ವಾಷಿಂಗ್ಟನ್: ಭಾರತ, ಅಮೆರಿಕ ಮತ್ತು ಇತರ ಪಶ್ಚಿಮದ ರಾಷ್ಟ್ರಗಳು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿವೆ ಆದರೆ ಆದರೆ ಜಾಗತಿಕ ಉತ್ಪಾದನೆಯಲ್ಲಿ ಪ್ರಾಬಲ್ಯ ಸಾಧಿಸಿರುವ ಚೀನಾದಲ್ಲಿ ಉದ್ಯೋಗ ಸಮಸ್ಯೆಯಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದು, ಭಾರತ ದೇಶ ಉತ್ಪಾದನೆಯತ್ತ ಗಮನ ಹರಿಸುವ ಅಗತ್ಯವಿದೆ ಎಂದರು.
ನಿನ್ನೆ ಭಾನುವಾರ ಅಮೆರಿಕಾದ ಡಲ್ಲಾಸ್‌ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತದಲ್ಲಿ ಕೌಶಲ್ಯ ಹೊಂದಿರುವವರಿಗೆ ಕೊರತೆಯಿಲ್ಲ. ಉತ್ಪಾದನೆಯಲ್ಲಿ ಶ್ರೇಷ್ಠತೆ ಸಾಧಿಸಿದರೆ ಭಾರತ ದೇಶವು ಚೀನಾದೊಂದಿಗೆ ಸ್ಪರ್ಧಿಸಬಹುದು ಎಂದರು.
ವ್ಯಾಪಾರ ಮತ್ತು ಶಿಕ್ಷಣ ವ್ಯವಸ್ಥೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ವೃತ್ತಿಪರ ತರಬೇತಿಯನ್ನು ಪ್ರೋತ್ಸಾಹಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ನಾಲ್ಕು ದಿನಗಳ ಯುಎಸ್ ಎಯ ಅನಧಿಕೃತ ಪ್ರವಾಸದಲ್ಲಿರುವ ರಾಹುಲ್ ಗಾಂಧಿಯವರು ಡಲ್ಲಾಸ್, ಟೆಕ್ಸಾಸ್ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ಅನಿವಾಸಿ ಭಾರತೀಯರು ಯುವಕರೊಂದಿಗೆ ಸಂವಾದ ನಡೆಸಲಿದ್ದಾರೆ. ಇಂದು ಸೋಮವಾರದಿಂದ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅವರು ಅಲ್ಲಿನ ಜನಪ್ರತಿನಿಧಿಗಳು ಮತ್ತು ಯುಎಸ್ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲು ಯೋಜಿಸಿದ್ದಾರೆ.
ಕಳೆದ ಶನಿವಾರ ರಾತ್ರಿ ಡಲ್ಲಾಸ್‌ಗೆ ಆಗಮಿಸಿದ ಅವರನ್ನು ಹಿರಿಯ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಮತ್ತು ಯುಎಸ್‌ಎಯ ಭಾರತೀಯ ರಾಷ್ಟ್ರೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಮೊಹಿಂದರ್ ಗಿಲ್ಜಿಯಾನ್ ನೇತೃತ್ವದಲ್ಲಿ ಭಾರತೀಯ-ಅಮೆರಿಕನ್ ಸಮುದಾಯದ ಸದಸ್ಯರು ಸ್ವಾಗತಿಸಿದರು.
ಪಾಶ್ಚಿಮಾತ್ಯ ದೇಶಗಳಲ್ಲಿ ಹಾಗೆಯೇ ಭಾರತದಲ್ಲಿ ಕೂಡ ಉದ್ಯೋಗ ಸಮಸ್ಯೆ ಇದೆ. ಆದರೆ ವಿಶ್ವದ ಹಲವು ದೇಶಗಳಲ್ಲಿ ಉದ್ಯೋಗ ಸಮಸ್ಯೆ ಇಲ್ಲ. ಚೀನಾದಲ್ಲಿ ಉದ್ಯೋಗ ಸಮಸ್ಯೆ ಇಲ್ಲ. ವಿಯೆಟ್ನಾಂನಲ್ಲಿ ಉದ್ಯೋಗ ಸಮಸ್ಯೆ ಇಲ್ಲ ಎಂದರು.
