ವಾಷಿಂಗ್ಟನ್: ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವಂತೆಯೇ ಇಸ್ರೇಲ್ ವಿರುದ್ಧ ಖಂಡಾಂತರ ಕ್ಷಿಪಣಿ ದಾಳಿಗೆ ಇರಾನ್ ಸಿದ್ಧತೆ ನಡೆಸುತ್ತಿದೆ ಎಂದು ಮಂಗಳವಾರ ಅಮೆರಿಕ ಹೇಳಿದ್ದು, ಅಂತಹ ಯಾವುದೇ ದಾಳಿಗೆ ಟೆಹ್ರಾನ್ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಕಳೆದ ವಾರ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಸನ್ ನಸ್ರಲ್ಲಾ ಹತ್ಯೆಯಾಗಿದ್ದ. ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯನ್ನು ಗುರಿಯಾಗಿಸಲು ಲೆಬನಾನ್‌ನಲ್ಲಿ ನೆಲದ ದಾಳಿ ಆರಂಭಿಸಿದ್ದಾಗಿ ಇಸ್ರೇಲ್ ಹೇಳಿದ್ದ ಬೆನ್ನಲ್ಲೇ ಈ ಎಚ್ಚರಿಕೆ ಬಂದಿದೆ.
ಇಸ್ರೇಲ್ ವಿರುದ್ಧ ಖಂಡಾಂತರ ಕ್ಷಿಪಣಿ ದಾಳಿ ಪ್ರಾರಂಭಿಸಲು ಇರಾನ್ ಸಿದ್ಧತೆ ನಡೆಸುತ್ತಿದೆ ಎಂಬ ಸೂಚನೆ ಬಂದಿದೆ. ಈ ದಾಳಿಯ ವಿರುದ್ಧ ಇಸ್ರೇಲ್ ಅನ್ನು ರಕ್ಷಿಸಲು ನಾವು ರಕ್ಷಣಾತ್ಮಕ ಸಿದ್ಧತೆಗಳನ್ನು ಸಕ್ರಿಯವಾಗಿ ಬೆಂಬಲಿಸುತ್ತಿದ್ದೇವೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು AFP ಗೆ ತಿಳಿಸಿದ್ದಾರೆ.
ಇರಾನಿ ಕ್ಷಿಪಣಿ ದಾಳಿ ವಿರುದ್ಧ ಇಸ್ರೇಲ್ ರಕ್ಷಿಸಲು ಅಮೆರಿಕ ಮತ್ತಿತರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಮುಂದಾಗಿವೆ. ಡಮಾಸ್ಕಸ್‌ನಲ್ಲಿರುವ ಇರಾನಿನ ರಾಯಭಾರ ಕಚೇರಿ ಮೇಲೆ ಇಸ್ರೇಲಿ ದಾಳಿಗೆ ಪ್ರತೀಕಾರವಾಗಿ ಇರಾನ್ ಖಂಡಾಂತರ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಇಸ್ರೇಲ್ ವಿರುದ್ಧ ನೇರ ಮಿಲಿಟರಿ ದಾಳಿಗೆ ಮುಂದಾದರೆ ಇರಾನ್ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ಅನ್ನು ಎದುರಿಸಲು ಸೈನಿಕರನ್ನು ನಿಯೋಜಿಸುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯ ಸೋಮವಾರ ಹೇಳಿದ್ದರೂ, ನಸ್ರಲ್ಲಾ ಹತ್ಯೆಯು ಇಸ್ರೇಲ್ ವಿನಾಶ ಉಂಟು ಮಾಡಲಿದೆ ಎಂದು ಇರಾನ್ ಹೇಳಿದೆ. ಈ ಮಧ್ಯೆ ಮಧ್ಯ ಪ್ರಾಚ್ಯ ಇಸ್ರೇಲ್‌ನಲ್ಲಿ ಎಲ್ಲಿಯೂ ತಲುಪಲು ಸಾಧ್ಯವಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ ಇರಾನ್‌ಗೆ ಕಟುವಾದ ಎಚ್ಚರಿಕೆ ನೀಡಿದ್ದರು.
ಇರಾನ್‌ನಿಂದ ಇಸ್ರೇಲ್‌ನ ಮೇಲಿನ ದಾಳಿಯು ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತಪ್ಪಿಸಲು ಬಯಸುತ್ತಿರುವುದಾಗಿ ಅಮೆರಿಕ ಮತ್ತಿತರ ವಿಶ್ವ ಶಕ್ತಿಗಳು ಹೇಳಿರುವ ವಿಶಾಲ ಪ್ರಾದೇಶಿಕ ಸಂಘರ್ಷದ ಭಯಕ್ಕೆ ಕಾರಣವಾಗುತ್ತಿದೆ.
Advertisement