ವಾಷಿಂಗ್ಟನ್: ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವತ್ತ ತಮ್ಮ ಆಡಳಿತವು ಗಮನಹರಿಸಲಿದೆ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ, ಕಳೆದ 2 ವರ್ಷಗಳಿಂದ ಸಂಘರ್ಷದಲ್ಲಿ ಜನರ ಹತ್ಯೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ನಮ್ಮ ಸರ್ಕಾರದ ಆಡಳಿತವು ಪಶ್ಚಿಮ ಏಷ್ಯಾದಲ್ಲಿ ಶಾಂತಿಯನ್ನು ತರಲು ಸಹ ಕೆಲಸ ಮಾಡುತ್ತದೆ. ಮಧ್ಯಪ್ರಾಚ್ಯದಲ್ಲಿ ವಿಚಾರದ ಬಗ್ಗೆ ಗಮನಹರಿಸಿ ರಷ್ಯಾ-ಉಕ್ರೇನ್ ಯುದ್ಧ ಕೊನೆಗಾಣಿಸುವತ್ತ ಪ್ರಯತ್ನಿಸಲಿದ್ದೇವೆ, ಯುದ್ಧ ನಿಲ್ಲಬೇಕಾಗಿದೆ ಎಂದು ಟ್ರಂಪ್ ಅವರ ಮಾರ್-ಎ-ನಲ್ಲಿ ನಡೆದ ಅಮೇರಿಕಾ ಫಸ್ಟ್ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಗಾಲಾ ಕಾರ್ಯಕ್ರಮದಲ್ಲಿ ಹೇಳಿದರು.
ನವೆಂಬರ್ 5 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರ ತಮ್ಮ ಜಯದ ನಂತರ ಇದು ಅವರ ಮೊದಲ ಪ್ರಮುಖ ಸಾರ್ವಜನಿಕ ಭಾಷಣವಾಗಿದೆ. ಕಳೆದ ಮೂರು ದಿನಗಳಲ್ಲಿ ಸಾವಿರಾರು ಜನರು ಕೊಲ್ಲಲ್ಪಟ್ಟರು. ಅವರಲ್ಲಿ ಸೈನಿಕರು ಸಹ ಸೇರಿದ್ದಾರೆ ಎಂದರು.
ಈ ಮಧ್ಯೆ, ಟ್ರಂಪ್ ಅವರ ಹಿಂದಿನ ಅವಧಿಯಲ್ಲಿ ಉಪ ಸಹಾಯಕರಾಗಿ ಮತ್ತು 2017 ರಿಂದ 2021 ರವರೆಗೆ ದಕ್ಷಿಣ ಮತ್ತು ಮಧ್ಯ ಏಷ್ಯಾದ ರಾಷ್ಟ್ರೀಯ ಭದ್ರತಾ ಮಂಡಳಿಯ ಹಿರಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಲಿಸಾ ಕರ್ಟಿಸ್, ಉಕ್ರೇನ್‌ನಲ್ಲಿನ ಯುದ್ಧವು ಇತರ ರಾಷ್ಟ್ರಗಳನ್ನು ಪ್ರೋತ್ಸಾಹಿಸದ ರೀತಿಯಲ್ಲಿ ಕೊನೆಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದರು.
ಮಾರ್-ಎ-ಲಾಗೊ ಕಾರ್ಯಕ್ರಮದಲ್ಲಿ ಟ್ರಂಪ್‌ರ ಕೆಲವು ಉನ್ನತ ಸಲಹೆಗಾರರು ಉಪಸ್ಥಿತರಿದ್ದರು. ಅವರು ಟೆಸ್ಲಾ ಮಾಲೀಕ ಎಲೋನ್ ಮಸ್ಕ್ ಮತ್ತು ಭಾರತೀಯ-ಅಮೆರಿಕನ್ ವಾಣಿಜ್ಯೋದ್ಯಮಿ ವಿವೇಕ್ ರಾಮಸ್ವಾಮಿ ಅವರನ್ನು ಶ್ಲಾಘಿಸಿದರು, ತಮ್ಮ ಎರಡನೇ ಅವಧಿಯಲ್ಲಿ ಸರ್ಕಾರದ ದಕ್ಷತೆಯ ಇಲಾಖೆಯನ್ನು (DOGE) ಮುನ್ನಡೆಸಲು ಆಯ್ಕೆಯಾಗಿದ್ದಾರೆ.
ಹಿಂದೂ-ಅಮೆರಿಕನ್ ತುಳಸಿ ಗಬ್ಬಾರ್ಡ್ ಅವರು ರಾಷ್ಟ್ರೀಯ ಗುಪ್ತಚರ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಟ್ರಂಪ್ ಶ್ಲಾಘಿಸಿದರು.
Advertisement