
ಮಾಸ್ಕೋ: ರಷ್ಯಾ-ಯುಕ್ರೇನ್ ಸಂಘರ್ಷ ಶಾಂತಿಯುತವಾಗಿ ಬಗೆಹರಿಯಬೇಕು ಅದಕ್ಕಾಗಿ ಸಾಧ್ಯವಿರುವ ಎಲ್ಲಾ ಸಹಕರಾವನ್ನೂ ನೀಡಲು ಭಾರತ ಸಿದ್ದವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಮಾತುಕತೆಯ ವೇಳೆ ತಿಳಿಸಿದ್ದಾರೆ.
16 ನೇ ಬ್ರಿನ್ಸ್ ಶೃಂಗಸಭೆಯಲ್ಲಿ ಭಾಗಿಯಾಗಲು ರಷ್ಯಾಗೆ ಆಗಮಿಸಿರುವ ಪ್ರಧಾನಿ ಮೋದಿ, ಪುಟಿನ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯು ಶೀಘ್ರವಾಗಿ ಮರಳುವುದನ್ನು ಭಾರತ "ಸಂಪೂರ್ಣವಾಗಿ ಬೆಂಬಲಿಸುತ್ತದೆ" ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ, ಪ್ರಧಾನ ಮಂತ್ರಿ ಮೋದಿ ರಷ್ಯಾದ ನಾಯಕರಿಗೆ ತಿಳಿಸಿದರು.
ಕಳೆದ ಮೂರು ತಿಂಗಳಲ್ಲಿ ರಷ್ಯಾಕ್ಕೆ ಅವರ ಎರಡನೇ ಭೇಟಿಯು ಉಭಯ ದೇಶಗಳ ನಡುವಿನ "ಆಪ್ತ" ಸಮನ್ವಯ ಮತ್ತು ಆಳವಾದ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮೋದಿ ಇದೇ ವೇಳೆ ತಿಳಿಸಿದ್ದಾರೆ.
"ನಾವು ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ವಿಷಯದ ಬಗ್ಗೆ ನಿರಂತರ ಸಂಪರ್ಕದಲ್ಲಿದ್ದೇವೆ. ನಾನು ಮೊದಲೇ ಹೇಳಿದಂತೆ, ಸಮಸ್ಯೆಗಳನ್ನು ಶಾಂತಿಯುತ ರೀತಿಯಲ್ಲಿ ಪರಿಹರಿಸಬೇಕು ಎಂದು ನಾವು ನಂಬುತ್ತೇವೆ, ನಮ್ಮ ಎಲ್ಲಾ ಪ್ರಯತ್ನಗಳು ಮಾನವೀಯತೆಗೆ ಆದ್ಯತೆ ನೀಡುತ್ತವೆ. ಮುಂದಿನ ದಿನಗಳಲ್ಲಿ ಸಾಧ್ಯವಿರುವ ಎಲ್ಲ ಸಹಕಾರವನ್ನು ನೀಡಲು ಭಾರತ ಸಿದ್ಧವಾಗಿದೆ" ಎಂದು ಎಂದು ಪ್ರಧಾನಿ ಹೇಳಿದರು.
ಬ್ರಿಕ್ಸ್‌ನ ರಷ್ಯಾದ ಯಶಸ್ವಿ ಅಧ್ಯಕ್ಷತೆಗೆ ಪ್ರಧಾನಿ ಮೋದಿ ಪುಟಿನ್ ಅವರನ್ನು ಅಭಿನಂದಿಸಿದರು ಮತ್ತು ಅನೇಕ ದೇಶಗಳು ಈಗ ಗುಂಪಿಗೆ ಸೇರಲು ಬಯಸುತ್ತವೆ ಎಂದು ಹೇಳಿದ್ದಾರೆ.
Advertisement