BJP, RSS ಸಿದ್ಧಾಂತ ಮಹಿಳೆಯರನ್ನು ಅಡುಗೆಮನೆಗೆ ಸೀಮಿತಗೊಳಿಸುತ್ತದೆ; ಭಾರತದ ರಾಜಕೀಯದಲ್ಲಿ ಪ್ರೀತಿ, ಗೌರವ ಕಾಣೆಯಾಗಿದೆ: ರಾಹುಲ್ ಗಾಂಧಿ

ಲೋಕಸಭೆ ಚುನಾವಣಾ ಫಲಿತಾಂಶದ ಕೆಲವೇ ನಿಮಿಷಗಳಲ್ಲಿ, ಭಾರತದಲ್ಲಿ ಯಾರೂ ಬಿಜೆಪಿ ಅಥವಾ ಭಾರತದ ಪ್ರಧಾನಿಗೆ ಹೆದರುವುದಿಲ್ಲ ಎಂಬುದು ಅರ್ಥವಾಗಿದೆ. ಹೀಗಾಗಿ ಇದೊಂದು ದೊಡ್ಡ ಸಾಧನೆ.
ಟೆಕ್ಸಾಸ್ ನಲ್ಲಿ ಮಾತನಾಡಿದ ರಾಹುಲ್ ಗಾಂಧಿ
ಟೆಕ್ಸಾಸ್ ನಲ್ಲಿ ಮಾತನಾಡಿದ ರಾಹುಲ್ ಗಾಂಧಿ
Updated on

ಡಲ್ಲಾಸ್(ಟೆಕ್ಸಾಸ್): ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಡಲ್ಲಾಸ್ ಮತ್ತು ಟೆಕ್ಸಾಸ್ ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವ ವೇಳೆ ತಮ್ಮ ಎಂದಿನ ಶೈಲಿಯಲ್ಲಿ ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶ ನಂತರ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಭಾರತೀಯರಲ್ಲಿದ್ದ ಭಯ ಮರೆಯಾಗಿದೆ. ಇತ್ತೀಚೆಗೆ ಎಲ್ಲಾ ಭಾರತೀಯರಲ್ಲಿ ನಿರ್ಭಯತೆಯ ಸಂಕೇತವಾದ ಅಭಯಮುದ್ರ ಕಂಡುಬರುತ್ತಿದೆ, ಆದರೆ ಬಿಜೆಪಿಗೆ ಇದನ್ನು ಸಹಿಸಿಕೊಳ್ಳಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ಬಿಜೆಪಿ ಬಗ್ಗೆ ಜನರಲ್ಲಿದ್ದ ಭಯದ ಮನೋಭಾವ ಮರೆಯಾಗಿದೆ. ಲೋಕಸಭೆ ಚುನಾವಣಾ ಫಲಿತಾಂಶದ ಕೆಲವೇ ನಿಮಿಷಗಳಲ್ಲಿ, ಭಾರತದಲ್ಲಿ ಯಾರೂ ಬಿಜೆಪಿ ಅಥವಾ ಭಾರತದ ಪ್ರಧಾನಿಗೆ ಹೆದರುವುದಿಲ್ಲ ಎಂಬುದು ಅರ್ಥವಾಗಿದೆ. ಹೀಗಾಗಿ ಇದೊಂದು ದೊಡ್ಡ ಸಾಧನೆ, ಹಾಗೆಂದು ಇದು ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಪಕ್ಷದವರಲ್ಲ. ನಾವು ಇಲ್ಲಿ ಬಾಹ್ಯ. ಇದು ಪ್ರಜಾಪ್ರಭುತ್ವವನ್ನು ಅರಿತುಕೊಂಡ ಭಾರತದ ಜನರ ದೊಡ್ಡ ಸಾಧನೆ ಎಂದರು.

ಟೆಕ್ಸಾಸ್ ನಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?: ಭಾರತೀಯ ಜನತಾ ಪಕ್ಷದ ಮೂಲ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಭಾರತವನ್ನು ಒಂದು ಕಲ್ಪನೆ ಎಂದು ನಂಬುತ್ತದೆ, ಆದರೆ ನಮ್ಮ ಪಕ್ಷವಾದ ಕಾಂಗ್ರೆಸ್ ಭಾರತವು ಬಹುಸಂಖ್ಯೆಯ ವಿಚಾರಗಳನ್ನು ನಂಬುತ್ತದೆ ಎಂದು ಭಾವಿಸುತ್ತೇವೆ.

ಭಾರತವು ಒಂದು ಕಲ್ಪನೆ ಎಂದು ಆರ್‌ಎಸ್‌ಎಸ್ ನಂಬಿದರೆ ಭಾರತವು ಅನೇಕ ಕಲ್ಪನೆಗಳ ಬಹುಸಂಖ್ಯೆಯನ್ನು ಹೊಂದಿರುವ ದೇಶ ಎಂದು ಭಾವಿಸುತ್ತದೆ. ಪ್ರತಿಯೊಬ್ಬರಿಗೂ ಭಾಗವಹಿಸಲು ಅವಕಾಶ ನೀಡಬೇಕು, ಕನಸು ಕಾಣಲು ಅವಕಾಶ ನೀಡಬೇಕು ಮತ್ತು ಅವರ ಜಾತಿ, ಭಾಷೆ, ಧರ್ಮ, ಸಂಪ್ರದಾಯ ಅಥವಾ ಇತಿಹಾಸವನ್ನು ಲೆಕ್ಕಿಸದೆ ಅವಕಾಶ ನೀಡಬೇಕೆಂದು ನಾವು ನಂಬುತ್ತೇವೆ ಎಂದರು.

