ಮಾಸ್ಕೋ: ಇತ್ತೀಚೆಗೆ ಅಭಿವೃದ್ಧಿಪಡಿಸಿದ ಹೈಪರ್ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉಕ್ರೇನ್ ಮೇಲೆ ಬಳಸುವ ಮೂಲಕ ಪಶ್ಚಿಮ ರಾಷ್ಟ್ರಗಳಿಗೆ ನೇರ ಸಂದೇಶವನ್ನು ರಷ್ಯಾ ಕಳುಹಿಸಿದೆ.
ಉಕ್ರೇನ್‌ಗೆ ಬೆಂಬಲ ನೀಡುವ ಪಶ್ಚಿಮ ರಾಷ್ಟ್ರಗಳ "ಅಜಾಗರೂಕ" ನಿರ್ಧಾರಗಳು ಮತ್ತು ಕ್ರಮಗಳಿಗೆ ಮಾಸ್ಕೋ ತೀವ್ರವಾಗಿ ಪ್ರತಿಕ್ರಿಯಿಸುತ್ತದೆ. ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಾತನಾಡುತ್ತಾ, ರಷ್ಯಾ ಹೊಸ ಕ್ಷಿಪಣಿಯನ್ನು ಉಕ್ರೇನಿಯನ್ ಮಿಲಿಟರಿ ಸೌಲಭ್ಯಗಳ ಮೇಲೆ ಹಾರಿಸಲಾಗಿದೆ ಎಂದು ಹೇಳಿದರು. ಪಾಶ್ಚಿಮಾತ್ಯ ದೇಶಗಳು ಕೆಲ ಕ್ಷಿಪಣಿಗಳನ್ನು ಉಕ್ರೇನ್‌ಗೆ ಪೂರೈಸಿದ್ದು ತರುವಾಯ ಅವುಗಳನ್ನು ರಷ್ಯಾದ ಪ್ರದೇಶದ ಮೇಲೆ ದಾಳಿ ನಡೆಸಲಾಗಿತ್ತು ಎಂದು ಪೆಸ್ಕೋವ್ ವರದಿಗಾರರಿಗೆ ತಿಳಿಸಿದರು.
ಉಕ್ರೇನ್ ಮೇಲೆ ಹೈಪರ್‌ಸಾನಿಕ್ ಕ್ಷಿಪಣಿ ದಾಳಿ ಮಾಡುವ ಮೂಲಕ ರಷ್ಯಾ ತನ್ನ ಸಾಮರ್ಥ್ಯಗಳನ್ನು ಸ್ಪಷ್ಟವಾಗಿ ಪ್ರದರ್ಶಿಸಿದೆ. ನಮ್ಮ ಕಳವಳಗಳನ್ನು ಪರಿಹರಿಸದಿದ್ದರೆ ಮುಂದಿನ ಪ್ರತೀಕಾರದ ಕ್ರಮಗಳ ರೂಪರೇಖೆಗಳನ್ನು ಸ್ಪಷ್ಟವಾಗಿ ವಿವರಿಸಲಾಗುತ್ತದೆ ಎಂದು ಹೇಳಿದರು. ದಾಳಿಯ ಬಗ್ಗೆ ರಷ್ಯಾ ಯುನೈಟೆಡ್ ಸ್ಟೇಟ್ಸ್‌ಗೆ ಎಚ್ಚರಿಕೆ ನೀಡುವ ಅಗತ್ಯವಿಲ್ಲ ಎಂದು ಪೆಸ್ಕೋವ್ ಹೇಳಿದ್ದು ಉಡಾವಣೆಗೆ 30 ನಿಮಿಷಗಳ ಮೊದಲು ಅದು ಯುಎಸ್‌ಗೆ ತಿಳಿಸಿತ್ತು.
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತುಕತೆಗೆ ಮುಕ್ತರಾಗಿದ್ದಾರೆ ಎಂದು ಪೆಸ್ಕೋವ್ ಹೇಳಿದ್ದಾರೆ. ಆದರೆ ಅಮೆರಿಕಾದ ನಿರ್ಗಮಿತ ಅಧ್ಯಕ್ಷ ಜೋ ಬಿಡೆನ್ ಸರ್ಕಾರ ಮಾತ್ರ ಉದ್ವಿಗ್ನತೆಯನ್ನು ಹೆಚ್ಚಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಹೇಳಿದರು. ಯುಎಸ್ ನಿರ್ಮಿತ ಆರು ಎಟಿಎಸಿಎಂಎಸ್ ಕ್ಷಿಪಣಿಗಳೊಂದಿಗೆ ಉಕ್ರೇನ್ ರಷ್ಯಾದ ಮೇಲೆ ದಾಳಿ ಮಾಡಿದ್ದರಿಂದ ರಷ್ಯಾದ ಹೊಸ ಕ್ಷಿಪಣಿ ಬಳಸಬೇಕಾಯಿತು ಎಂದು ಪುಟಿನ್ ಹೇಳಿದ್ದಾರೆ.
Advertisement