ಡೊನಾಲ್ಡ್ ಟ್ರಂಪ್‌ 2.0: ಮಸ್ಕ್, ರಾಮಸ್ವಾಮಿ ಚೀನಾಕ್ಕೆ ದೊಡ್ಡ ಬೆದರಿಕೆ; ಡ್ರ್ಯಾಗನ್‌ನ ಸಲಹೆಗಾರ ಎಚ್ಚರಿಕೆ

ಡೊನಾಲ್ಡ್ ಟ್ರಂಪ್ 2.0 ಸಮಯದಲ್ಲಿ ಚೀನಾದ ದೊಡ್ಡ ಅಪಾಯವೆಂದರೆ ಮಸ್ಕ್ ಮತ್ತು ರಾಮಸ್ವಾಮಿ ನಡೆಸಲಿರುವ ಅಮೆರಿಕ ಸರ್ಕಾರದ ದಕ್ಷತೆಯ ಇಲಾಖೆ (DOGE) ಎಂದು ಚೀನಾದ ಉನ್ನತ ಶೈಕ್ಷಣಿಕ ಮತ್ತು ಬೀಜಿಂಗ್‌ನ ನೀತಿ ಸಲಹೆಗಾರ ಝೆಂಗ್ ಯೋಂಗ್ನಿಯನ್ ಹೇಳಿದ್ದಾರೆ.
Elon Musk, Vivek Ramaswamy
ಎಲೋನ್ ಮಸ್ಕ್-ವಿವೇಕ್ ರಾಮಸ್ವಾಮಿPTI
Updated on

ಬೀಜಿಂಗ್: ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ಮತ್ತು ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಚೀನಾಕ್ಕೆ ದೊಡ್ಡ ಬೆದರಿಕೆಯಾಗಲಿದ್ದಾರೆ ಎಂದು ಚೀನಾ ಸರ್ಕಾರದ ನೀತಿ ಸಲಹೆಗಾರ ಹೇಳಿದ್ದಾರೆ. ಟ್ರಂಪ್ ಯೋಜಿಸುತ್ತಿರುವ ಪ್ರಮುಖ ಬದಲಾವಣೆಗಳು, ಇಬ್ಬರ ನೇತೃತ್ವದಲ್ಲಿ ಹೊಸ ಇಲಾಖೆಯು ಚೀನಾಕ್ಕೆ ದೊಡ್ಡ ಬೆದರಿಕೆಯಾಗಿದೆ. ಏಕೆಂದರೆ ಅದು ಹೆಚ್ಚು ಪರಿಣಾಮಕಾರಿಯಾದ ಅಮೆರಿಕದ ರಾಜಕೀಯ ವ್ಯವಸ್ಥೆಯೊಂದಿಗೆ ಸ್ಪರ್ಧಿಸಬೇಕಾಗುತ್ತದೆ ಎಂದು ಹೇಳಿದರು.

ಡೊನಾಲ್ಡ್ ಟ್ರಂಪ್ 2.0 ಸಮಯದಲ್ಲಿ ಚೀನಾದ ದೊಡ್ಡ ಅಪಾಯವೆಂದರೆ ಮಸ್ಕ್ ಮತ್ತು ರಾಮಸ್ವಾಮಿ ನಡೆಸಲಿರುವ ಅಮೆರಿಕ ಸರ್ಕಾರದ ದಕ್ಷತೆಯ ಇಲಾಖೆ (DOGE) ಎಂದು ಚೀನಾದ ಉನ್ನತ ಶೈಕ್ಷಣಿಕ ಮತ್ತು ಬೀಜಿಂಗ್‌ನ ನೀತಿ ಸಲಹೆಗಾರ ಝೆಂಗ್ ಯೋಂಗ್ನಿಯನ್ ಹೇಳಿದ್ದಾರೆ.

