
ಡಮಾಸ್ಕಸ್ ಇಸ್ರೇಲ್ ರಾತ್ರೋರಾತ್ರಿ ಸಿರಿಯಾದ ಹಲವಾರು ಪ್ರದೇಶಗಳಲ್ಲಿ ದಾಳಿ ನಡೆಸಿದ್ದು ಕನಿಷ್ಠ 14 ಮಂದಿ ಹತ್ಯೆಯಾಗಿದ್ದು 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸರ್ಕಾರಿ ಮಾಧ್ಯಮಗಳು ಈ ಮಾಹಿತಿಯನ್ನು ನೀಡಿವೆ.
ಸಿರಿಯಾದ ರಾಜ್ಯ ಸುದ್ದಿ ಸಂಸ್ಥೆ SANA ಪ್ರಕಾರ, ಭಾನುವಾರ ತಡ ರಾತ್ರಿ ಮಧ್ಯ ಸಿರಿಯಾದ ಹಲವಾರು ಪ್ರದೇಶಗಳ ಮೇಲೆ ದಾಳಿ ಮಾಡಿದೆ. ಹಮಾಸ್ ಪ್ರಾಂತ್ಯದ ಹೆದ್ದಾರಿಯನ್ನು ಹಾನಿಗೊಳಿಸಿದ್ದು ಬೆಂಕಿ ಆವರಿಸಿಕೊಂಡಿದೆ. ಹೀಗಾಗಿ ಸೋಮವಾರ ಬೆಳಿಗ್ಗೆ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹೆಣಗಾಡಿದರು.
ಪಶ್ಚಿಮ ಹಮಾಸ್ ಪ್ರಾಂತ್ಯದ ಮಸ್ಯಾಫ್ ರಾಷ್ಟ್ರೀಯ ಆಸ್ಪತ್ರೆಯ ಆರಂಭಿಕ ವರದಿಗಳ ಪ್ರಕಾರ, ದಾಳಿಯಲ್ಲಿ 14 ಮಂದಿ ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದೆ. ಮಸ್ಯಾಫ್‌ನಲ್ಲಿರುವ ವೈಜ್ಞಾನಿಕ ಸಂಶೋಧನಾ ಕೇಂದ್ರ ಮತ್ತು ಸಿರಿಯಾದಲ್ಲಿ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿರುವ ಇತರ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ವರದಿ ಮಾಡಿದೆ.
ಸಿರಿಯಾದಲ್ಲಿ ಇರಾನಿನ ಬೇರೂರುವಿಕೆಯನ್ನು ನಿಲ್ಲಿಸಲು ಪ್ರತಿಜ್ಞೆ ಇಸ್ರೇಲ್ ಮಾಡಿದೆ. ಅದಕ್ಕೆ ಕಾರಣ, ಲೆಬನಾನಿನ ಉಗ್ರಗಾಮಿ ಗುಂಪು ಹೆಜ್ಬೊಲ್ಲಾಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸಲು ಇರಾನ್‌ಗೆ ಸಿರಿಯಾ ಪ್ರಮುಖ ಮಾರ್ಗವಾಗಿದೆ. ಇಸ್ರೇಲ್ ಮೇಲೆ ಪ್ರಾಕ್ಸಿ ಯುದ್ಧ ನಡೆಸುತ್ತಿರುವ ಇರಾನ್, ಹೆಜ್ಬೊಲ್ಲಾ ಉಗ್ರರನ್ನು ಮುಂದೆ ಬಿಟ್ಟು ಇಸ್ರೇಲ್ ಮೇಲೆ ರಾಕೆಟ್ ದಾಳಿ ಮಾಡುವಂತೆ ಪ್ರಚೋದಿಸುತ್ತಿದೆ.
Advertisement