
ಭಾರತೀಯ ಸರಕುಗಳ ಮೇಲಿನ ಸುಂಕವನ್ನು ತೀವ್ರವಾಗಿ ಹೆಚ್ಚಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಯನ್ನು ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲಿ ಟೀಕಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಕ್ರಮದಿಂದಾಗಿ ಪ್ರಮುಖ ಕಾರ್ಯತಂತ್ರದ ಪಾಲುದಾರಿಕೆಗೆ ಹಾನಿ ಮಾಡುವ ಅಪಾಯವಿದೆ ಎಂದು (Nikki Haley) ಎಚ್ಚರಿಸಿದ್ದಾರೆ.
ಮಾಜಿ ವಿಶ್ವಸಂಸ್ಥೆಯ ರಾಯಭಾರಿ ಚೀನಾಕ್ಕೆ ಸುಂಕ ವಿನಾಯಿತಿ ನೀಡುವಾಗ ಭಾರತವನ್ನು ದೂರವಿಡದಂತೆ ಶ್ವೇತಭವನವನ್ನು ಒತ್ತಾಯಿಸಿದ್ದಾರೆ. ಚೀನಾವನ್ನು ಅವರು ಶತ್ರು ಮತ್ತು ರಷ್ಯಾ ಮತ್ತು ಇರಾನಿನ ತೈಲದ ಪ್ರಮುಖ ಖರೀದಿದಾರ ಎಂದು ಹೇಳಿದ್ದಾರೆ.
ಭಾರತದ ಬಗ್ಗೆ ಡೊನಾಲ್ಡ್ ಟ್ರಂಪ್ ನಿಲುವು ತೀವ್ರಗೊಳ್ಳುತ್ತಿರುವುದನ್ನು ಕಠಿಣವಾಗಿ ಟೀಕಿಸಿರುವ ನಿಕ್ಕಿ ಹ್ಯಾಲಿ "ಭಾರತ ರಷ್ಯಾದಿಂದ ತೈಲವನ್ನು ಖರೀದಿಸಬಾರದು. ಆದರೆ ರಷ್ಯಾ ಮತ್ತು ಇರಾನಿನ ತೈಲದ ಪ್ರಮುಖ ಖರೀದಿದಾರ ಮತ್ತು ಎದುರಾಳಿ ಚೀನಾಕ್ಕೆ 90 ದಿನಗಳ ಸುಂಕ ವಿರಾಮ ಸಿಕ್ಕಿತು". ಎಂದು ಎಕ್ಸ್ ಪೋಸ್ಟ್ ಹಾಕಿದ್ದಾರೆ.
ಚೀನಾವನ್ನು ದ್ವೇಷಿಸುವ ಮತ್ತು ಭಾರತದ ಕಾರ್ಯತಂತ್ರದ ಏರಿಕೆಯನ್ನು ಬೆಂಬಲಿಸುವ ನಿಕ್ಕಿ ಹ್ಯಾಲಿ, "ಚೀನಾಕ್ಕೆ ಅವಕಾಶ ನೀಡಬೇಡಿ ಮತ್ತು ಭಾರತದಂತಹ ಬಲವಾದ ಮಿತ್ರರಾಷ್ಟ್ರದೊಂದಿಗೆ ಸಂಬಂಧವನ್ನು ಮುರಿಯಬೇಡಿ" ಎಂದು ಟ್ರಂಪ್ ಗೆ ಸಲಹೆ ನೀಡಿದ್ದಾರೆ.
ಭಾರತಕ್ಕೆ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಬೆದರಿಕೆ ಎಚ್ಚರಿಕೆ
24 ಗಂಟೆಗಳ ಒಳಗೆ ಭಾರತೀಯ ಸರಕುಗಳ ಮೇಲಿನ ಸುಂಕವನ್ನು "ಗಣನೀಯವಾಗಿ" ಹೆಚ್ಚಿಸಲು ಉದ್ದೇಶಿಸಿದ್ದೇನೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ ನಂತರ ನಿಕ್ಕಿ ಹ್ಯಾಲಿ ಅವರಿಂದ ಹೇಳಿಕೆಗಳು ಬಂದಿವೆ.
ಭಾರತ ರಷ್ಯಾದ ತೈಲವನ್ನು ನಿರಂತರವಾಗಿ ಖರೀದಿಸುವುದನ್ನು ಉಲ್ಲೇಖಿಸಿ. ನವದೆಹಲಿ "ನಮ್ಮೊಂದಿಗೆ ಬಹಳಷ್ಟು ವ್ಯವಹಾರ" ಮಾಡುತ್ತಿದ್ದರೆ, ಅಮೆರಿಕ "ಭಾರತದೊಂದಿಗೆ ಕಡಿಮೆ ವ್ಯವಹಾರ" ಮಾಡುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇದಕ್ಕೂ ಮೊದಲು, ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಹೊರತಾಗಿಯೂ, ಭಾರತವು "ಬೃಹತ್ ಪ್ರಮಾಣದ ರಷ್ಯಾದ ತೈಲ"ವನ್ನು ಖರೀದಿಸಿ ಮುಕ್ತ ಮಾರುಕಟ್ಟೆಯಲ್ಲಿ ಲಾಭಕ್ಕಾಗಿ ಮರುಮಾರಾಟ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷರು ಆರೋಪಿಸಿದ್ದರು.
Advertisement