ಇನ್‌ಸ್ಟಿಟ್ಯೂಟ್ ಫಾರ್ ಇಂಟರ್‌ನ್ಯಾಶನಲ್ ಅಫೇರ್ಸ್ (ಐಐಎ) ಶನಿವಾರ ಆಯೋಜಿಸಿದ್ದ ಬೀಚುವಾನ್ ಫೋರಮ್‌ನಲ್ಲಿ ಮಾತನಾಡಿದ ಅವರು, 'ಅಮೆರಿಕ ಹೆಚ್ಚು ಪರಿಣಾಮಕಾರಿಯಾದ ಒತ್ತಡವನ್ನು ಹಾಕುತ್ತದೆ. ಇದು ಸಹಜವಾಗಿ ಚೀನಾದ ಮೇಲೆ ಹೆಚ್ಚಿರುತ್ತದೆ. ಈ ಒತ್ತಡವು ಚೀನಾಕ್ಕೆ ಮಾತ್ರ ಸೀಮಿತವಾಗಿಲ್ಲ, ಆದರೆ ಇತರ ದೇಶಗಳಲ್ಲಿ ವಿಶೇಷವಾಗಿ ಯುರೋಪ್ ಮೇಲೆಯೂ ಇದೆ ಎಂದು ಹೇಳಿದರು.

ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಸ್ಕ್ ಮತ್ತು ರಾಮಸ್ವಾಮಿ ಅವರನ್ನು ಸರ್ಕಾರದ ದಕ್ಷತೆಯ ಹೊಸ ಇಲಾಖೆಯನ್ನು (DOGE) ಮುನ್ನಡೆಸಲು ನಾಮನಿರ್ದೇಶನ ಮಾಡಿದ್ದರು. ಇದರ ಅಡಿಯಲ್ಲಿ, ಸಾವಿರಾರು ನಿಯಮಾವಳಿಗಳನ್ನು ತೆಗೆದುಹಾಕಲು ಮತ್ತು ಸರ್ಕಾರಿ ನೌಕರರ ಸಂಖ್ಯೆಯನ್ನು ಕಡಿಮೆ ಮಾಡಲು ಇಬ್ಬರೂ ಯೋಜಿಸಿದ್ದಾರೆ.

Elon Musk, Vivek Ramaswamy
ಅಮೆರಿಕ: ಹುಟ್ಟುಹಬ್ಬದ ದಿನ ಆಕಸ್ಮಿಕವಾಗಿ ಗುಂಡು ತಗುಲಿ ತೆಲಂಗಾಣ ವಿದ್ಯಾರ್ಥಿ ಸಾವು

ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಚೀನಾದ ಮೇಲೆ ದೊಡ್ಡ ಒತ್ತಡವು ಅಮೆರಿಕದಲ್ಲಿನ ಬದಲಾವಣೆಗಳಿಂದ ಬರಬಹುದು ಎಂದು ಝೆಂಗ್ ಹೇಳಿದರು. ಸರ್ಕಾರವನ್ನು ಬದಲಾಯಿಸುವ ಪ್ರಯತ್ನದಲ್ಲಿ ಟ್ರಂಪ್ ಯಶಸ್ವಿಯಾದರೆ ಅಮೆರಿಕ ಹೆಚ್ಚು ಸ್ಪರ್ಧಾತ್ಮಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ ಎಂದು ಝೆಂಗ್ ಹೇಳಿದರು.

ತಮ್ಮ ಹಿಂದಿನ ಅವಧಿಯಲ್ಲಿ ಚೀನಾ ವಿರುದ್ಧ ಕಠಿಣ ನಿಲುವು ತಳೆದಿದ್ದ ಟ್ರಂಪ್, ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರ ಸೇರಿದಂತೆ ವಿವಿಧ ಜಾಗತಿಕ ರಂಗಗಳಲ್ಲಿ ಬೀಜಿಂಗ್ ವಿರುದ್ಧ ಕ್ರಮಗಳನ್ನು ಬಲಪಡಿಸುವ ನಿರೀಕ್ಷೆಯಿದೆ. ಚೀನಾ ತೈವಾನ್ ಅನ್ನು ತನ್ನ ಮುಖ್ಯ ಭೂಭಾಗದ ಭಾಗವೆಂದು ಪರಿಗಣಿಸುತ್ತದೆ. ದಕ್ಷಿಣ ಚೀನಾ ಸಮುದ್ರದ ಹೆಚ್ಚಿನ ಮಾಲೀಕತ್ವವನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com