
ಜ್ಯೂರಿಚ್: Switzerland ನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ Suicide Podನಲ್ಲಿ 64 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಪೊಲೀಸರು 4 ಮಂದಿಯನ್ನು ಬಂಧಿಸಿದ್ದಾರೆ.
ಹೌದು.. ಈ ಹಿಂದೆ 'ಒಂದೇ ನಿಮಿಷದಲ್ಲಿ ನೋವಿಲ್ಲದೆ ಸಾಯಿಸುವ ಯಂತ್ರ'ವನ್ನು ಸ್ವಿಟ್ಜರ್ಲೆಂಡ್ ಆವಿಷ್ಕರಿಸಲಾಗಿತ್ತು. ಇದಕ್ಕೆ ಸ್ವಿಟ್ಜರ್ಲೆಂಡ್ ಸರ್ಕಾರ ಕೂಡ ಅನುಮೋದನೆ ನೀಡಿತ್ತು ಎನ್ನಲಾಗಿತ್ತು.
ಇದರಿಂದ ಈಗ ಮೊದಲ ಸಾವಾಗಿದ್ದು, ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ 64 ವರ್ಷದ ಅಮೆರಿಕನ್ ಮಹಿಳೆ ಈ Suicide Pod ಮೂಲಕ ಸಾವಿಗೆ ಶರಣಾಗಿದ್ದಾರೆ.
ಈ ಸ್ಯೂಸೈಡ್ ಪಾಡ್ ನಿರ್ಮಾಣವಾದಾಗಿನಿಂದ ಇದರಲ್ಲಿ ಸಾವಿಗೆ ಶರಣಾದ ಮೊದಲ ವ್ಯಕ್ತಿ ಈಕೆಯೇ ಎನ್ನಲಾಗಿದೆ.
ಜರ್ಮನಿಯ ಗಡಿಯಲ್ಲಿರುವ ಶಾಫ್‌ಹೌಸೆನ್‌ನ ಉತ್ತರ ಕ್ಯಾಂಟನ್‌ನಲ್ಲಿರುವ ಪೊಲೀಸರು "ಸಾರ್ಕೊ" ಕ್ಯಾಪ್ಸುಲ್ ಅನ್ನು ಆತ್ಮಹತ್ಯೆ ಮಾಡಿಕೊಳ್ಳಲು ಅನುವು ಮಾಡಿಕೊಟ್ಟ ಆರೋಪದ ಮೇರೆಗೆ 4 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಆತ್ಮಹತ್ಯೆಗೆ ಪ್ರೇರೇಪಣೆ ಮತ್ತು ಕೆಲ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಈ Suicide Pod ನಿರ್ಮಾಣ ಸಂಸ್ಥೆ ದಿ ಲಾಸ್ಟ್ ರೆಸಾರ್ಟ್‌ನ ಸಹ-ಅಧ್ಯಕ್ಷ ಫ್ಲೋರಿಯನ್ ವಿಲೆಟ್, ಡಚ್ ಪತ್ರಕರ್ತ ಮತ್ತು ಇಬ್ಬರು ಸ್ವಿಸ್ ಪ್ರಜೆಗಳು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
Advertisement