Donald Trump ಗೆಲುವು: ಅಮೆರಿಕ ವಲಸಿಗರಲ್ಲಿ ಗಡಿಪಾರು ಆತಂಕ; ಪ್ರಚೋದನಾತ್ಮಕ ಸಂದೇಶಗಳ ಕುರಿತು FBI ತನಿಖೆ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್ ಗೆಲುವು, ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ವಲಸಿಗರು ಅಥವಾ ಸಂಭಾವ್ಯ ವಲಸಿಗರಲ್ಲಿ ಆತಂಕವನ್ನುಂಟು ಮಾಡಿದೆ.
Donald Trump
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್ ಗೆಲುವು, ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ವಲಸಿಗರು ಅಥವಾ ಸಂಭಾವ್ಯ ವಲಸಿಗರಲ್ಲಿ ಆತಂಕವನ್ನುಂಟು ಮಾಡಿದೆ.

ವಲಸೆಯನ್ನು ನಿಯಂತ್ರಿಸುವುದಾಗಿ ಟ್ರಂಪ್ ಈ ಹಿಂದೆ ಪ್ರತಿಜ್ಞೆ ಮಾಡಿದ್ದು, ಇದೀಗ ಅವರು ಅಧಿಕಾರಕ್ಕೆ ಏರಿರುವ ಕಾರಣ ವಲಸಿಗರು ತಮ್ಮ ಯೋಜನೆಗಳನ್ನು ಬದಲಾಯಿಸುತ್ತಿದ್ದು, ವಲಸಿಗರ ಕಳ್ಳಸಾಗಾಣಿಕೆ ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಟ್ರಂಪ್ ಅವರ ಈ ಹಿಂದಿನ ಆಡಳಿತ ಅವಧಿಯಲ್ಲಿ ಮೆಕ್ಸಿಕೊ ಗಡಿ ಭಾಗದ ನಗರಗಳಲ್ಲಿ ವಲಸಿಗರ ಸಂಖ್ಯೆ ಅಧಿಕವಾಗಿತ್ತು. ಕೆಲವು ಗುಂಪುಗಳು ಅವರನ್ನು ಸುಲಿಗೆ ಮಾಡುವುದು, ಅಪಹರಣ ಮಾಡುವುದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತಿದ್ದವು. ಪ್ರತಿನಿತ್ಯ ನೂರಾರು ಜನರು ವಲಸೆ ಬರುತ್ತಿದ್ದರು ಮತ್ತು ಅಮೆರಿಕದ ಪೌರತ್ವ ಪಡೆಯಲು ಹಲವಾರು ವರ್ಷಗಳಿಂದ ಕಾಯುತ್ತಿದ್ದರು. 2023ರಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಸಿಬಿಪಿ ಎಂಬ ಯೋಜನೆ ಮೂಲಕ ವಲಸಿಗರಿಗೆ ಕೆಲವು ಅನುಕೂಲಗಳನ್ನು ಮಾಡಿಕೊಟ್ಟಿದ್ದರು. ಇದರಿಂದಾಗಿ ಗಡಿಭಾಗದಲ್ಲಿದ್ದವರು ಕಾನೂನಿನ ಅಡಿಯಲ್ಲಿ ಅಮೆರಿಕದೊಳಗೆ ಪ್ರವೇಶಿಸಲು ಪ್ರಯತ್ನಿಸಿದರು.