ಚೀನಾ ಪ್ರಾಬಲ್ಯ: ನೀವು 1940 ರ ದಶಕ, 50 ಮತ್ತು 60 ರ ದಶಕಗಳಲ್ಲಿ ಯುನೈಟೆಡ್ ಸ್ಟೇಟ್ಸ್ ನ್ನು ನೋಡಿದರೆ, ಅವು ಜಾಗತಿಕ ಉತ್ಪಾದನೆಯ ಕೇಂದ್ರವಾಗಿತ್ತು. ತಯಾರಿಸಿದ ಯಾವುದಾದರೂ ವಸ್ತುಗಳು ಅದು, ಕಾರು ಆಗಿರಲಿ, ವಾಷಿಂಗ್ ಮೆಷಿನ್ ಗಳು, ಟಿವಿಗಳು, ಎಲ್ಲವೂ ಯುನೈಟೆಡ್ ಸ್ಟೇಟ್ಸ್ ನಲ್ಲಿ ತಯಾರಿಸಲ್ಪಟ್ಟವು. ಉತ್ಪಾದನೆಯು ಯುನೈಟೆಡ್ ಸ್ಟೇಟ್ಸ್‌ನಿಂದ ಕೊರಿಯಾಕ್ಕೆ ಹೋಗಿ ಅದು ಅಂತಿಮವಾಗಿ ಚೀನಾಕ್ಕೆ ಹೋಯಿತು, ಈಗ ನೀವು ನೋಡಿದರೆ, ಚೀನಾ ಜಾಗತಿಕ ಉತ್ಪಾದನೆಯಲ್ಲಿ ಪ್ರಾಬಲ್ಯ ಹೊಂದಿದೆ. ಪಶ್ಚಿಮ, ಅಮೆರಿಕ, ಯುರೋಪ್ ಮತ್ತು ಭಾರತವು ಉತ್ಪಾದನೆಯ ಕಲ್ಪನೆಯನ್ನು ಬಿಟ್ಟುಕೊಟ್ಟಿದೆ, ಅದನ್ನು ಚೀನಾಕ್ಕೆ ಹಸ್ತಾಂತರಿಸಿದ್ದಾರೆ ಎಂದರು.
ಉತ್ಪಾದನೆಯಿಂದ ಉದ್ಯೋಗ ಸೃಷ್ಟಿ: ಉತ್ಪಾದನೆ ಕ್ಷೇತ್ರದಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ನಾವು ಏನು ಮಾಡುತ್ತೇವೆ, ಅಮೆರಿಕನ್ನರು ಏನು ಮಾಡುತ್ತಾರೆ, ಪಶ್ಚಿಮದ ದೇಶಗಳು ಏನು ಮಾಡುತ್ತವೆ, ನಾವು ಬಳಕೆಯನ್ನು ಸಂಘಟಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಭಾರತ ದೇಶವು ಉತ್ಪಾದನೆ ಮತ್ತು ಉತ್ಪಾದನೆಯನ್ನು ಸಂಘಟಿಸುವ ಕ್ರಿಯೆಯ ಬಗ್ಗೆ ಯೋಚಿಸಬೇಕು. ಇಲ್ಲದಿದ್ದರೆ ಉತ್ಪಾದನೆ ಕೇತ್ರ ಚೀನಾ, ಬಾಂಗ್ಲಾ ದೇಶದವರ ಸಂರಕ್ಷಣೆಯ ಕ್ಷೇತ್ರವೆನಿಸಿಕೊಳ್ಳಲಿದೆ ಎಂದರು.
