್ನು ಪಡೆಯುತ್ತಾರೆ. ಈ ಕುರಿತು ಪಂಜಾಬ್ ಸಿಎಂ ಭಗವಂತ್ ಮಾನ್ ಅವರಿಗೆ ಪತ್ರ ಬರೆಯುವುದಾಗಿಯೂ ಹೇಳಿದ್ದಾರೆ.

ಲಾಹೋರ್‌ನಲ್ಲಿ ನಡೆದ ದೀಪಾವಳಿ ಕಾರ್ಯಕ್ರಮವೊಂದರಲ್ಲಿ ಲಾಹೋರ್‌ ಅನ್ನು ಆವರಿಸಿಕೊಂಡಿರುವ ಹೊಗೆ ಕುರಿತಂತೆ ನಾವು ಭಾರತದೊಂದಿಗೆ ಸಮನ್ವಯ ಸಾಧಿಸಬೇಕಾಗಿದೆ ಎಂದು ಮೇರಿಯಮ್ ಹೇಳಿದರು. ನಾನು ಭಾರತದಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಪತ್ರ ಬರೆಯಲು ಯೋಚಿಸುತ್ತಿದ್ದೇನೆ ಏಕೆಂದರೆ ಇದು ರಾಜಕೀಯ ವಿಷಯವಲ್ಲ ಆದರೆ ಮಾನವೀಯ ಸಮಸ್ಯೆಯಾಗಿದೆ. ನಾವೂ ಈ ದಿಸೆಯಲ್ಲಿ ಹೆಜ್ಜೆ ಇಡುತ್ತಿದ್ದರೆ ಭಾರತದ ಕಡೆಯಿಂದಲೂ ಉಪಕ್ರಮ ಆಗಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com