ನವಾಜ್ ಷರೀಫ್
ನವಾಜ್ ಷರೀಫ್

ಪಾಕಿಸ್ತಾನದಲ್ಲಿ ಅತಂತ್ರ ಸಂಸತ್ ಸಾಧ್ಯತೆ: ಸಮ್ಮಿಶ್ರ ಸರ್ಕಾರ ರಚನೆಗೆ ಎಲ್ಲಾ ಪಕ್ಷಗಳಿಗೆ ನವಾಜ್ ಷರೀಫ್ ಆಹ್ವಾನ!

ಪಾಕಿಸ್ತಾನವನ್ನು ಮರು ನಿರ್ಮಾಣ ಮಾಡಲು ಸ್ಥಿರ ಸಮ್ಮಿಶ್ರ ಸರ್ಕಾರ ರಚಿಸಲು ಎಲ್ಲಾ ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳು ಕೈಜೋಡಿಸಬೇಕೆಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಶುಕ್ರವಾರ ಒತ್ತಾಯಿಸಿದ್ದಾರೆ.
Published on

ಇಸ್ಲಾಮಾಬಾದ್: ಪಾಕಿಸ್ತಾನವನ್ನು ಮರು ನಿರ್ಮಾಣ ಮಾಡಲು ಸ್ಥಿರ ಸಮ್ಮಿಶ್ರ ಸರ್ಕಾರ ರಚಿಸಲು ಎಲ್ಲಾ ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳು ಕೈಜೋಡಿಸಬೇಕೆಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಶುಕ್ರವಾರ ಒತ್ತಾಯಿಸಿದ್ದಾರೆ. ನಗದು ಕೊರತೆಯಿಂದ ಬಳಲುತ್ತಿರುವ ದೇಶವನ್ನು ಅದರ ಸಂಕಷ್ಟಗಳಿಂದ ಹೊರತರುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಸಕಾರಾತ್ಮಕ ಪಾತ್ರವನ್ನು ವಹಿಸಬೇಕು ಎಂದಿದ್ದಾರೆ. 

ಲಾಹೋರ್‌ನಲ್ಲಿರುವ ಪಕ್ಷದ ಕೇಂದ್ರೀಯ ಕಾರ್ಯದರ್ಶಿಯಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ 74 ವರ್ಷದ ಷರೀಫ್, ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷ ಬೆಂಬಲಿತ  ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಎಲ್ಲಾ ಪಕ್ಷಗಳ ಜನಾದೇಶವನ್ನು ತಮ್ಮ ಪಕ್ಷ ಗೌರವಿಸುತ್ತದೆ ಎಂದು ಹೇಳಿದರು. ಪಾಕಿಸ್ತಾನವನ್ನು ಸಂಕಷ್ಟದಿಂದ ಹೊರತರಲು ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಕುಳಿತು ಸರ್ಕಾರ ರಚಿಸುವ ಅಗತ್ಯವಿದೆ ಎಂದು ಮೂರು ಬಾರಿ ಮಾಜಿ ಪ್ರಧಾನಿ ಷರೀಫ್ ಹೇಳಿದ್ದಾರೆ.

ಮತ್ತೆ ಮತ್ತೆ ಚುನಾವಣೆ ನಡೆಸಲು ಸಾಧ್ಯವಿಲ್ಲ. ನಿನ್ನೆ ನಾವೆಲ್ಲರೂ ಒಟ್ಟಿಗೆ ಚರ್ಚಿಸಿದೇವು. ಆದರೆ ಫಲಿತಾಂಶ ಬರದ ಕಾರಣ ನಿಮ್ಮನ್ನು ಉದ್ದೇಶಿಸಿ ಮಾತನಾಡಲಿಲ್ಲ. ದೇಶವು ಅತಂತ್ರ ಸಂಸತ್ತಿನತ್ತ ಸಾಗುತ್ತಿದ್ದು,  ಸಂಕಷ್ಟದಲ್ಲಿರುವ ಪಾಕಿಸ್ತಾನವನ್ನು ಪುನರ್ನಿರ್ಮಿಸಲು ಮತ್ತು ಸರ್ಕಾರ ರಚಿಸಲು ಪ್ರತಿಯೊಬ್ಬರನ್ನು ಆಹ್ವಾನಿಸುತ್ತಿದ್ದೇವೆ ಎಂದು ಅವರು ಹೇಳಿದರು. 

"ನಮ್ಮ ಅಜೆಂಡಾ ಕೇವಲ ಸಂತೋಷದ ಪಾಕಿಸ್ತಾನವಾಗಿದೆ. ನಾವು ಮೊದಲು ಏನು ಮಾಡಿದ್ದೇವೆಂದು ನಿಮಗೆ ತಿಳಿದಿದೆ." ಈ ಬಿಕ್ಕಟ್ಟಿನಿಂದ ಪಾಕಿಸ್ತಾನವನ್ನು ಹೊರತರುವಲ್ಲಿ ಎಲ್ಲಾ ಪಕ್ಷಗಳು ಒಟ್ಟಾಗಿ ಸಕಾರಾತ್ಮಕ ಪಾತ್ರವನ್ನು ವಹಿಸಬೇಕು.
ಎಲ್ಲರೂ ಸೌಹಾರ್ದತೆಯಿಂದ ಕುಳಿತು ಪಾಕಿಸ್ತಾನವನ್ನು ಸಂಕಷ್ಟದಿಂದ ಹೊರತರಬೇಕು ಎಂದು ಅವರು ಹೇಳಿದರು.

ಸಮ್ಮಿಶ್ರ ಸರ್ಕಾರದ ರಚನೆಗೆ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಆಸಿಫ್ ಅಲಿ ಜರ್ದಾರಿ, ಜಮಿಯತ್ ಉಲೇಮಾ-ಎ-ಇಸ್ಲಾಂ (ಎಫ್) ಮುಖ್ಯಸ್ಥ ಫಜ್ಲುರ್ ರೆಹಮಾನ್ ಮತ್ತು ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್‌ನ ಖಾಲಿದ್ ಮಕ್ಬೂಲ್ ಸಿದ್ದಿಕಿ ಅವರನ್ನು ಸಂಪರ್ಕಿಸಲು ತನ್ನ ಕಿರಿಯ ಸಹೋದರ ಮತ್ತು ಪಿಎಂಎಲ್-ಎನ್ ಅಧ್ಯಕ್ಷ ಶೆಹಬಾಜ್ ಷರೀಫ್‌ಗೆ ವಹಿಸಿದ್ದೇನೆ ಎಂದು ಷರೀಫ್ ಘೋಷಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com