'ನಾವು ಹಿಂದೂಗಳಿಗಿಂತ ಭಿನ್ನ.. 13 ಲಕ್ಷ ಸೈನಿಕರ ಕೈಯಲ್ಲೇ ಏನೂ ಮಾಡಲಾಗಲಿಲ್ಲ'; ಭಾರತ-ಹಿಂದೂ ಧರ್ಮದ ವಿರುದ್ಧ ವಿಷಕಾರಿದ ಪಾಕ್ ಸೇನಾ ಮುಖ್ಯಸ್ಥ

ಪಾಕಿಸ್ತಾನದ ಸೃಷ್ಟಿ ಅಷ್ಟೇನೂ ಸುಲಭವಾಗಿರಲಿಲ್ಲ. 1947 ರಲ್ಲಿ ವಿಭಜನೆಗೆ ಆಧಾರವಾಗಿದ್ದ ಎರಡು ರಾಷ್ಟ್ರಗಳ ಸಿದ್ಧಾಂತದ ಆಧಾರದ ಮೇಲೆ ಪಾಕಿಸ್ತಾನ ರಚನೆಯಾಗಿದೆ. ಇದಕ್ಕಾಗಿ ಸಾಕಷ್ಟು ತ್ಯಾಗ ಬಲಿದಾನಗಳಾಗಿವೆ. ನೀವು ನಿಮ್ಮ ಮಕ್ಕಳಿಗೆ ಈ ಕಥೆಗಳನ್ನು ಹೇಳಲೇಬೇಕು.
Pakistan Army Chief On Kashmir, Balochistan
ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಮುನೀರ್
Updated on

ನವದೆಹಲಿ: ನಾವು ಹಿಂದೂಗಳಿಗಿಂತ ಭಿನ್ನ ಎಂದು ಹೇಳುವ ಮೂಲಕ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತೆ ಭಾರತ ಮತ್ತು ಹಿಂದೂ ಧರ್ಮದ ವಿರುದ್ಧ ಕಿಡಿಕಾರಿದ್ದಾರೆ.

ವಿದೇಶಗಳಲ್ಲಿ ನೆಲೆಸಿರುವ ಪಾಕಿಸ್ತಾನಿಯರ ಕುರಿತ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜನರಲ್ ಮುನೀರ್, ಪಾಕಿಸ್ತಾನದ ಸೃಷ್ಟಿ ಅಷ್ಟೇನೂ ಸುಲಭವಾಗಿರಲಿಲ್ಲ. 1947 ರಲ್ಲಿ ವಿಭಜನೆಗೆ ಆಧಾರವಾಗಿದ್ದ ಎರಡು ರಾಷ್ಟ್ರಗಳ ಸಿದ್ಧಾಂತದ ಆಧಾರದ ಮೇಲೆ ಪಾಕಿಸ್ತಾನ ರಚನೆಯಾಗಿದೆ. ಇದಕ್ಕಾಗಿ ಸಾಕಷ್ಟು ತ್ಯಾಗ ಬಲಿದಾನಗಳಾಗಿವೆ.

ನೀವು ನಿಮ್ಮ ಮಕ್ಕಳಿಗೆ ಈ ಕಥೆಗಳನ್ನು ಹೇಳಲೇಬೇಕು. ಮೂರನೇ ತಲೆಮಾರಾಗಿರಲಿ, ನಾಲ್ಕನೇ ತಲೆಮಾರಾಗಿರಲಿ ಅಥವಾ ಐದನೇ ತಲೆಮಾರಾಗಿರಲಿ ಎಂದಿಗೂ ದುರ್ಬಲಗೊಳ್ಳಬಾರದು. ಅವರಿಗೆ ಪಾಕಿಸ್ತಾನ ಏನೆಂದು ಅವರು ತಿಳಿದಿರಬೇಕು ಎಂದರು.

ನಾವು ಹಿಂದೂಗಳಿಗಿಂತ ಭಿನ್ನರು

ನಮ್ಮ ಪೂರ್ವಜರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಹಿಂದೂಗಳಿಗಿಂತ ಭಿನ್ನರು ಎಂದೇ ಭಾವಿಸಿದ್ದರು. ನಮ್ಮ ಧರ್ಮ ಬೇರೆ, ಪದ್ಧತಿಗಳು, ಸಂಸ್ಕೃತಿಗಳೆಲ್ಲವೂ ಬೇರೆ ಬೇರೆ. ಇದು ಎರಡು ರಾಷ್ಟ್ರಗಳ ಅಡಿಪಾಯದ ಸಿದ್ಧಾಂತವಾಗಿತ್ತು. ನಾವು ಎರಡು ದೇಶಗಳು, ನಾವು ಒಂದೇ ದೇಶವಲ್ಲ. ಸ್ವಾತಂತ್ರ್ಯಕ್ಕೂ ಮುಂಚಿನ ವರ್ಷಗಳಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ರಾಜ್ಯವನ್ನು ಕೋರುವ ಚಳುವಳಿಗೆ ಎರಡು ರಾಷ್ಟ್ರಗಳ ಸಿದ್ಧಾಂತವು ಆಧಾರವಾಗಿತ್ತು.

