Israel Army ಬೆಂಬಲಿತ Yamam ಅಂಡರ್ ಕವರ್ ಆಪರೇಷನ್: ನಡುರಸ್ತೆಯಲ್ಲಿ Al-Aqsa Brigade ಮುಖ್ಯಸ್ಥ ಸೇರಿ 5 ಉಗ್ರರು ಹತ!, Video ವೈರಲ್!

ಬಂಡುಕೋರರ ಹಿಡಿತದಲ್ಲಿರುವ ವೆಸ್ಟ್ ಬ್ಯಾಂಕ್ ನಲ್ಲಿ ಇಸ್ರೇಲಿ ಕಮಾಂಡೋಗಳ ವಿಶೇಷ ಯಾಮಮ್ ಪಡೆ ರಹಸ್ಯ ಕಾರ್ಯಾಚರಣೆ ನಡೆಸಿ ವೆಸ್ಟ್ ಬ್ಯಾಂಕ್ ನಗರದ ನಬ್ಲಸ್‌ನಲ್ಲಿ ಉಗ್ರರಿದ್ದ ಕಾರಿನ ಮೇಲೆ ದಾಳಿ ನಡೆಸಿದ್ದಾರೆ.
5 Terrorists Eliminated by Israel Army
ಇಸ್ರೇಲ್ ಸೇನಾ ಕಾರ್ಯಾಚರಣೆ
Updated on

ಟೆಲ್ ಅವೀವ್: ಒಂದೆಡೆ ಲೆಬೆನಾನ್ ನ ಹೆಜ್ಬೊಲ್ಲಾ ಬಂಡುಕೋರರ ವಿರುದ್ಧ ಮುಗಿಬಿದ್ದಿರುವ ಇಸ್ರೇಲ್ ಸೇನೆ ಮತ್ತೊಂದೆಡೆ ಇತ್ತ ಬಂಡುಕೋರರ ಕಪಿಮುಷ್ಟಿಯಲ್ಲಿರುವ ವೆಸ್ಟ್ ಬ್ಯಾಂಕ್ ನಲ್ಲೂ ಪ್ರಮುಖ ಸೇನಾ ಕಾರ್ಯಾಚರಣೆ ನಡೆಸಿ Al-Aqsa Brigade ಮುಖ್ಯಸ್ಥ ಸೇರಿ 4 ಉಗ್ರರನ್ನು ಹೊಡೆದುರುಳಿಸಿದೆ.

ಹೌದು.. ಬಂಡುಕೋರರ ಹಿಡಿತದಲ್ಲಿರುವ ವೆಸ್ಟ್ ಬ್ಯಾಂಕ್ ನಲ್ಲಿ ಇಸ್ರೇಲಿ ಕಮಾಂಡೋಗಳು ರಹಸ್ಯ ಕಾರ್ಯಾಚರಣೆ ನಡೆಸಿ ವೆಸ್ಟ್ ಬ್ಯಾಂಕ್ ನಗರದ ನಬ್ಲಸ್‌ನಲ್ಲಿ ಉಗ್ರರಿದ್ದ ಕಾರಿನ ಮೇಲೆ ದಾಳಿ ನಡೆಸಿದ್ದಾರೆ.

ಈ ವೇಳೆ ಐವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ ಎಂದು ಇಸ್ರೇಲ್ ಸೇನಾಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲಿ ಯೋಧರ ಅಂಡರ್ ಕವರ್ ಆಪರೇಷನ್ ನ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

5 Terrorists Eliminated by Israel Army
ಇಸ್ರೇಲ್ ದಾಳಿಗೆ ಬೆಚ್ಚಿಬಿದ್ದ ಉಗ್ರ ನಾಯಕ: 'ಯಾವ ಸ್ಥಾನವೂ ಬೇಕಿಲ್ಲ... Hezbollah ಸಹವಾಸವೇ ಬೇಡ.. ನನ್ನ ಬಿಟ್ಬಿಡಿ'- Naim Qassem ಅಳಲು!

