ಲಂಡನ್‌ನಲ್ಲಿ ಭಾರತೀಯ ಮೂಲದ ಮಹಿಳೆ ಕೊಲೆ, ಪತಿಗಾಗಿ ಪೊಲೀಸರ ಹುಡುಕಾಟ

ಕೊಲೆಯಾದ ಮಹಿಳೆಯನ್ನು 24 ವರ್ಷದ ಹರ್ಷಿತಾ ಬ್ರೆಲ್ಲಾ ಎಂದು ಗುರುತಿಸಲಾಗಿದೆ ಎಂದು ನಾರ್ಥಾಂಪ್ಟನ್‌ಶೈರ್ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರ್ಷಿತಾ ಬ್ರೆಲ್ಲಾ
ಹರ್ಷಿತಾ ಬ್ರೆಲ್ಲಾ
Updated on

ಲಂಡನ್‌: ಇತ್ತೀಚೆಗೆ ಲಂಡನ್‌ನಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಾರ್ಥಾಂಪ್ಟನ್‌ಶೈರ್ ಪೊಲೀಸರು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ನವೆಂಬರ್ 14 ರಂದು ಕೊಲೆಯಾದ ಮಹಿಳೆಯನ್ನು 24 ವರ್ಷದ ಹರ್ಷಿತಾ ಬ್ರೆಲ್ಲಾ ಎಂದು ಗುರುತಿಸಲಾಗಿದೆ ಎಂದು ನಾರ್ಥಾಂಪ್ಟನ್‌ಶೈರ್ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ಪೂರ್ವ ಲಂಡನ್‌ನಲ್ಲಿ ಬಿಟ್ಟು ಹೋಗಿದ್ದ ಕಾರಿನ ಬೂಟಿನಲ್ಲಿ ಹರ್ಷಿತಾ ಬ್ರೆಲ್ಲಾ ಅವರ ಮೃತದೇಹ ಪತ್ತೆಯಾಗಿದ್ದು, ಅವರ ಪತಿ ಪಂಕಜ್ ಲಂಬಾ ಅವರೇ ಪತ್ನಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಹರ್ಷಿತಾ ಬ್ರೆಲ್ಲಾ
ಲಂಡನ್‌ ನಲ್ಲಿ ಲಾಂಗ್ ಹಿಡಿದು ಸಿಕ್ಕ ಸಿಕ್ಕವರ ಮೇಲೆ ದಾಳಿ: 13 ವರ್ಷದ ಬಾಲಕ ಸಾವು; ವ್ಯಕ್ತಿ ಬಂಧನ

ಈ ಹಿಂದೆಯೂ ಮಹಿಳೆ ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾಗಿದ್ದು, ಸೆಪ್ಟೆಂಬರ್ ಆರಂಭದಲ್ಲಿ ನಾರ್ಥಾಂಪ್ಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಕೌಟುಂಬಿಕ ಹಿಂಸಾಚಾರದಿಂದ ರಕ್ಷಣೆ ಆದೇಶ ತಂದಿದ್ದರು ಎಂದು ಮಿರರ್ ವರದಿ ಮಾಡಿದೆ.

ಪೊಲೀಸರು ಹರ್ಷಿತಾ ಎಂಬ ಹೆಸರಿಸಿರುವ ಮಹಿಳೆಯ ಶವ ಪೂರ್ವ ಲಂಡನ್‌ನಲ್ಲಿ ಕಾರಿನಲ್ಲಿ ಪತ್ತೆಯಾದ ನಂತರ ಕೊಲೆ ತನಿಖೆ ಪ್ರಾರಂಭಿಸಿದ್ದು, ಪತಿ ಪಂಕಜ್ ಲಂಬಾ ದೇಶ ಬಿಟ್ಟು ಪರಾರಿಯಾಗಿರಬಹುದು ಎಂದು ಬ್ರಿಟನ್ ಪೊಲೀಸರು ಶಂಕಿಸಿದ್ದಾರೆ.

ಮೃತ ಹರ್ಷಿತಾ ಅವರ ಪತಿ ಪಂಕಜ್ ಲಂಬಾ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಈ ಪ್ರಕರಣದಲ್ಲಿ 60ಕ್ಕೂ ಹೆಚ್ಚು ಪತ್ತೇದಾರರು ಕೆಲಸ ಮಾಡುತ್ತಿದ್ದಾರೆ ಎಂದು ನಾರ್ಥಂಪ್ಟನ್‌ಶೈರ್ ಪೊಲೀಸ್ ವಿಭಾಗದ ಮುಖ್ಯ ಇನ್‌ಸ್ಪೆಕ್ಟರ್ ಪೌಲ್ ಕ್ಯಾಶ್ ತಿಳಿಸಿದ್ದಾರೆ.

ಆರೋಪಿ ಕುರಿತು ಯಾವುದೇ ಸುಳಿವು ಇದ್ದರೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com