ಟೆಕ್ಸಾಸ್ ನಲ್ಲಿ ಮಾತನಾಡಿದ ರಾಹುಲ್ ಗಾಂಧಿ
ಉತ್ಪಾದನೆ ವಲಯ ಚೀನಾ ಪಾಲು, ಭಾರತ ಹಾಗೂ ಪಶ್ಚಿಮದ ರಾಷ್ಟ್ರಗಳಲ್ಲಿ ನಿರುದ್ಯೋಗ ಸಮಸ್ಯೆ: ರಾಹುಲ್ ಗಾಂಧಿ

ಭಾರತೀಯ ರಾಜಕೀಯದಲ್ಲಿ ಪ್ರೀತಿ, ಗೌರವ ಮತ್ತು ನಮ್ರತೆ ಕಾಣೆಯಾಗಿದೆ, ನಾವೆಲ್ಲರೂ ಒಂದು ಎಂಬ ಪರಿಕಲ್ಪನೆ ಇಲ್ಲದಾಗಿದೆ, ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತಗಳು ಮಹಿಳೆಯರು ಅಡುಗೆ ಮನೆಯಲ್ಲಿ ಇರಬೇಕೆಂದು ಬಯಸುತ್ತವೆ ಎಂದರು.

ಭಾರತದ ಪ್ರಧಾನಿ ಮೋದಿಯವರು ದೇಶದ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಭಾರತದಲ್ಲಿ ಲಕ್ಷಾಂತರ ಜನರು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದು, ಅದು ಚುನಾವಣೆಯಲ್ಲಿ ಗೊತ್ತಾಗಿದೆ ಎಂದರು. ಇಂದು ನಾನು ಮಾತನಾಡುವ ಪ್ರತಿಯೊಂದು ಮಾತುಗಳು ಸಂವಿಧಾನದಲ್ಲಿ ಬೇರೂರಿದ್ದು, ಆಧುನಿಕ ಭಾರತದ ಅಡಿಪಾಯ ಎಂದು ಬಣ್ಣಿಸಿದರು. ಚುನಾವಣೆ ಸಂದರ್ಭದಲ್ಲಿ ಸಂವಿಧಾನವನ್ನು ಎತ್ತಿ ಹಿಡಿದಾಗ ಜನರಿಗೆ ಅವರ ಸಂದೇಶ ಅರ್ಥವಾಯಿತು ಎಂದರು.

ನಾನು ಸಂವಿಧಾನವನ್ನು ಎತ್ತಿದಾಗ ಜನರ ಮನಸ್ಥಿತಿ ಬದಲಾಗಿದ್ದನ್ನು ಗಮನಿಸಿದ್ದೇನೆ. ಜನರು ನಾನು ಏನು ಹೇಳುತ್ತಿದ್ದೇನೆಂದು ಅರ್ಥಮಾಡಿಕೊಂಡರು. ಬಿಜೆಪಿಯವರು ನಮ್ಮ ಸಂಪ್ರದಾಯದ ಮೇಲೆ, ನಮ್ಮ ಭಾಷೆಯ ಮೇಲೆ, ನಮ್ಮ ರಾಜ್ಯಗಳ ಮೇಲೆ ದಾಳಿ ಮಾಡುತ್ತಿದ್ದಾರೆ, ನಮ್ಮ ಇತಿಹಾಸದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಅವರು ಹೇಳುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ, ಭಾರತದ ಸಂವಿಧಾನದ ಮೇಲೆ ದಾಳಿ ಮಾಡುವ ಯಾರಾದರೂ ನಮ್ಮ ಧಾರ್ಮಿಕ ಸಂಪ್ರದಾಯದ ಮೇಲೆ ದಾಳಿ ಮಾಡುತ್ತಾರೆ ಎಂದು ಗಾಂಧಿ ಹೇಳಿದರು.

ಅಮೇರಿಕಾಕ್ಕೆ ಭಾರತದ ಅಗತ್ಯವಿದೆ ಮತ್ತು ಪ್ರತಿಯಾಗಿ ಭಾರತಕ್ಕೂ ಅಮೆರಿಕದ ಅವಶ್ಯಕತೆಯಿದೆ ಎಂದು ಪ್ರತಿಪಾದಿಸಿದ ರಾಹುಲ್ ಗಾಂಧಿ, ಅನಿವಾಸಿ ಭಾರತೀಯರು ಎರಡು ರಾಷ್ಟ್ರಗಳ ನಡುವೆ ಸೇತುವೆಯಾಗಿ ಕರ್ತವ್ಯ ನಿರ್ವಹಿಸುತ್ತಾರೆ ಎಂದರು.

ನನ್ನ ದೃಷ್ಟಿಯಲ್ಲಿ, ನೀವು ಅನಿವಾಸಿ ಭಾರತೀಯರು ಭಾರತ ಮತ್ತು ಅಮೆರಿಕ ಮಧ್ಯೆ ಮುಕ್ತವಾಗಿ ಪ್ರಯಾಣಿಸಬೇಕು. ನೀವು ಭಾರತದ ಕಲ್ಪನೆಯನ್ನು ಯುನೈಟೆಡ್ ಸ್ಟೇಟ್ಸ್‌ಗೆ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಆಲೋಚನೆಗಳನ್ನು ಭಾರತಕ್ಕೆ ತರಬೇಕು. ನೀವು ಬಹಳ ಮುಖ್ಯವಾದ ಪಾತ್ರವನ್ನು ಹೊಂದಿದ್ದೀರಿ ಏಕೆಂದರೆ ಈ ಎರಡು ಒಕ್ಕೂಟಗಳ ನಡುವಿನ ಸಂಬಂಧವು ಎರಡೂ ದೇಶಗಳ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com