ಇರಾನಿನ ಕುಡ್ಸ್ ಫೋರ್ಸ್‌ನ ಬ್ರಿಗೇಡಿಯರ್-ಜನರಲ್ ಮತ್ತು ಖಾಸೆಮ್ ಸೊಲೈಮಾನಿ ಅವರ ಉತ್ತರಾಧಿಕಾರಿ ಇಸ್ಮಾಯಿಲ್ ಖಾನಿ ಕಾಣೆಯಾಗಿದ್ದು ಖಾನಿ ಕುರಿತು ಇಸ್ರೇಲ್ ಮಾಹಿತಿ ಸಂಗ್ರಹಿಸುತ್ತಿದೆ.
ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾಹ್ ಅವರ ಸಂಭಾವ್ಯ ಉತ್ತರಾಧಿಕಾರಿಯಾದ ಹಶೆಮ್ ಸಫಿಯುದ್ದೀನ್ ಜೊತೆ ಖಾನಿ ಕಾಣಿಸಿಕೊಂಡಿದ್ದರು. ನಸ್ರಲ್ಲಾ ಅವರ ಉತ್ತರಾಧಿಕಾರಿ ಹಶೆಮ್ ಸಫಿಯುದ್ದೀನ್ ಇತ್ತೀಚೆಗೆ ಬೈರುತ್‌ನಲ್ಲಿ ಇಸ್ರೇಲಿ ನಡೆಸಿದ ದಾಳಿಯಲ್ಲಿ ಹತ್ಯೆಯಾಗಿದ್ದನು.
ಇಸ್ರೇಲಿ ಮಾಧ್ಯಮ ವರದಿಗಳ ಪ್ರಕಾರ, ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾಹ್ ಅವರ ಸಂಭಾವ್ಯ ಉತ್ತರಾಧಿಕಾರಿಯಾದ ಹಶೆಮ್ ಸಫಿಯುದ್ದೀನ್ ಅವರನ್ನು ಗುರಿಯಾಗಿಸಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಇಸ್ಮಾಯಿಲ್ ಖಾನಿ ಗಾಯಗೊಂಡಿರಬಹುದು. ಇಸ್ಮಾಯಿಲ್ ಖಾನಿ ಕೊನೆಯದಾಗಿ ಹೆಜ್ಬುಲ್ಲಾದ ಟೆಹ್ರಾನ್ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿದೆ.
ಇಸ್ರೇಲಿ ಮಾಧ್ಯಮ ವರದಿಗಳ ಪ್ರಕಾರ, ನಸ್ರಲ್ಲಾ ಅವರ ಮರಣದ ನಂತರ ನಡೆದ ಸಂಸ್ಮರಣಾ ಸಮಾರಂಭದಲ್ಲಿ ಸೊಲೈಮಾನಿ ಅವರ ಉತ್ತರಾಧಿಕಾರಿ ಇಸ್ಮಾಯಿಲ್ ಖಾನಿ ಭಾಗವಹಿಸಿಲ್ಲ. ಈ ಕಾರಣದಿಂದಾಗಿ ಅವರ ಸಾವಿನ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಖಾನಿ ಜೀವಂತ ಇರುವಿಕೆಯ ಬಗ್ಗೆ ಇರಾನ್ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಇರಾನ್ ಮಾಧ್ಯಮಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
2020ರಲ್ಲಿ ಖಾಸಿಂ ಸೊಲೈಮಾನಿ ಅವರ ಹತ್ಯೆಯ ನಂತರ, ಇಸ್ಮಾಯಿಲ್ ಖಾನಿ ಅವರ ಉತ್ತರಾಧಿಕಾರಿಯಾದರು. ಅವರು ಮಧ್ಯಪ್ರಾಚ್ಯದಲ್ಲಿ ಇರಾನ್‌ನ ಮಿಲಿಟರಿ ಕಾರ್ಯತಂತ್ರದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. ಈಗ ಖಾನಿ ಇರುವಿಕೆಯ ಪ್ರಶ್ನೆ ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಈ ಪರಿಸ್ಥಿತಿಯು ಇರಾನ್ ಮತ್ತು ಲೆಬನಾನ್ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸುವುದಲ್ಲದೆ, ಅದರ ಪರಿಣಾಮಗಳನ್ನು ಜಾಗತಿಕ ಮಟ್ಟದಲ್ಲಿಯೂ ಕಾಣಬಹುದು.
Advertisement