Donal Trump, Matt Gaetz
ಡೊನಾಲ್ಡ್ ಟ್ರಂಪ್, ಮ್ಯಾಟ್ ಗೇಟ್ಜ್

ಅಮೆರಿಕದ ಅಟಾರ್ನಿ ಜನರಲ್ ಆಗಿ ಮ್ಯಾಟ್ ಗೇಟ್ಜ್ ನೇಮಕ!

2024 ರ ಆಡಳಿತಕ್ಕಾಗಿ ಇತರ ಪ್ರಮುಖ ನೇಮಕಗಳನ್ನು ಘೋಷಿಸಿದ್ದಾರೆ. ಫ್ಲೋರಿಡಾದ ಸೆನೆಟರ್ ಮಾರ್ಕೊ ರೂಬಿಯೊ ಅವರನ್ನು ರಾಜ್ಯ ಕಾರ್ಯದರ್ಶಿ ಆಗಿ ಮತ್ತು ಮಾಜಿ ಕಾಂಗ್ರೆಸ್ ಮಹಿಳಾ ಲೆಫ್ಟಿನೆಂಟ್ ಕರ್ನಲ್ ತುಳಸಿ ಗಬ್ಬಾರ್ಡ್ ಅವರನ್ನು ರಾಷ್ಟ್ರೀಯ ಗುಪ್ತಚರ (DNI) ನಿರ್ದೇಶಕರಾಗಿ ನೇಮಕ ಮಾಡಿದ್ದಾರೆ.
Published on

ವಾಷಿಂಗ್ಟನ್: 2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ವಿರುದ್ಧ ಜಯಗಳಿಸಿದ ನಂತರ ನೂತನ ಚುನಾಯಿತ ಅಧ್ಯಕ್ಷ ಡೊನಾಲ್ ಟ್ರಂಪ್ ಬುಧವಾರ ಕಾಂಗ್ರೆಸ್‌ನ ಮ್ಯಾಟ್ ಗೇಟ್ಜ್ ಅವರನ್ನು ಯುನೈಟೆಡ್ ಸ್ಟೇಟ್ಸ್‌ನ ಅಟಾರ್ನಿ ಜನರಲ್ ಆಗಿ ನೇಮಕ ಮಾಡಿದ್ದಾರೆ.

ಅಲ್ಲದೇ, 2024 ರ ಆಡಳಿತಕ್ಕಾಗಿ ಇತರ ಪ್ರಮುಖ ನೇಮಕಗಳನ್ನು ಘೋಷಿಸಿದ್ದಾರೆ. ಫ್ಲೋರಿಡಾದ ಸೆನೆಟರ್ ಮಾರ್ಕೊ ರೂಬಿಯೊ ಅವರನ್ನು ರಾಜ್ಯ ಕಾರ್ಯದರ್ಶಿ ಆಗಿ ಮತ್ತು ಮಾಜಿ ಕಾಂಗ್ರೆಸ್ ಮಹಿಳಾ ಲೆಫ್ಟಿನೆಂಟ್ ಕರ್ನಲ್ ತುಳಸಿ ಗಬ್ಬಾರ್ಡ್ ಅವರನ್ನು ರಾಷ್ಟ್ರೀಯ ಗುಪ್ತಚರ (DNI) ನಿರ್ದೇಶಕರಾಗಿ ಟ್ರಂಪ್ ನೇಮಕ ಮಾಡಿದ್ದಾರೆ.

ಫ್ಲೋರಿಡಾದ ಕಾಂಗ್ರೆಸ್‌ನ ಮ್ಯಾಟ್ ಗೇಟ್ಜ್ ಅವರನ್ನು ಯುನೈಟೆಡ್ ಸ್ಟೇಟ್ಸ್‌ನ ಅಟಾರ್ನಿ ಜನರಲ್ ಆಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ಘೋಷಿಸಲು ಇದು ನನ್ನ ದೊಡ್ಡ ಗೌರವವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Donal Trump, Matt Gaetz
ಡೊನಾಲ್ಡ್ ಟ್ರಂಪ್ ಭರ್ಜರಿ ಜಯಭೇರಿ: ಎಲಾನ್ ಮಸ್ಕ್ ಗೆಲುವಿನ ರೂವಾರಿ? (ಜಾಗತಿಕ ಜಗಲಿ)

ಮ್ಯಾಟ್ ಅವರು ತುಂಬಾ ಪ್ರತಿಭಾನ್ವಿತ ಮತ್ತು ದೃಢವಾದ ವಕೀಲರಾಗಿದ್ದು, ವಿಲಿಯಂ ಮತ್ತು ಮೇರಿ ಕಾಲೇಜ್ ಆಫ್ ಲಾದಲ್ಲಿ ತರಬೇತಿ ಪಡೆದಿದ್ದಾರೆ, ಅವರು ನ್ಯಾಯಾಂಗ ಇಲಾಖೆಯಲ್ಲಿ ತೀರಾ ಅಗತ್ಯವಿರುವ ಸುಧಾರಣೆಯನ್ನು ಸಾಧಿಸುವ ಮೂಲಕ ಕಾಂಗ್ರೆಸ್‌ನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಎಂದು ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com