ಬೀಜಿಂಗ್: ಭಾರತದ ಜೊತೆ ಸಂಬಂಧ ಹಳಸಿದ ಬಳಿಕ ಚೀನಾಕ್ಕೆ ಹತ್ತಿರವಾರುವ ಮಾಲ್ಡೀವ್ಸ್ ಇದೀಗ ಆ ದೇಶದೊಂದಿಗೆ ಸೇರಿ ಸೇನಾ ಸಹಕಾರ ಒಪ್ಪಂದಕ್ಕೆ ಅನುಮೋದನೆ ನೀಡಿದೆ.
ಹೌದು... ಮಾಲ್ಡೀವ್ಸ್ ಮತ್ತು ಚೀನಾ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಿದವು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಈ ಕುರಿತು X ನಲ್ಲಿನ ಪೋಸ್ಟ್ ಮಾಡಲಾಗಿದ್ದು, ಮಾಲ್ಡೀವ್ಸ್‌ನ ರಕ್ಷಣಾ ಸಚಿವಾಲಯವು 11 ನೇ ಬೀಜಿಂಗ್ ಕ್ಸಿಯಾಂಗ್‌ಶಾನ್ ಫೋರಮ್‌ನಲ್ಲಿ ಮಾಲ್ಡೀವ್ಸ್ ರಕ್ಷಣಾ ಸಚಿವ ಘಾಸನ್ ಮೌಮೂನ್ ಮತ್ತು ಚೀನಾ ಸಹವರ್ತಿ ಅಡ್ಮಿರಲ್ ಡಾಂಗ್ ಜುನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು ಎಂದು ಪೋಸ್ಟ್ ಮಾಡಿದೆ.
ಅಲ್ಲದೆ 'ಸಭೆಯಲ್ಲಿ ಉಭಯ ದೇಶಗಳ ನಡುವೆ ರಕ್ಷಣಾ ಸಹಕಾರವನ್ನು ಬಲಪಡಿಸುವ ಮಾರ್ಗಗಳ ಕುರಿತು ಉಭಯ ಸಚಿವರು ಚರ್ಚಿಸಿದರು. ಚೀನಾದ ಮಾಲ್ಡೀವ್ಸ್‌ನ ರಾಯಭಾರಿ ಡಾ.ಫಜೀಲ್ ನಜೀಬ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು' ಎಂದು ಚರ್ಚೆಯ ವಿವರಗಳನ್ನು ಬಹಿರಂಗಪಡಿಸದೆ ಸಭೆ ಕುರಿತು ಮಾಹಿತಿ ನೀಡಿದೆ.
ಮಾಲ್ಡೀವ್ಸ್ ಮತ್ತು ಚೀನಾ ಈ ಹಿಂದೆ ಮಿಲಿಟರಿ ಸಂಬಂಧಗಳನ್ನು ಬಲಪಡಿಸಲು ಮಾತುಕತೆ ನಡೆಸಿದ್ದವು. ಮಾರ್ಚ್‌ನಲ್ಲಿ, ಮಾಲ್ಡೀವ್ಸ್ ಮತ್ತು ಚೀನಾ ಮಾಲ್ಡೀವ್ಸ್ ಮಿಲಿಟರಿ ಮತ್ತು ಭದ್ರತಾ ಸೇವೆಗಳಿಗೆ ಮಿಲಿಟರಿ ನೆರವು ನೀಡುವ ಒಪ್ಪಂದಕ್ಕೆ ಸಹಿ ಹಾಕಿದವು ಹೇಳಲಾಗಿದೆ. ಈ ಒಪ್ಪಂದದ ಅಡಿಯಲ್ಲಿ, ಚೀನಾ ಮಾಲ್ಡೀವ್ಸ್‌ಗೆ ಮಿಲಿಟರಿ ಉಪಕರಣಗಳು ಮತ್ತು ತರಬೇತಿಯನ್ನು ನೀಡುತ್ತದೆ ಎಂದು ಅಧ್ಯಕ್ಷ ಮೊಹಮ್ಮದ್ ಮುಯಿಝು ಹೇಳಿದ್ದಾರೆ.
Advertisement