ಚೀನಾದಲ್ಲಿ ನಿವೃತ್ತಿಯ ವಯಸ್ಸು 3 ವರ್ಷ ಹೆಚ್ಚಳ; ಯುವ ಉದ್ಯೋಗಿಗಳಿಂದ ತೀವ್ರ ವಿರೋಧ! ಏಕೆ ಗೊತ್ತೆ?

ಚೀನಾ ವೇಗವಾಗಿ ವಯಸ್ಸಾದ ಸಮಾಜವನ್ನು ಎದುರಿಸುತ್ತಿದೆ: ಚೀನಾದ ಜನಸಂಖ್ಯೆ 2023 ರಲ್ಲಿ ಸತತವಾಗಿ ಎರಡನೇ ವರ್ಷಕ್ಕೆ ಕುಸಿದಿದೆ.
ಚೀನಾದಲ್ಲಿ ನಿವೃತ್ತಿಯ ವಯಸ್ಸು ಏರಿಕೆ
An old man in China cycles his way homeonline desk
Updated on

ಬೀಜಿಂಗ್: ಚೀನಾ ಸರ್ಕಾರ 2025 ರಿಂದ ದೇಶದಲ್ಲಿನ ನಿವೃತ್ತಿಯ ವಯಸ್ಸನ್ನು ಇನ್ನೂ 3 ವರ್ಷಗಳ ಕಾಲ ವಿಸ್ತರಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ.

ಚೀನಾದ ಯುವ ನೌಕರರು ಈ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಪ್ರಸ್ತಾವನೆ ಬಗ್ಗೆ ಮಾಧ್ಯಮಗಳೊಂದಿಗೆ ಅನಿಸಿಕೆ ಹಂಚಿಕೊಂಡಿರುವ 30 ವರ್ಷದ ಮಾರ್ಕೆಟಿಂಗ್ ವೃತ್ತಿಪರರೊಬ್ಬರು ನನ್ನ ಪಿಂಚಣಿಯನ್ನು ಯಾವಾಗ ಪಡೆಯಬಹುದು? ಎಂದು ಕ್ಸಿನ್ ಜಿ ಹೇಳಿದ್ದಾರೆ.

"ನಾವು ಆಧುನಿಕ ಜನರು ಈಗ ತುಂಬಾ ಸ್ಪರ್ಧಾತ್ಮಕ ಮತ್ತು ತೊಂದರೆಗೀಡಾಗಿದ್ದೇವೆ ಎಂಬ ಚಿಂತೆ ನಮ್ಮನ್ನು ಕಾಡುತ್ತಿದೆ. ನಮ್ಮ ಆರೋಗ್ಯದ ದೃಷ್ಟಿಯಿಂದ ಆ ವಯಸ್ಸನ್ನು ನಾವು ನೋಡುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಪುರುಷ ಕಾರ್ಮಿಕರ ಶಾಸನಬದ್ಧ ನಿವೃತ್ತಿ ವಯಸ್ಸನ್ನು 60 ರಿಂದ 63 ಕ್ಕೆ ಏರಿಸಲಾಗುವುದು ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಮಹಿಳಾ ಕಾರ್ಮಿಕರಿಗೆ ಇದು 50 ಅಥವಾ 55 ವರ್ಷದಿಂದ 55 ಮತ್ತು 58 ವರ್ಷಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ. ನಿವೃತ್ತಿ ವಯಸ್ಸನ್ನು ಜನವರಿ 1, 2025 ರಿಂದ 15 ವರ್ಷಗಳಲ್ಲಿ ಕ್ರಮೇಣ ಹೆಚ್ಚಿಸಲಾಗುವುದು ಎಂದು ರಾಜ್ಯ ಮಾಧ್ಯಮ ತಿಳಿಸಿದೆ.

ಚೀನಾದ ಯುವ ನಿರುದ್ಯೋಗವು ಜುಲೈನಲ್ಲಿ 17.1 ಪ್ರತಿಶತದಷ್ಟಿತ್ತು. ಪ್ರಸ್ತುತ ಉದ್ಯೋಗ ಮಾರುಕಟ್ಟೆಯ ಬಗ್ಗೆಯೂ ಕ್ಸಿನ್ ಜಿ ಆತಂಕ ವ್ಯಕ್ತಪಡಿಸಿದ್ದಾರೆ ಮತ್ತು ನಿವೃತ್ತಿಯ ವಯಸ್ಸಿನ ವಿಸ್ತರಣೆ ಮಕ್ಕಳನ್ನು ಹೊಂದುವ ಬಗ್ಗೆ ಜನರು ಮರುಪರಿಶೀಲಿಸುವಂತೆ ಮಾಡುತ್ತದೆ, ಚೀನಾದ ವಯಸ್ಸಾದ ಜನಸಂಖ್ಯೆಯ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ ಎಂದು ಹೇಳಿದ್ದಾರೆ.

ಚೀನಾದಲ್ಲಿ ನಿವೃತ್ತಿಯ ವಯಸ್ಸು ಏರಿಕೆ
ಉತ್ಪಾದನೆ ವಲಯ ಚೀನಾ ಪಾಲು, ಭಾರತ ಹಾಗೂ ಪಶ್ಚಿಮದ ರಾಷ್ಟ್ರಗಳಲ್ಲಿ ನಿರುದ್ಯೋಗ ಸಮಸ್ಯೆ: ರಾಹುಲ್ ಗಾಂಧಿ

ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಡೇವಿಡ್ AFP ಮಾಧ್ಯಮದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದು, "ಇಷ್ಟು ದೀರ್ಘಾವಧಿ ಕೆಲಸ ಮಾಡಲು ಇಷ್ಟವಿಲ್ಲ" ಆದರೆ ಸರ್ಕಾರದ "ನಿರ್ಧಾರವನ್ನು ಅರ್ಥಮಾಡಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ. "ದೇಶವು ಪ್ರಾಯಶಃ ತನ್ನ ವಯಸ್ಸಾದ ಜನಸಂಖ್ಯೆಯ ಬಗ್ಗೆ ಯೋಚಿಸುತ್ತಿದೆ", ಗೌಪ್ಯತೆಯ ಕಾರಣಗಳಿಗಾಗಿ ತನ್ನ ಮೊದಲ ಹೆಸರನ್ನು ಮಾತ್ರ ನೀಡಲು ಬಯಸಿದ PR ಸಂಸ್ಥೆಯ ಇಂಟರ್ನ್ ಹೇಳಿದ್ದಾರೆ.

ವಯಸ್ಸಾದ ಸಮಾಜ

ಚೀನಾ ವೇಗವಾಗಿ ವಯಸ್ಸಾದ ಸಮಾಜವನ್ನು ಎದುರಿಸುತ್ತಿದೆ: ಚೀನಾದ ಜನಸಂಖ್ಯೆ 2023 ರಲ್ಲಿ ಸತತವಾಗಿ ಎರಡನೇ ವರ್ಷಕ್ಕೆ ಕುಸಿದಿದೆ. ಸೂಕ್ತ ಕ್ರಮವನ್ನು ತೆಗೆದುಕೊಳ್ಳದಿದ್ದರೆ ಆರ್ಥಿಕತೆ, ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ವ್ಯವಸ್ಥೆಗಳ ಮೇಲೆ ತೀವ್ರವಾದ ಪರಿಣಾಮಗಳ ಬಗ್ಗೆ ನೀತಿ ನಿರೂಪಕರು ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com