ಉತ್ಪಾದನೆಯನ್ನು ಉತ್ತೇಜಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ನಾವು ಅದನ್ನು ಮಾಡುವವರೆಗೆ, ನಿರುದ್ಯೋಗ ಸಮಸ್ಯೆಯಿರುತ್ತದೆ. ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್‌ನಲ್ಲಿ ಬರುತ್ತಿರುವ ಸಮಸ್ಯೆಗಳು ನಮ್ಮ ರಾಜಕೀಯದ ಧ್ರುವೀಕರಣಕ್ಕೆ ಕಾರಣವಾಗಿದೆ ಎಂದರು.
ಕೌಶಲ್ಯ ಕೊರತೆಯಿಲ್ಲ: ಭಾರತದಲ್ಲಿ ಕೌಶಲ್ಯದ ಸಮಸ್ಯೆ ಇದೆ ಎಂದು ಹಲವರು ಹೇಳುತ್ತಾರೆ. ಭಾರತಕ್ಕೆ ಕೌಶಲ್ಯದ ಸಮಸ್ಯೆ ಇದೆ ಎಂದು ನಾನು ಭಾವಿಸುವುದಿಲ್ಲ. ಭಾರತವು ಕೌಶಲ್ಯ ಹೊಂದಿರುವ ಜನರ ಬಗ್ಗೆ ಗೌರವವನ್ನು ಹೊಂದಿಲ್ಲ ಅಷ್ಟೆ. ವೃತ್ತಿಪರ ತರಬೇತಿಯ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ವ್ಯಾಪಾರ ವ್ಯವಸ್ಥೆಯೊಂದಿಗೆ ಜೋಡಿಸುವ ಅಗತ್ಯವಿದೆ ಎಂದರು.
ಈ ಅಂತರವನ್ನು ಕಡಿಮೆ ಮಾಡುವುದು ಅಥವಾ ಈ ಎರಡು ವ್ಯವಸ್ಥೆಗಳಾದ ಕೌಶಲ್ಯ ಮತ್ತು ಶಿಕ್ಷಣವನ್ನು ವೃತ್ತಿಪರ ತರಬೇತಿಯ ಮೂಲಕ ಜೋಡಿಸುವುದು ಮೂಲಭೂತವಾಗಿದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ದೊಡ್ಡ ಸಮಸ್ಯೆಯು ಸೈದ್ಧಾಂತಿಕ ಸೆರೆಹಿಡಿಯುವಿಕೆಯಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.
ಭಾರತವು ಉತ್ಪಾದನೆಗಾಗಿ ತನ್ನನ್ನು ತಾನು ಹೊಂದಿಸಿಕೊಳ್ಳಲು ಪ್ರಾರಂಭಿಸಿದರೆ ಮತ್ತು ಕೌಶಲ್ಯಗಳನ್ನು ಗೌರವಿಸಲು ಪ್ರಾರಂಭಿಸಿದರೆ ಭಾರತವು ಚೀನಾವನ್ನು ಎದುರಿಸಬಹುದು ಎಂದು ಅವರು ಮನಗಂಡಿದ್ದಾರೆ ಎಂದು ಅವರು ಹೇಳಿದರು.
ನನಗೆ ಇದು ಸಂಪೂರ್ಣವಾಗಿ ಮನವರಿಕೆಯಾಗಿದೆ. ತಮಿಳುನಾಡಿನಂತಹ ರಾಜ್ಯಗಳು ಅದನ್ನು ಈಗಾಗಲೇ ತೋರಿಸಿವೆ. ಭಾರತದ ರಾಜ್ಯಗಳು ಇದನ್ನು ಮಾಡಿಲ್ಲ ಎಂದು ಅಲ್ಲ ಪ್ರಮಾಣ ಮತ್ತು ಸಮನ್ವಯದೊಂದಿಗೆ ಅದನ್ನು ಮಾಡಬೇಕಾಗಿದೆ" ಎಂದು ಗಾಂಧಿ ಹೇಳಿದರು.
Advertisement