ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: 25 ದೇಶಗಳ 130 ಕ್ಕೂ ಹೆಚ್ಚು ನಗರಗಳಲ್ಲಿ ಅನಿವಾಸಿ ಭಾರತೀಯರಿಂದ ಪ್ರತಿಭಟನೆ

ಜಪಾನ್, ಆಸ್ಟ್ರೇಲಿಯಾ, ತೈವಾನ್ ಮತ್ತು ಸಿಂಗಾಪುರಗಳಲ್ಲಿ ದೊಡ್ಡ ಮತ್ತು ಸಣ್ಣ ಗುಂಪುಗಳಲ್ಲಿ ಪ್ರಾರಂಭವಾದ ಪ್ರತಿಭಟನೆ, ಯುರೋಪ್ ಮತ್ತು ಅಮೆರಿಕದ ನಗರಗಳಿಗೂ ಹರಡಿತು ಎಂದು ವರದಿ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಕೋಲ್ಕತ್ತಾದ ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಳೆದ ತಿಂಗಳು ನಡೆದ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿ ವಿದೇಶದಲ್ಲೂ ಪ್ರತಿಭಟನೆ ನಡೆಯುತ್ತಿದೆ.

ಭಾನುವಾರ 25 ದೇಶಗಳ 130 ಕ್ಕೂ ಹೆಚ್ಚು ನಗರಗಳಲ್ಲಿ ಸಾವಿರಾರು ಅನಿವಾಸಿ ಭಾರತೀಯರು ಪ್ರತಿಭಟನೆ ನಡೆದಿರುವುದಾಗಿ ಸಂಘಟಕರು ಹೇಳಿರುವುದಾಗಿ ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಜಪಾನ್, ಆಸ್ಟ್ರೇಲಿಯಾ, ತೈವಾನ್ ಮತ್ತು ಸಿಂಗಾಪುರಗಳಲ್ಲಿ ದೊಡ್ಡ ಮತ್ತು ಸಣ್ಣ ಗುಂಪುಗಳಲ್ಲಿ ಪ್ರಾರಂಭವಾದ ಪ್ರತಿಭಟನೆ, ಯುರೋಪ್ ಮತ್ತು ಅಮೆರಿಕದ ನಗರಗಳಿಗೂ ಹರಡಿತು ಎಂದು ವರದಿ ಹೇಳಿದೆ.

ಆಗಸ್ಟ್ 9 ರಂದು 31 ವರ್ಷದ ಟ್ರೈನಿ ಡಾಕ್ಟರ್ ಮೇಲೆ ಅತ್ಯಾಚಾರವೆಸಗಿ, ಕೊಂದ ನಂತರ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿದೆ. ಈ ಸಂಬಂಧ ಸಂತ್ರಸ್ತೆ ವ್ಯಾಸಂಗ ಮಾಡುತ್ತಿದ್ದ ಕಾಲೇಜಿನ ಮಾಜಿ ಪ್ರಾಂಶುಪಾಲರೊಂದಿಗೆ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ.

ಸಾಂದರ್ಭಿಕ ಚಿತ್ರ
ಆರ್ ಜಿ ಕಾರ್ ಆಸ್ಪತ್ರೆ ಪ್ರಕರಣ: ಸಾಕ್ಷ್ಯಾಧಾರಗಳ ಕೊರತೆ, ಸಿಬಿಐ ತನಿಖೆ ಮೇಲೆ ಪರಿಣಾಮ!

ಕರ್ತವ್ಯದಲ್ಲಿದ್ದ ಯುವ ಟ್ರೈನಿ ವೈದೆ ಮೇಲೆ ಮಾಡಿದ ಈ ಘೋರ ಅಪರಾಧದ ಸುದ್ದಿಯು ನಮ್ಮಲ್ಲಿ ಪ್ರತಿಯೊಬ್ಬರನ್ನು ಮಾನವ ಜೀವನದ ಕಡೆಗಣನೆಯಿಂದ ಬೆಚ್ಚಿಬೀಳಿಸಿದೆ ಎಂದು ಜಾಗತಿಕ ಪ್ರತಿಭಟನೆಯ ಸಂಘಟಕಿ ದೀಪ್ತಿ ಜೈನ್ ಹೇಳಿರುವುದಾಗಿ ರಾಯಿಟರ್ಸ್ ಉಲ್ಲೇಖಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com