ವೆಸ್ಟ್ ಬ್ಯಾಂಕ್ ನ ನಬ್ಲಸ್ ಬಳಿ ಹಾಡಹಗಲೇ ನಡು ರಸ್ತೆಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಇಸ್ರೇಲ್ ಸೇನಾ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಬಲಾಟಾ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿದ್ದ ಅಲ್-ಅಕ್ಸಾ ಹುತಾತ್ಮರ ಬ್ರಿಗೇಡ್ ಭಯೋತ್ಪಾದಕ ಗುಂಪಿನ ನಾಯಕ ಇಸ್ಸಾಮ್ ಅಲ್-ಸಲಾಜ್ ಕೂಡ ಸೇರಿದ್ದಾನೆ ಎಂದು ಇಸ್ರೇಲ್ ಪೊಲೀಸರು ತಿಳಿಸಿದ್ದಾರೆ.

ಯಾಮಮ್ ಪಡೆಗಳಿಂದ ರಹಸ್ಯ ಕಾರ್ಯಾಚರಣೆ

ಇನ್ನು ಈ ರಹಸ್ಯ ಕಾರ್ಯಾಚರಣೆ ನಡೆಸಿದ್ದು ಇಸ್ರೇಲ್ ಸೇನಾಪಡೆಗಳ ಬೆಂಬಲ ಇರುವ ಯಾಮಮ್ ಪಡೆಗಳು ಎಂದು ಹೇಳಲಾಗಿದೆ. ಇದು ಇಸ್ರೇಲ್ ಸೇನೆ ಬೆಂಬಲಿತ ರಹಸ್ಯ ಪಡೆಗಳಾಗಿದ್ದು, ಅಂಡರ್ ಕವರ್ ಆಪರೇಷನ್ ಗಾಗಿಯೇ ಈ ಯಾಮಮ್ ಪಡೆಗಳು ಖ್ಯಾತಿ ಪಡೆದಿವೆ ಎನ್ನಲಾಗಿದೆ.

ಪೊಲೀಸರ ಪ್ರಕಾರ, ಇಸ್ರೇಲ್ ರಕ್ಷಣಾ ಪಡೆಗಳು, ಶಿನ್ ಬೆಟ್ ಭದ್ರತಾ ಸೇವೆ ಮತ್ತು ಗಡಿ ಪೊಲೀಸ್ ಪಡೆಗಳ ಬೆಂಬಲದೊಂದಿಗೆ ಶಂಕಿತ ಭಯೋತ್ಪಾದಕರನ್ನು ಗುರಿಯಾಗಿಸುವ ಬಂಧನ ಕಾರ್ಯಾಚರಣೆಯ ಭಾಗವಾಗಿ ಈ ಯಾಮಮ್ ಪಡೆಗಳು ನಬ್ಲಸ್‌ನಲ್ಲಿತ್ತು ಎಂದು ಹೇಳಲಾಗಿದೆ.

ಭಾನುವಾರ ಇಸ್ರೇಲ್ ನ ಬೀರ್ಷೆಬಾದಲ್ಲಿ ನಡೆದ ಮಾರಣಾಂತಿಕ ಗುಂಡಿನ ದಾಳಿಯ ನಂತರ ಈ ವಾರ ನಡೆದ ಎರಡನೇ ಪ್ರಮುಖ ಭಯೋತ್ಪಾದಕ ದಾಳಿಯಲ್ಲಿ ಭಯೋತ್ಪಾದಕರು ಇಸ್ರೇಲಿ ನಗರದ ಹಡೆರಾದಲ್ಲಿ ಹಲವಾರು ಜನರಿಗೆ ಇರಿದಿದ್ದರು. ಈ ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದರು. ಈ ದಾಳಿ ನಂತರ ನಡೆದ 2ನೇ ಪ್ರಮುಖ ಕಾರ್ಯಾಚರಣೆ ಇದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com