ಇದೇ ಕಾರಣಕ್ಕೆ ಟ್ರಂಪ್ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, 'ಇದು ಬೆಲೆಯ ಪ್ರಶ್ನೆಯಲ್ಲ... ನಮಗೆ ಯಾವುದೇ ಆಯ್ಕೆಯಿಲ್ಲ.. "ಕೊಲೆಗಾರರು" ಮತ್ತು "ಡ್ರಗ್ ಲಾರ್ಡ್‌ಗಳು" ರಾಷ್ಟ್ರೀಯ ಭದ್ರತೆಗೆ ಬೆದರಿಕೆ' ಎಂದು ಹೇಳುವ ಮೂಲಕ ತಮ್ಮ ವಲಸೆ ನೀತಿ ಕುರಿತು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

18ನೇ ಶತಮಾನದ ಯುದ್ಧಕಾಲದ ಕಾನೂನಾಗಿರುವ ಏಲಿಯನ್ ಎನಿಮೀಸ್ ಆಕ್ಟ್ ರೀತಿಯ ಕಾನೂನು ಜಾರಿಗೆ ತರುವ ಕುರಿತು ಸುಳಿವು ನೀಡಿದ್ದಾರೆ. ಟ್ರಂಪ್ ಸಲಹೆಗಾರ ಸ್ಟೀಫನ್ ಮಿಲ್ಲರ್ ಪ್ರಕಾರ, 'ಈ ಕಾನೂನು ದಾಖಲೆರಹಿತ ವಲಸಿಗರಿಗೆ ಸರಿಯಾದ ಪ್ರಕ್ರಿಯೆಯನ್ನು ಅಮಾನತುಗೊಳಿಸಲು ಅನುಮತಿಸುತ್ತದೆ. ಟ್ರಂಪ್ ಅವರ ತಂಡವು ಬಂಡಾಯ ಕಾಯಿದೆಯ ಬಳಕೆಯನ್ನು ಮೌಲ್ಯಮಾಪನ ಮಾಡುತ್ತಿದೆ ಎಂದು ಮಿಲ್ಲರ್ ಹೇಳಿದ್ದಾರೆ.

Donald Trump
Donald Trump ಆಡಳಿತದಲ್ಲಿ ಭಾರತಕ್ಕೆ ಉಂಟಾಗಬಹುದಾದ ಲಾಭ-ನಷ್ಟಗಳ ಲೆಕ್ಕಾಚಾರ ಹೀಗಿದೆ...

ಸಾಮೂಹಿಕ ಗಡಿಪಾರು

ಇನ್ನು ಸಿಬಿಪಿಯನ್ನು ಕೊನೆಗೊಳಿಸುವ ಯೋಚನೆಯನ್ನು ಟ್ರಂಪ್ ಹೊಂದಿದ್ದು, ನಿರಾಶ್ರಿತರ ಪುನರ್‌ವಸತಿಗೆ ನಿರ್ಬಂಧ ಹೇರುವ ಮತ್ತು ಸಾಮೂಹಿಕ ಗಡಿಪಾರು ಮಾಡುವ ಸಾಧ್ಯತೆಗಳಿವೆ. ಸಾಮೂಹಿಕ ಗಡಿಪಾರಿನ ಬಗ್ಗೆ ಟ್ರಂಪ್ ಈ ಹಿಂದೆಯೂ ಎಚ್ಚರಿಕೆ ನೀಡಿದ್ದರು ಆದರೆ ಅದನ್ನು ಕಾರ್ಯಗತಗೊಳಿಸಿರಲಿಲ್ಲ ಆದರೆ ಈ ಬಾರಿ ಈ ಬಗ್ಗೆ ಗಮನಹರಿಸುವ ಸಾಧ್ಯತೆ ಹೆಚ್ಚಿದೆ.