ಈ ಚಳುವಳಿಯನ್ನು ಇತರರೊಂದಿಗೆ, ಪಾಕಿಸ್ತಾನದ ಮೊದಲ ಗವರ್ನರ್ ಜನರಲ್ ಆದ ಮುಹಮ್ಮದ್ ಅಲಿ ಜಿನ್ನಾ ನೇತೃತ್ವ ವಹಿಸಿದ್ದರು. ನಮ್ಮ ಪೂರ್ವಜರು ಈ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಅದನ್ನು ಹೇಗೆ ರಕ್ಷಿಸಬೇಕೆಂದು ನಮಗೆ ತಿಳಿದಿದೆ ಎಂದು ಹೇಳಿದ್ದಾರೆ.

Pakistan Army Chief On Kashmir, Balochistan
ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್ ವೈಮಾನಿಕ ದಾಳಿ; ವೈದ್ಯ ಸಾವು, ಒಂಬತ್ತು ಜನರಿಗೆ ಗಾಯ

13 ಲಕ್ಷ ಸೈನಿಕರು ಇರುವ ಭಾರತದಿಂದಲೇ ಪಾಕಿಸ್ತಾನವನ್ನೂ ಏನೂ ಮಾಡಲಾಗಲಿಲ್ಲ..

ಇದೇ ವೇಳೆ ಪಾಕಿಸ್ತಾನದ ಭಯೋತ್ಪಾದಕರ ಕುರಿತು ಮಾತನಾಡಿದ ಅವರು, ಕೇವಲ 1500 ಭಯೋತ್ಪಾದಕರು ದೇಶದ ಭವಿಷ್ಯವನ್ನು ಬದಲಾಯಿಸುತ್ತಾರೆ ಎಂದು ಪಾಕಿಸ್ತಾನದ ಶತ್ರುಗಳು ಭಾವಿಸುತ್ತಾರಾ? ನಾವು ಶೀಘ್ರದಲ್ಲೇ ಈ ಭಯೋತ್ಪಾದಕರ ಬೆನ್ನು ಮುರಿಯುತ್ತೇವೆ. 13 ಲಕ್ಷ ಜನರ ಭಾರತೀಯ ಸೇನೆಗೆ ನಮ್ಮನ್ನು ಹೆದರಿಸಲು ಸಾಧ್ಯವಾಗಲಿಲ್ಲ, ಇನ್ನು ಈ ಭಯೋತ್ಪಾದಕರು ಏನು ಮಾಡುತ್ತಾರೆ? ಎಂದು ವ್ಯಂಗ್ಯ ಮಾಡಿದರು.

ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ), ಬಲೂಚ್ ಲಿಬರೇಶನ್ ಫ್ರಂಟ್ (ಬಿಎಲ್‌ಎಫ್) ಮತ್ತು ಬಲೂಚ್ ರಿಪಬ್ಲಿಕನ್ ಆರ್ಮಿ (ಬಿಆರ್‌ಎ) ನಂತಹ ಸಂಘಟನೆಗಳನ್ನು ದೇಶಕ್ಕೆ ಬೆದರಿಕೆ ಎಂದು ಒಪ್ಪಿಕೊಳ್ಳಲು ಅವರು ನಿರಾಕರಿಸಿದರು ಮತ್ತು ಈ ಸಂಘಟನೆಗಳಿಗೆ ಶೀಘ್ರದಲ್ಲೇ ಸೂಕ್ತ ಉತ್ತರ ನೀಡಲಾಗುವುದು ಎಂದು ಹೇಳಿದರು.

ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು

ಇದೇ ವೇಳೆ ಮತ್ತೆ ಕಾಶ್ಮೀರ ವಿಚಾರ ಕೆದಕಿದ ಮುನೀರ್, 'ಕಾಶ್ಮೀರ ಇಸ್ಲಾಮಾಬಾದ್‌ನ "ಕಣ್ಣಿನ ರಕ್ತನಾಳ" ಮತ್ತು ಹಾಗೆಯೇ ಇರುತ್ತದೆ ಮತ್ತು ಪಾಕಿಸ್ತಾನ "ಅದನ್ನು ಎಂದಿಗೂ ಮರೆಯುವುದಿಲ್ಲ" ಎಂದರು.

ಅಂತೆಯೇ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ನಿಲುವು ಸ್ಪಷ್ಟವಾಗಿದ್ದು, 'ನಮ್ಮ ನಿಲುವು ಸಂಪೂರ್ಣವಾಗಿ ಸ್ಪಷ್ಟವಾಗಿದೆ, ಅದು ನಮ್ಮ ಕತ್ತಿನ ರಕ್ತನಾಳವಾಗಿತ್ತು, ಅದು ನಮ್ಮ ಕತ್ತಿನ ರಕ್ತನಾಳವಾಗಿರುತ್ತದೆ, ನಾವು ಅದನ್ನು ಮರೆಯುವುದಿಲ್ಲ. ನಾವು ನಮ್ಮ ಕಾಶ್ಮೀರಿ ಸಹೋದರರನ್ನು ಅವರ ವೀರೋಚಿತ ಹೋರಾಟದಲ್ಲಿ ಬಿಡುವುದಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com