
ಟೆಲ್ ಅವಿವ್: ಇರಾನ್ ಬೆಂಬಲಿತ ಉಗ್ರಗಾಮಿ ಗುಂಪಿನ ಕಮಾಂಡರ್‌ಗಳನ್ನು ಗುರಿಯಾಗಿಸಿಕೊಂಡು ಮೂರು ವಾರಗಳ ಹಿಂದೆ ಬೈರುತ್‌ನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹತ್ಯೆಗೀಡಾದ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾv ಉತ್ತರಾಧಿಕಾರಿಯಾಗಿ ಸುಳಿವು ನೀಡಿದ ಧರ್ಮಗುರುವನ್ನು ಕೊಂದಿರುವುದಾಗಿ ಇಸ್ರೇಲ್ ಸೇನೆ ಘೋಷಿಸಿದೆ.
ಆದರೆ ಇಸ್ರೇಲ್ ಸೇನೆ ಹೇಳಿರುವ ಹಶೆಮ್ ಸಫಿದ್ದೀನ್‌ನನ್ನು ಕೊಂದಿರುವ ಬಗ್ಗೆ ಹೆಜ್ಬುಲ್ಲಾ ಇಲ್ಲಿಯವರೆಗೆ ಹೇಳಿಕೆ ನೀಡಿಲ್ಲ. ಸರಿಸುಮಾರು ಮೂರು ವಾರಗಳ ಹಿಂದೆ ನಡೆದ ದಾಳಿಯಲ್ಲಿ, ಹಿಜ್ಬುಲ್ಲಾದ ಕಾರ್ಯಕಾರಿ ಮಂಡಳಿಯ ಮುಖ್ಯಸ್ಥ ಹಶೆಮ್ ಸಫೀದ್ದೀನ್ ಮತ್ತು ಹಿಜ್ಬುಲ್ಲಾದ ಗುಪ್ತಚರ ನಿರ್ದೇಶನಾಲಯದ ಮುಖ್ಯಸ್ಥ ಅಲಿ ಹುಸೇನ್ ಹಜಿಮಾ ಇತರ ಹೆಜ್ಬುಲ್ಲಾ ಕಮಾಂಡರ್ ಗಳೊಂದಿಗೆ ಕೊಲ್ಲಲ್ಪಟ್ಟಿದ್ದಾನೆ ಎಂದು ದೃಢಪಡಿಸುತ್ತೇವೆ ಎಂದು ಇಸ್ರೇಲಿ ಸೇನೆ ಹೇಳಿದೆ.
ಲೆಬನಾನಿನ ರಾಜಧಾನಿಯಲ್ಲಿ ಹಿಜ್ಬುಲ್ಲಾದ ಭದ್ರಕೋಟೆಯಾದ ದಕ್ಷಿಣ ಬೈರುತ್ ಉಪನಗರ ದಹಿಯೆಹ್‌ನಲ್ಲಿರುವ ಹಿಜ್ಬುಲ್ಲಾದ ಮುಖ್ಯ ಗುಪ್ತಚರ ಪ್ರಧಾನ ಕಚೇರಿಯನ್ನು ವಾಯುಪಡೆಯು ಹೊಡೆದಿದೆ. ಆ ಸಮಯದಲ್ಲಿ 25 ಕ್ಕೂ ಹೆಚ್ಚು ಹಿಜ್ಬುಲ್ಲಾ ಉಗ್ರಗಾಮಿಗಳು ಅಲ್ಲಿದ್ದರು ಎಂದು ಸೇನೆ ಹೇಳಿದೆ.
ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ದೀರ್ಘಾವಧಿಯ ಹಿಜ್ಬುಲ್ಲಾ ನಾಯಕ ನಸ್ರಲ್ಲಾಹ್ ಸೆಪ್ಟೆಂಬರ್ 27 ರಂದು ಹತ್ಯೆಗೀಡಾಗಿದ್ದಾನೆ.
ಲೆಬನಾನ್ ಮೂಲದ ಗುಂಪಿನ ನಾಯಕನಾಗಿ ತನ್ನ ದೂರದ ಸೋದರ ಸಂಬಂಧಿ ಉತ್ತರಾಧಿಕಾರಿಯಾಗಲು ಸಫೀದಿನ್, ವಾರಗಳ ಹಿಂದೆ ಬೈರುತ್‌ನಲ್ಲಿ ಇಸ್ರೇಲಿ ದಾಳಿ ಮಾಡಿದ ನಂತರ ಸಂಪರ್ಕದಿಂದ ಹೊರಗುಳಿದಿದ್ದಾನೆ ಎಂದು ಉನ್ನತ ಮಟ್ಟದ ಹಿಜ್ಬುಲ್ಲಾ ಮೂಲವು ತಿಳಿಸಿದೆ.
Advertisement