ಟ್ರಂಪ್‌ ಅವರ ವಲಸಿಗರ ನೀತಿಯಿಂದ, ವಲಸಿಗರು ರೋಸಿ ಹೋಗಿದ್ದರು. ಈಗ ಮತ್ತೆ ಅದು ಮರುಕಳಿಸುತ್ತದೆ ಎಂಬ ಭೀತಿ ವಲಸಿಗರಲ್ಲಿ ಆವರಿಸಿದೆ. ವಲಸಿಗರ ಕಳ್ಳಸಾಗಣೆಯ ಆದಾಯವು ಮಾದಕ ವಸ್ತುಗಳ ಜಾಲದ ಅದಾಯಕ್ಕಿಂತ ಹೆಚ್ಚಾಗಿರುವುದರಿಂದ ಯೋಜಿತ ಅಪರಾಧಗಳು ಹೆಚ್ಚಾಗುತ್ತವೆ ಎಂದು ಅಮೆರಿಕದಲಿದ್ದ ಮೆಕ್ಸಿಕೊದ ಮಾಜಿ ರಾಯಭಾರಿ ಮಾರ್ಥ ಬರ್ಸೇನಾ ಅವರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸಿಗರ ಸಮಿತಿಯ ಪ್ರಕಾರ ವಿಶ್ವದಲ್ಲಿ 28.1 ಕೋಟಿ ವಲಸಿಗರಿದ್ದಾರೆ. ಅಂದರೆ ಜಾಗತಿಕ ಜನಸಂಖ್ಯೆಯ ಶೇ 3.6 ರಷ್ಟು ವಲಸಿಗರಿದ್ದಾರೆ.

Donald Trump
US Election 2024: ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿಯಿತೇ? ಮುಂದಿನ ಪ್ರಕ್ರಿಯೆ ಏನೇನು?

ಪ್ರಚೋದನಾತ್ಮಕ ಸಂದೇಶಗಳ ಕುರಿತು FBI ತನಿಖೆ

ಅತ್ತ ಡೊನಾಲ್ಡ್ ಟ್ರಂಪ್ ಅಧಿಕಾರದ ಚುಕ್ಕಾಣಿ ಹಿಡಿಯಲು ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಗುಲಾಮಗಿರಿಯನ್ನು ಪ್ರಚೋದಿಸುವ ಜನಾಂಗೀಯ ಆರೋಪದ ಅನಾಮಧೇಯ ಪಠ್ಯ ಸಂದೇಶಗಳ ಗೊಂದಲದ ಸರಣಿಯೂ ಆರಂಭವಾಗಿದೆ. ಅಲಬಾಮಾ, ಕ್ಯಾಲಿಫೋರ್ನಿಯಾ, ಓಹಿಯೋ, ಪೆನ್ಸಿಲ್ವೇನಿಯಾ ಮತ್ತು ಟೆನ್ನೆಸ್ಸಿಯಂತಹ ರಾಜ್ಯಗಳಲ್ಲಿ ಕಪ್ಪು ವ್ಯಕ್ತಿಗಳಿಗೆ ಗುಲಾಮಗಿರಿಯನ್ನು ಪ್ರಚೋದಿಸುವ ಜನಾಂಗೀಯ ಆರೋಪದ ಪ್ರಚೋದನಾತ್ಮಕ ಸಂದೇಶಗಳು ಬರುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಎಫ್‌ಬಿಐ ಮತ್ತು ಎಫ್‌ಸಿಸಿ ಸೇರಿದಂತೆ ಫೆಡರಲ್ ಏಜೆನ್ಸಿಗಳು ತನಿಖೆ ಮಾಡುತ್ತಿವೆ.

ಈ ಸಂದೇಶಗಳ ಮೂಲವನ್ನು ಪತ್ತೆಹಚ್ಚಲು ಮತ್ತು ಜನಾಂಗೀಯ ಬೆದರಿಕೆಯ ವ್ಯಾಪಕ ಅಭಿಯಾನದ ಭಾಗವಾಗಿದೆಯೇ ಎಂದು ನಿರ್ಧರಿಸಲು ರಾಜ್ಯ ಕಾನೂನು ಜಾರಿಯೊಂದಿಗೆ ಕೆಲಸ ಮಾಡುತ್ತಿದೆ. ನಾಗರಿಕ ಹಕ್ಕುಗಳ ವಕೀಲರು ಸಂದೇಶಗಳು ರವಾನೆಯಾಗಿರುವ ಸಮಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com